ವೈಶ್ವಿಕ ಹಿಂದೂ ರಾಷ್ಟ್ರ ಉತ್ಸವದ ಐದನೇ ದಿನ (ಜೂನ್ 28)
ಬೋಧಪ್ರದ ಸತ್ರ : ಹಿಂದೂ ರಾಷ್ಟ್ರಕ್ಕಾಗಿ ಸೈದ್ಧಾಂತಿಕ ಚಳುವಳಿ
ವಿದ್ಯಾಧಿರಾಜ ಸಭಾಂಗಣ – ದೇವಾಲಯವು ಸಂಸ್ಕಾರ, ಸಂಸ್ಕೃತಿ ಮತ್ತು ಭದ್ರತೆಯ ಮುಖ್ಯ ಕೇಂದ್ರವಾಗಿದೆ. ಕಾಲಾಂತರದಲ್ಲಿ ಶಿಥಿಲಗೊಂಡಿರುವ ದೇವಾಲಯಗಳನ್ನು ಪುನರ್ ನಿರ್ಮಿಸಿ ದುರಸ್ತಿಗೊಳಿಸಬೇಕು. ಈ ಪುನರ್ನಿರ್ಮಾಣ ಕಾರ್ಯವನ್ನು ನಿರ್ವಹಿಸುವಾಗ, ಪ್ರಾಚೀನ ದೇವಾಲಯಗಳ ರಚನೆಯನ್ನು ಸಂರಕ್ಷಿಸುವುದು ಅವಶ್ಯಕವಾಗಿದೆ. ದೇವಾಲಯದ ಶಿಖರ, ಗರ್ಭಗುಡಿ, ರಂಗಮಂಟಪ ಮತ್ತು ಸಭಾಂಗಣ ಈ ರೀತಿಯಲ್ಲಿ ರಚನೆ ಒಳಗೊಂಡಿರುತ್ತದೆ. ಪ್ರತಿ ದೇವತೆಯ ದೇವಾಲಯದ ವಿನ್ಯಾಸದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಭಾರತದ ಮೂಲೆ ಮೂಲೆಗಳಲ್ಲಿ ಲಕ್ಷಗಟ್ಟಲೆ ದೇವಾಲಯಗಳಿವೆ. ದೇವಾಲಯಗಳು ನಮ್ಮ ಸಂಸ್ಕೃತಿಯನ್ನು ಉಳಿಸಿವೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಈ ಸಂಸ್ಕೃತಿಯನ್ನು ಒಪ್ಪಿಕೊಳ್ಳಲೇಬೇಕು ಎಂದು ಮಹಾರಾಷ್ಟ್ರದ ಮುಂಬಯಿನಲ್ಲಿರುವ ಮಹಾಜನ್ ಎನ್.ಜಿ.ಒ. ಟ್ರಸ್ಟಿ ಗಿರೀಶ್ ಶಾ ಇಲ್ಲಿ ಮಾತನಾಡುತ್ತಾ ಹೇಳಿದರು. ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ಐದನೇ ದಿನದಂದು ಅವರು ‘ದೇವಾಲಯ ನಿರ್ಮಾಣ ಯೋಜನೆ’ ವಿಷಯದ ಕುರಿತು ಮಾತನಾಡುತ್ತಿದ್ದರು.