ಎಲ್ಲಿ ಧರ್ಮವಿದೆಯೋ ಅಲ್ಲಿ ವಿಜಯವಿದೆ! – ಪೂ. ಡಾ. ಶಿವನಾರಾಯಣ ಸೇನ , ಜಂಟಿ ಕಾರ್ಯದರ್ಶಿ, ಶಾಸ್ತ್ರ ಧರ್ಮ ಪ್ರಚಾರ ಸಭೆ, ಕೋಲಕಾತಾ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನ (ಜೂನ್ 27) – ಉಪನ್ಯಾಸ ಅಧಿವೇಶನ

ಹಿಂದೂ ರಾಷ್ಟ್ರಕ್ಕಾಗಿ ಸೈದ್ಧಾಂತಿಕ ಚಳುವಳಿ

ಪೂ. ಡಾ. ಶಿವನಾರಾಯಣ ಸೇನ

ರಾಮನಾಥಿ (ಗೋವಾ) – ಬಂಗಾಳದ ಸಂತ ಪಂಡಿತ ಉಪೇಂದ್ರ ಮೋಹನ ಅವರ ಆರಂಭಿಕ ಜೀವನವು ಅತ್ಯಂತ ದುಃಖಮಯವಾಗಿತ್ತು. ಮದುವೆಯ ನಂತರ ಹೆಂಡತಿಯ ಕೋರಿಕೆಯಂತೆ ಅವರು ಚಂಡಿಪಾಠ ಮಾಡಿದರು.` ಯಾರು ಚಂಡಿಪಾಠ ಮಾಡುತ್ತಾರೆಯೋ, ಅವರ ಎಲ್ಲಾ ರೀತಿಯ ದುಃಖಗಳನ್ನು ನಾನು ದೂರಗೊಳಿಸುತ್ತೇನೆ’, ಎಂದು ಚಂಡಿಪಾಠದಲ್ಲಿ ದೇವಿ ಹೇಳಿದ್ದಾಳೆ. ಅದರ ಅನುಭೂತಿಯನ್ನು ಪಡೆಯಲು ಅವರು ಚಂಡಿಪಾಠವನ್ನು ಮುಂದುವರಿಸಿದರು.

ಒಂದು ವರ್ಷದ ಬಳಿಕ ಅವರಿಗೆ ಆ ವಿಷಯದಲ್ಲಿ ಅನುಭೂತಿ ಬಂದಿತು.

ಅವರ ಅರ್ಧಕ್ಕೆ ನಿಂತಿದ್ದ ಬಹಳಷ್ಟು ಕೆಲಸಗಳು ಪೂರ್ಣಗೊಂಡವು. ಅವರು ಚಂಡಿಪಾಠದ ಪಠಣವನ್ನು ಅಖಂಡವಾಗಿ ಮುಂದುವರಿಸಿದರು. ಎರಡೂವರೆ ವರ್ಷದ ಬಳಿಕ ಪ್ರತ್ಯಕ್ಷ ಭಗವಂತನು ಅವರೆದುರಿಗೆ ಪ್ರಕಟಗೊಂಡು ಅವರಿಗೆ `ನನ್ನೊಂದಿಗೆ ನಡೆ, ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ’’ಎಂದು ಹೇಳಿದರು. ಅವರು ದೇವರೊಂದಿಗೆ ಹೋಗಲು ನಿರಾಕರಿಸಿದರು. ಅವರು ದೇವರಿಗೆ, ` ನೀವು ಎಷ್ಟು ದಯಾಳುಗಳಾಗಿದ್ದೀರಿ, ಎನ್ನುವುದನ್ನು ಇತರರಿಗೆ ಹೇಳದೇ ನಾನು ನಿಮ್ಮೊಂದಿಗೆ ಬರುವುದಿಲ್ಲ. ಜಗತ್ತು ದೇವರನ್ನು ಮರೆತಿದೆ. ಆ ವಿಷಯದಲ್ಲಿ ದೇವರ ಮನಸ್ಸಿನಲ್ಲಿ ದುಃಖವಿದೆ. ದೇವರ ಆ ದುಃಖವನ್ನು ದೂರಗೊಳಿಸದೇ ನಾನು ಬರುವುದಿಲ್ಲ.’’ಎಂದು ಹೇಳಿದರು. ಪಂಡಿತ ಉಪೇಂದ್ರ ಮೋಹನಜಿಯವರ ಜೀವನದ ಈ ಪ್ರಸಂಗ ಕೋಲಕಾತಾ, ಬಂಗಾಳದ ಶಾಸ್ತ್ರ ಧರ್ಮ ಪ್ರಚಾರ ಸಭೆಯ ಜಂಟಿ ಕಾರ್ಯದರ್ಶಿ, ಪೂ. ಡಾ. ಶಿಬನಾರಾಯಣ ಸೇನ ಇವರು ಇಲ್ಲಿ ಮಾತನಾಡುವಾಗ ಹೇಳಿದರು. `ಪಂಡಿತ ಉಪೇಂದ್ರ ಮೋಹನಜಿಯವರ ಹಿಂದೂ ರಾಷ್ಟ್ರಕ್ಕೆ ಸಂಬಂಧಿಸಿದ ವಿಚಾರ’ ಈ ವಿಷಯದ ಕುರಿತು ಮಾತನಾಡುವಾಗ ಅವರು ಪಂಡಿತಜೀಯ ಜೀವನದ ಪುಟವನ್ನು ಬಹಿರಂಗಗೊಳಿಸಿದರು. ` ಧರ್ಮವಿರುವಲ್ಲಿ ವಿಜಯವಿದೆ’, ಎನ್ನುವುದರ ಮೇಲೆ ಅವರ ಶ್ರದ್ಧೆಯಿತ್ತು, ಎಂದು ಪೂ. ಡಾ. ಶಿವನಾರಾಯಣ ಸೇನ ಹೇಳಿದರು.

ಪೂ. ಡಾ.ಶಿಬನಾರಾಯಣ ಸೇನ ಮಾತನಾಡಿ,

ಪಂಡಿತ ಉಪೇಂದ್ರ ಮೋಹನಜಿಯವರು ಹೇಳುತ್ತಿದ್ದರು, ` 500 ವರ್ಷಗಳ ಕಾಲ ಮುಸಲ್ಮಾನರು ಭಾರತವನ್ನು ಲೂಟಿ ಮಾಡಿದರು, ದೇವಸ್ಥಾನಗಳನ್ನು ಧ್ವಂಸಗೊಳಿಸಿದರು; ಆದರೆ ಹಿಂದೂಗಳ ವಿಶ್ವಾಸವನ್ನು ಮಾತ್ರ ಮುರಿಯಲು ಸಾಧ್ಯವಾಗಲಿಲ್ಲ. ದಾಳಿಕೋರರು ಭಾರತವನ್ನು ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡಿದರು ಮತ್ತು ಆ ಸಮಯದಲ್ಲಿ ಭಾರತದ ಆರ್ಥಿಕ ಸ್ಥಿತಿ ಜಗತ್ತಿನಲ್ಲಿಯೇ ಶ್ರೀಮಂತ(ಸುದೃಢ)ವಾಗಿತ್ತು. ಬ್ರಿಟಿಷರು 1936 ರ ಮಧ್ಯದಲ್ಲಿ ದೇಶದಲ್ಲಿ ಸಂಸ್ಕೃತ ಬೋಧನೆಯನ್ನು ನಿಷೇಧಿಸಿದರು. ಪಂಡಿತ್ ಉಪೇಂದ್ರ ಮೋಹನ್‌ಜಿಯವರು ಅದನ್ನು ವಿರೋಧಿಸುವಾಗ ‘ಸಂಸ್ಕೃತ ದ್ರೋಹವು ಪಾಪವಾಗಿದೆ’, ಎಂದು ಬ್ರಿಟಿಷರಿಗೆ ಹೇಳಿದರು. ಪಂಡಿತ ಉಪೇಂದ್ರ ಮೋಹನಜಿ ಜಿಲ್ಲಾಧಿಕಾರಿಯಾದರು. ಈ ಸರಕಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಅವರು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ನೈತಿಕ ಮೌಲ್ಯಗಳನ್ನು ರಕ್ಷಿಸಲು ಪ್ರಯತ್ನಿಸಿದರು. ಈ ಕಾರಣಕ್ಕಾಗಿ ಅವರು ತಮ್ಮ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಜರ್ಮನಿ ಮಾಡಿದ ನರಮೇಧವನ್ನು ಅವರು ನಿಷೇಧಿಸಿದರು. ಜರ್ಮನಿ ಮತ್ತು ಜಪಾನ ಮಾಡಿರುವ ಅಧರ್ಮದ ಫಲವನ್ನು ಅವರು ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದ್ದರು ಮತ್ತು ಮುಂದೆ ಹಾಗೆಯೇ ನಡೆಯಿತು ಎಂದು ಪೂ. ಡಾ. ಶಿವನಾರಾಯಣ ಸೇನ ಇವರು ಕೊನೆಯಲ್ಲಿ ಹೇಳಿದರು.