ದೇವಸ್ಥಾನಗಳಿಂದ ಹಿಂದೂಗಳಿಗೆ ಧರ್ಮಶಿಕ್ಷಣ ಸಿಗಬೇಕು ! – ಪೂ. ಪ್ರಾ. ಪವನ ಸಿನ್ಹಾ ಗುರೂಜಿ, ಸಂಸ್ಥಾಪಕರು, ಪಾವನ ಚಿಂತನ ಧಾರಾ ಆಶ್ರಮ, ಗಾಜಿಯಾಬಾದ, ಉತ್ತರಪ್ರದೇಶ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನದ ಅಧಿವೇಶನ: ದೇವಾಲಯ ಸಂಸ್ಕೃತಿಯ ಪುನರುಜ್ಜೀವನ

ಪೂ. ಪ್ರಾ. ಪವನ ಸಿನ್ಹಾ ಗುರೂಜಿ

ವಿದ್ಯಾಧಿರಾಜ ಸಭಾಂಗಣ – ದೇವಸ್ಥಾನದಲ್ಲಿರುವ ಅರ್ಚಕರ ಧರ್ಮ ಕೇವಲ ಜನರಿಗೆ ತಿಲಕ ಹಚ್ಚುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಹಿಂದೂಗಳಿಗೆ ಧರ್ಮಶಿಕ್ಷಣವನ್ನು ಕಲಿಸಬೇಕು. ಅದರಿಂದ ಹಿಂದೂಗಳ ಧರ್ಮಾಭಿಮಾನ ಹೆಚ್ಚಾಗಿ ಅವರ ಮನೋಬಲ ಹೆಚ್ಚಾಗುವುದು ಮತ್ತು ಎಲ್ಲರೂ ಸಂಘಟಿತರಾಗುವರು. ಸದ್ಯದ ಕಾಲದಲ್ಲಿ ಹಿಂದೂ ಧರ್ಮದ ವಿಷಯದಲ್ಲಿ ಜಾತ್ಯಾತೀತವಾದಿಗಳಿಂದ(?) ಅಪಪ್ರಚಾರ ನಡೆಯುತ್ತಿದೆ. ಆ ಅಪಪ್ರಚಾರವನ್ನು ದೂರಗೊಳಿಸಲು ಪುರೋಹಿತರಿಂದ ಶಾಸ್ತ್ರಗಳ ಪ್ರಾಮಾಣಿಕ ಜ್ಞಾನ ಸಿಗುವುದು ಆವಶ್ಯಕವಿದೆ, ಎಂದು ಪಾವನ ಚಿಂತನಧಾನಾ ಆಶ್ರಮದ ಸಂಸ್ಥಾಪಕರಾದ ಪೂ. ಪ್ರಾ. ಪವನ ಸಿನ್ಹಾ ಗುರೂಜಿಯವರು , ` ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಐದನೇ ದಿನದಂದು ಮಾರ್ಗದರ್ಶನ ಮಾಡಿದರು. ಅವರು ` ದೇವಸ್ಥಾನ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಆವಶ್ಯಕ ಪ್ರಯತ್ನ’ ಈ ವಿಷಯದ ಕುರಿತು ಮಾತನಾಡುತ್ತಿದ್ದರು.

ದೇವಸ್ಥಾನವನ್ನು ಸ್ವಚ್ಛಗೊಳಿಸುವುದು ಆವಶ್ಯಕ

ಪೂ. ಪವನ ಸಿನ್ಹಾ ಗುರೂಜಿ ಮಾತನಾಡಿ “ದೇವಸ್ಥಾನದ ವೈಭವ ನಾಶವಾಗದಂತೆ ಪ್ರಯತ್ನಿಸುವುದು ಅವಶ್ಯಕವಾಗಿದೆ. ದೇವಸ್ಥಾನಗಳಿಂದಾಗಿ ಭಕ್ತರ ಜೀವನದಲ್ಲಿ ಬದಲಾವಣೆಗಳಾಗುತ್ತವೆ. ಅಲ್ಲಿಗೆ ಹೋಗುವಾಗ ಕೆಲವು ನಿಯಮಗಳಿರಬೇಕು. ನಾವು ದೇವಸ್ಥಾನಕ್ಕೆ ಹೋಗಿ, ಪಾಪದ ಗಂಟು ಮತ್ತು ಅಪೇಕ್ಷೆಯನ್ನು ಬಿಟ್ಟು ಬರುತ್ತೇವೆ. ಸಧ್ಯಕ್ಕೆ ಹಿಂದೂಗಳು ಅಲ್ಲಿಗೆ ಹೋದ ಬಳಿಕ ಅಸ್ವಚ್ಛತೆಯನ್ನೂ ಬಿಟ್ಟು ಬರುತ್ತಾರೆ. ದೇವಸ್ಥಾನದಲ್ಲಿ ಸ್ವಚ್ಛತೆಯ ಸೇವೆಯನ್ನು ಮಾಡದೇ ವ್ಯಕ್ತಿಯ ಚೈತನ್ಯ ಉನ್ನತವಾಗಲು ಸಾಧ್ಯವಿಲ್ಲ. ಆದುದರಿಂದ ನಾವೇ ಸ್ವತಃ ದೇವಸ್ಥಾನಗಳ ಸ್ವಚ್ಛತೆಯನ್ನು ಮಾಡಬೇಕು.’’

ಸಮರ್ಪಕವಾದ ಆಡಳಿತ ನಿರ್ವಹಣೆ ಹೊಂದಿರುವ ಆಶ್ರಮದ ನಿರ್ಮಾಣವಾಗುವುದೂ ಅವಶ್ಯಕ !

ದೇವಸ್ಥಾನದೊಂದಿಗೆ ಆಶ್ರಮ ವ್ಯವಸ್ಥೆಗಳನ್ನು ಜೊತೆಯಲ್ಲಿಯೇ ತೆಗೆದುಕೊಂಡು ಮುನ್ನಡೆಯಬೇಕು. ಆಶ್ರಮ ವ್ಯವಸ್ಥೆಯಲ್ಲಿ ಚಿಂತನೆಗಳನ್ನು ಪರಿಪಕ್ವಗೊಳಿಸಲಾಗುತ್ತದೆ. ಅಲ್ಲಿ ವ್ಯಷ್ಟಿ ಮತ್ತು ಸಮಷ್ಟಿಯ ಮಿಲನವಾಗುತ್ತದೆ. ಆಶ್ರಮದಲ್ಲಿ ಹಸಿ ಮಣ್ಣಿಗೆ ಆಕಾರ ನೀಡಿ ಬೆಂದ ಮಡಕೆಯನ್ನು ತಯಾರಿಸಲಾಗುತ್ತದೆ. ಅಲ್ಲಿ ಆಧ್ಯಾತ್ಮಿಕ ಪ್ರಗತಿ ಮತ್ತು ಶಿಕ್ಷಣವನ್ನು ಪಡೆಯಬಹುದು. ಸಮಾಜದಲ್ಲಿ ಹಾಹಾಕಾರ ಹರಡಿದ್ದಾಗ ಆಚಾರ್ಯರು, ಸಂತರು ಜನರ ನೈತಿಕ ಸ್ಥೈರ್ಯವನ್ನು ಸ್ಥಿರವಾಗಿಟ್ಟಿದ್ದರು. ಇಂದು ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಮರ್ಪಕ ಆಡಳಿತ ಹೊಂದಿರುವ ಆಶ್ರಮಗಳ ನಿರ್ಮಾಣ ಅಗತ್ಯವಿದೆ ಎಂದು ಪೂ. ಪ್ರಾ. ಪವನ ಸಿನ್ಹಾ ಗುರೂಜಿಯವರು ಹೇಳಿದರು.