ಹಿಂದು ಧರ್ಮಾಚರಣೆಯ ಹಿಂದೆ ಆಧ್ಯಾತ್ಮಿಕತೆಯೊಂದಿಗೆ ವೈಜ್ಞಾನಿಕ ಚಿಂತನ ! – ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಬಾಳೆಹೊನ್ನೂರು, ಖಾಸಾ ಶಾಖಾ ಮಠ, ಶ್ರೀಕ್ಷೇತ್ರ ಸಿದ್ಧರಾಮಬೆಟ್ಟ, ತುಮಕೂರು

ವೈಶ್ವಿಕ ಹಿಂದು ರಾಷ್ಟ್ರ ಅಧಿವೇಶನದ ನಾಲ್ಕನೇ ದಿನ (೨೭ ಜೂನ್)

ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ

ವಿದ್ಯಾಧಿರಾಜ ಸಭಾಂಗಣ – ಸನಾತನ ಧರ್ಮದಿಂದಲೇ ಶಾಂತಿ ಸಿಗುತ್ತದೆ, ಇದರ ಮೇಲೆ ವಿದೇಶದ ಜನರಿಗೂ ನಂಬಿಕೆ ಇದೆ. ಈ ಸನಾತನ ಹಿಂದು ಧರ್ಮವನ್ನು ನಾಶಗೊಳಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಅದನ್ನು ತಡೆಗಟ್ಟಲು ಎಲ್ಲ ಸಂತರು, ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಹಿಂದು ಧರ್ಮಪ್ರೇಮಿಗಳಿಗೆ ಪ್ರಯತ್ನಿಸಬೇಕಾಗಬಹುದು. ಅಂದರೆ ಮಾತ್ರ ನಮ್ಮ ಧರ್ಮವು ಉಳಿಯಲಿದೆ. ಹಿಂದು ಧರ್ಮಾಚರಣೆಯ ಹಿಂದೆ ಆಧ್ಯಾತ್ಮಿಕತೆಯೊಂದಿಗೆ ವೈಜ್ಞಾನಿಕ ಚಿಂತನವೂ ಇದೆ.

ಇತರ ಧರ್ಮಿಯರು ತಮ್ಮ ಧರ್ಮದ ಬಗ್ಗೆ ಪ್ರಶ್ನೆಗಳನ್ನು ಕೇಳುವುದಿಲ್ಲ; ಆದರೆ ಹಿಂದೂಗಳು ಧರ್ಮಾಚರಣೆ ಮಾಡುವ ಮೊದಲು ಪ್ರಶ್ನೆ ಕೇಳುತ್ತಾರೆ. ಆದುದರಿಂದ ನಮ್ಮ ಹಿಂದೂಗಳಿಗೆ ಧರ್ಮಾಚರಣೆಯ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಹೇಳುವುದು ಆವಶ್ಯಕವಾಗಿದೆ. ಹಿಂದು ರಾಷ್ಟ್ರದ ಸ್ಥಾಪನೆಯಲ್ಲಿ ಎಲ್ಲರಿಗೂ ಯಶ ಪ್ರಾಪ್ತವಾಗಲಿ, ಎಂಬ ಆಶೀರ್ವಚನವನ್ನು ತುಮಕೂರಿನ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮಹಾರಾಜರು ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದಲ್ಲಿ’ ನೀಡಿದರು.