ಕಾಶ್ಮೀರದಲ್ಲಿ ಮತಾಂಧರು ಧ್ವಂಸಗೊಳಿಸಿದ ಕೆಲವು ದೇವಸ್ಥಾನಗಳನ್ನು ಸೇನೆಯಿಂದ ಪುನರ್ನಿಮಿಸಲಾಗುತ್ತಿದೆ ! – ಮೇಜರ್ ಸರಸ್ ತ್ರಿಪಾಠಿ

ವೈಶ್ವಿಕ ಹಿಂದು ರಾಷ್ಟ್ರ ಅಧಿವೇಶನದ ನಾಲ್ಕನೇ ದಿನ (೨೭ ಜೂನ್) : ರಾಷ್ಟ್ರ, ಧರ್ಮ, ಸಂಸ್ಕೃತಿಯ ರಕ್ಷಣೆ

ಮೇಜರ್ ಸರಸ್ ತ್ರಿಪಾಠಿ

ರಾಮನಾಥಿ, ಗೋವಾ – ಒಮ್ಮೆ ಅಟಲಬಿಹಾರಿ ವಾಜಪೇಯಿ ಇವರ ಬಳಿ ಪಾಕಿಸ್ತಾನದ ಓರ್ವ ಅಧಿಕಾರಿ ಬಂದು ಕಾಶ್ಮೀರದ ನಕಾಶೆಯನ್ನು ನೋಡಿ ಅವರಿಗೆ, ‘ಈ ಟೊಪ್ಪಿಗೆಯನ್ನು ನೀವು ತೆಗೆದು ಹಾಕಿ’, ಎಂದು ಹೇಳಿದನು. ಆ ಸಮಯದಲ್ಲಿ ಅವರು ಅವನಿಗೆ, “ಇದು ಟೊಪ್ಪಿಗೆ ಅಲ್ಲ, ಅದು ನಮ್ಮ ತಲೆಯಾಗಿದೆ ಮತ್ತು ತಲೆಯನ್ನು ಯಾರೂ ತೆಗೆಯುವುದಿಲ್ಲ”, ಎಂದು ಉತ್ತರಿಸಿದರು. ಕಾಶ್ಮೀರಕ್ಕೆ ೮೫೦೦ ವರ್ಷಗಳಿಗಿಂತ ಹಿಂದಿನಿಂದಲೂ ಇತಿಹಾಸವಿದೆ. ಋಷಿ ಕಶ್ಯಪರ ಈ ನಗರ ಕೆಲವು ನೂರಾರು ವರ್ಷಗಳ ಹಿಂದೆ ಭಾರತದ ಶಿಕ್ಷಣದ ತವರುಮನೆಯಾಗಿತ್ತು. ಇಲ್ಲಿನ ಇಂದಿನ ಝೆಲಮ್ ಅಂದರೆ ವಿತಸ್ತಾ ನದಿ ಅಂದರೆ ಸಾಕ್ಷಾತ್ ಪಾರ್ವತಿದೇವಿಯ ರೂಪವಾಗಿದೆ. ಶಿವನು ಪಾರ್ವತಿಗೆ ಆಜ್ಞೆ ಮಾಡಿ ಅಲ್ಲಿಗೆ ಕಳುಹಿಸಿದ್ದಾನೆ.

೫೦೦ ವರ್ಷಗಳ ಕಾಲ ಕಾಶ್ಮೀರದ ಮೇಲೆ ದಾಳಿಗಳಾದವು. ಮುಸಲ್ಮಾನ್ ಆಡಳಿತಗಾರರು ಇಲ್ಲಿನ ಹಿಂದೂಗಳ ಮೇಲೆ ಅತ್ಯಂತ ಕ್ರೂರ ಬಂಧನಗಳನ್ನು ಹೇರಿದರು. ಆದುರಿಂದ ಹಿಂದೂ ವಂಶ ನಾಶವಾಯಿತು. ಇಂದಿನವರೆಗೆ ೭ ಬಾರಿ ಕಾಶ್ಮೀರಿ ಜನರಿಗೆ ಕಾಶ್ಮೀರದಿಂದ ಸಂಪೂರ್ಣವಾಗಿ ಪಲಾಯನಗೈಯಬೇಕಾಯಿತು. ಮುಸ್ಲಿಂ ಆಡಳಿತಗಾರರು ಇಲ್ಲಿನ ಮಾರ್ತಂಡ ಮಂದಿರ ಈ ಸೂರ್ಯಮಂದಿರ ಸಹಿತ ನೂರಾರು ದೇವಸ್ಥಾನಗಳನ್ನು ನಾಶ ಮಾಡಿದರು. ಕಳೆದ ಕೆಲವು ದಿನಗಳಲ್ಲಿ ಸೇನೆಯು ಇಲ್ಲಿನ ಕೆಲವು ಚಿಕ್ಕ ದೇವಸ್ಥಾನಗಳನ್ನು ಪುನರ್ನಿಮಾಣ ಮಾಡಲು ಪ್ರಯತ್ನಿಸಿದೆ, ಎಂದು ಉತ್ತರಪ್ರದೇಶದ ಪ್ರಜ್ಞಾ ಮಠ ಪಬ್ಲಿಕೇಶನ್‌ನ ಲೇಖಕ ಮತ್ತು ಪ್ರಕಾಶಕರಾದ ಮೇಜರ್ ಸರಸ್ ತ್ರಿಪಾಠಿ ಇವರು ಮಾಹಿತಿ ನೀಡಿದರು. ಜೂನ್ 27 ರಂದು ವೈಶ್ವಿಕ ಹಿಂದು ರಾಷ್ಟ್ರ ಅಧಿವೇಶನದ ‘ರಾಷ್ಟ್ರ, ಧರ್ಮ, ಸಂಸ್ಕೃತಿ ರಕ್ಷಣೆ’ ಈ ಸತ್ರದಲ್ಲಿ ‘ಸಾಂಸ್ಕೃತಿಕ ಗುರುತಿನ ರಕ್ಷಣೆಯಲ್ಲಿ ಸೇನೆಯ ನಿಲುವು’ ಈ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.