ಕಾನೂನುಗಳನ್ನು ನಿರ್ಮಿಸಲು ಹಲವು ದೇಶಗಳು ಮನುಸ್ಮೃತಿಯನ್ನು ಉಲ್ಲೇಖಿಸಿವೆ ! – ಭಾರತಾಚಾರ್ಯ ಪೂ. ಪ್ರಾ. ಸು.ಗ. ಶೆವಡೆ, ರಾಷ್ಟ್ರೀಯ ವಾಗ್ಮಿ ಮತ್ತು ಕೀರ್ತನಕರ, ಮುಂಬಯಿ, ಮಹಾರಾಷ್ಟ್ರ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನ (ಜೂನ್ 27)

ವಿಶ್ವವು ಶಾಶ್ವತವಾಗಿದೆ ಮತ್ತು ಈ ವಿಶ್ವದ ಅಧಿಪತಿ ಈಶ್ವರನಾಗಿದ್ದಾನೆ. ಈ ವಿಶ್ವದ ನಿರ್ವಹಣೆಯು ವೇದಗಳ ಪ್ರಕಾರ ನಡೆಯುತ್ತಿದೆ. ಅನ್ಯಾಯ ಮಾಡುವವನು ನರಕಯಾತನೆ ಅನುಭವಿಸಬೇಕು, ಸದಾಚಾರದಿಂದ ನಡೆದುಕೊಳ್ಳುವವನಿಗೆ ಒಳ್ಳೆಯ ಫಲ ಸಿಗುತ್ತದೆ ಎಂಬುದೇ ವಿಶ್ವದ ವ್ಯವಸ್ಥೆಯಾಗಿದೆ. ದೇವರಲ್ಲಿ ನಂಬಿಕೆಯಿಲ್ಲದವರು ಇದರ ಮೇಲೆ ವಿಶ್ವಾಸ ಇಲ್ಲ. ಧರ್ಮವನ್ನು ಅರ್ಥಮಾಡಿಕೊಳ್ಳಲು ದೇವರು ವೇದಗಳನ್ನು ಸೃಷ್ಟಿಸಿದನು. ಚಿನ್ನ ಹಳೆಯದಾಯಿತು; ಎಂದು ಅದರ ಮೌಲ್ಯ ಕಡಿಮೆಯಾಗುವುದಿಲ್ಲ. ಅದೇ ರೀತಿ ವೇದಗಳು ಪ್ರಾಚೀನವಾಗಿದ್ದರೂ, ಅವುಗಳ ಜ್ಞಾನವು ಹಳೆಯದಾಗದು. ದೇವರಿಗೆ ಅನಂತ ಜ್ಞಾನವಿದೆ. ಸತ್ಯಯುಗದಲ್ಲೂ ಬೆಂಕಿಗೆ ಕಟ್ಟಿಗೆಯನ್ನು ಎಸೆದರೆ ಅದು ಉರಿಯುತ್ತಿತ್ತು ಮತ್ತು ಕಲಿಯುಗದಲ್ಲಿಯೂ ಉರಿಯುತ್ತದೆ. ಅದರಂತೆ ವೇದಗಳಲ್ಲಿರುವ ಜ್ಞಾನ ಶಾಶ್ವತವಾಗಿದೆ. ಇದನ್ನು ಹೇಳುವ ಮನುವು ಭೂಮಿಯ ಮೇಲಿನ ಮೊದಲ ವ್ಯಕ್ತಿಯಾಗಿದ್ದ. ಮನು ರಾಜನಾಗಿದ್ದನು. ಪಾಶ್ಚಾತ್ಯರಿಗೆ ಬಟ್ಟೆ ತೊಡುವ ಬಗ್ಗೆ ಜ್ಞಾನ ಇಲ್ಲದಿರುವಾಗ ಮನು ‘ಮನುಸ್ಮೃತಿ’ ಬರೆದ. ಅಂತಹ ಜ್ಞಾನವನ್ನು ನೀಡುವ ಮನುವನ್ನು ನಾನು ಪೂಜಿಸುತ್ತೇನೆ. ಅನೇಕ ದೇಶಗಳು ಕಾನೂನುಗಳನ್ನು ಸಿದ್ಧಪಡಿಸಲು ಮನುಸ್ಮೃತಿಯನ್ನು ಆಧಾರವಾಗಿಟ್ಟುಕೊಂಡಿದೆ. ‘ಮನುಸ್ಮೃತಿ’, ‘ವೇದ’ ಮತ್ತು ಇತರ ಧರ್ಮಗ್ರಂಥಗಳ ಅವಹೇಳನವನ್ನು ಸಹಿಸಬೇಡಿ ಎಂದು ಭಾರತಾಚಾರ್ಯ ಪೂ. ಪ್ರೊ. ಸು.ಗ. ಶೇವಡೆ ಅವರು ‘ಮನುಸ್ಮೃತಿಯ ಕುರಿತು ಆಗುವ ರಾಜಕೀಯವನ್ನು ತಡೆಯುವುದು ಹೇಗೆ?’ ಎಂಬ ವಿಷಯದ ಬಗ್ಗೆ ಮಾರ್ಗದರ್ಶನ ಮಾಡಿದರು.