ಧರ್ಮ ಪ್ರಸಾರಕ್ಕೆ ಹೆಚ್ಚೆಚ್ಚು ಸಂತರ ಸೃಷ್ಟಿಯಾಗುವುದು ಅಗತ್ಯ ! – ಬಾಲ ಸುಬ್ರಹ್ಮಣ್ಯಂ, ಸಂಚಾಲಕರು, ಮಂಗಳತೀರ್ಥ ಎಸ್ಟೇಟ್ ಮತ್ತು ಬ್ರೂಕ್‌ಫೀಲ್ಡ್ ಎಸ್ಟೇಟ್, ಚೆನ್ನೈ, ತಮಿಳುನಾಡು

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನ (ಜೂನ್ 27)

ಗ್ರಾಮೀಣ ಪ್ರದೇಶಗಳಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು

ವಿದ್ಯಾಧಿರಾಜ ಸಭಾಂಗಣ – ಹಿಂದೆ, ಹಿಂದೂಗಳಿಗೆ ದೇವಾಲಯಗಳಿಂದ ಸಂಸ್ಕಾರ ಸಿಗುತ್ತಿತ್ತು. ಈಗ ಸರ್ಕಾರದ ನೀತಿಯಿಂದಾಗಿ ಮುಚ್ಚಲಾಗಿದೆ. ಆದ್ದರಿಂದ ಈ ಸಂಸ್ಕಾರಗಳು ಆಶ್ರಮದಲ್ಲಿ ಸಿಗಬಹುದು. ಆಶ್ರಮದಲ್ಲಿರುವ ಸಂತರು ಮತ್ತು ಮಹಾತ್ಮರಿಂದಾಗಿ ಜನರ ಧಾರ್ಮಿಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ, ಮತ್ತು ಗ್ರಾಮಗಳಲ್ಲಿ ಸಂತ ಅಥವಾ ಮಹಾತ್ಮರು ಇದ್ದರಿಂದ< iddudarinda> ವಾತಾವರಣದಲ್ಲಿ ಉತ್ತಮ ಬದಲಾವಣೆಯಾಗುತ್ತದೆ. ಆದ್ದರಿಂದ ಸಮಾಜದಲ್ಲಿ ಧರ್ಮ ಪ್ರಸಾರ ಮಾಡಲು ಹೆಚ್ಚು ಹೆಚ್ಚು ಸಂತರನ್ನು ನಿರ್ಮಿಸಬೇಕು. ಇದರಿಂದ ಹಿಂದು ಸಂಸ್ಕಾರ ಉಳಿಯಲಿದೆ, ಎಂದು ‘ಮಂಗಲತೀರ್ಥ ಎಸ್ಟೇಟ್ ಮತ್ತು ಬ್ರೂಕ್ ಫೀಲ್ಡ್ ಎಸ್ಟೇಟ್’ನ ನಿರ್ದೇಶಕ ಶ್ರೀ. ಬಾಲ ಸುಬ್ರಹ್ಮಣ್ಯಂ ಅವರು ‘ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವ’ದ ನಾಲ್ಕನೇ ದಿನದಂದು ಹೇಳಿದರು.

ಶ್ರೀ. ಬಾಲ ಸುಬ್ರಹ್ಮಣ್ಯಂ ಮಾತು ಮುಂದುವರೆಸಿ, ”ವೇದಗಳು, ಪುರಾಣಗಳು, ಉಪನಿಷತ್ತುಗಳು, ಗೀತೆ, ರಾಮಾಯಣ, ಮಹಾಭಾರತ ಮುಂತಾದವು ಒಂದೇ ಒಂದು ಪದವನ್ನು ಬದಲಾಯಿಸದೆ ನಮ್ಮಲ್ಲಿ ತಲುಪಿವೆ. ಇದು ಕೇವಲ ಗುರು-ಶಿಷ್ಯ ಪರಂಪರೆಯಿಂದಾಗಿ ಆಯಿತು. ಹಾಗಾಗಿ ಗುರು-ಶಿಷ್ಯ ಪರಂಪರೆಯನ್ನು ಗೌರವಿಸಬೇಕು. ಈ ಅಮೂಲ್ಯ ಜ್ಞಾನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಧರ್ಮದಲ್ಲಿರುವ ಜ್ಞಾನವೇ ನಮ್ಮ ಸಂಸ್ಕೃತಿಯಾಗಿದೆ. ಬ್ರಿಟಿಷರ ಆಳ್ವಿಕೆಗೂ ಮುನ್ನ ಭಾರತದಲ್ಲಿ ಲಕ್ಷಗಟ್ಟಲೆ ಗುರುಕುಲಗಳಿದ್ದವು. ಹಾಗಾಗಿ ಸಮಾಜಕ್ಕೆ ಧರ್ಮ ಶಿಕ್ಷಣ ಮತ್ತು ನೈತಿಕ ಮೌಲ್ಯಗಳ ಶಿಕ್ಷಣ ಸಿಗುತ್ತಿತ್ತು. ಇಂದು ಜನರು < ಜನರಿಗೆ > ಧರ್ಮ ಶಿಕ್ಷಣ ಸಿಗುತ್ತಿಲ್ಲ; ಹಾಗಾಗಿ ಮತಾಂತರ ಆಗುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ‘ಮಕ್ಕಳು ಶಾಲೆಗೆ ಹೋಗದಿದ್ದರೆ ಶಾಲೆಗಳನ್ನು ಅವರ ಬಳಿಗೆ ತರಬೇಕು’ ಎಂದು ಹೇಳಿದ್ದರು, ಎಂಬುದನ್ನು ನಾವು ಗಮನದಲ್ಲಿಟ್ಟುಕೊಂಡು ‘ವನವಾಸಿಗಳಿಗೆ ಶಿಕ್ಷಣ ನೀಡಲು ಹಳ್ಳಿಗಳಲ್ಲಿ ‘ಏಕಲ್ ವಿದ್ಯಾಲಯ’ಗಳನ್ನು ಪ್ರಾರಂಭಿಸಿದ್ದೇವೆ. ಆ ಮೂಲಕ ಹಳ್ಳಿಯ ಮಕ್ಕಳಿಗೆ ನೈಸರ್ಗಿಕ ಪರಿಸರದಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತದೆ. ಈ ರೀತಿಯಾಗಿ, ದೇಶಾದ್ಯಂತ 70 ಸಾವಿರ ಏಕಲ್ ಶಾಲೆಗಳು ನಡೆಯುತ್ತಿವೆ.” ಎಂದು ಹೇಳಿದರು.