ಹಿಂದೂಗಳು ನಾಮಫಲಕ ಒಡೆದ ನಂತರ ಮುಸ್ಲಿಮರು ಹಿಂದೂ ಯುವಕರನ್ನು ಬರ್ಬರವಾಗಿ ಥಳಿಸಿದ್ದಾರೆ !
ಕಾಠ್ಮಂಡು (ನೇಪಾಳ) – ನೇಪಾಳದ ರೌತಹಾಟ ಜಿಲ್ಲೆಯಲ್ಲಿ ಒಂದು ವಾರದ ಹಿಂದೆ ಮುಸ್ಲಿಮರು ಒಂದು ಗ್ರಾಮಕ್ಕೆ ‘ಇಸ್ಲಾಂನಗರ’ ಎಂದು ಹೆಸರಿಸಿದ ನಂತರ ಉದ್ವಿಗ್ನತೆ ಉಂಟಾಗಿದೆ. ಈ ಹೆಸರಿನ ಫಲಕವನ್ನು ಸಹ ಸ್ಥಾಪಿಸಲಾಗಿದೆ. ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಹಿಂದೂಗಳು ವಿರೋಧಿಸಿ ನಾಮಫಲಕ ತೆಗೆದರು. ಇದರಿಂದಾಗಿ ಮುಸ್ಲಿಮರು ಕೆಲವು ಹಿಂದೂ ಯುವಕರನ್ನು ಥಳಿಸಿದ್ದಾರೆ. ಈ ಮಾಹಿತಿ ಸಿಗುತ್ತಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
Mu$l!ms Rename Village Name In Nepal; Hindu-majority village as ‘Islamnagar’; Kadam Chowk as ‘Madrasa Chowk’!
When Hindus broke the nameplate, Mu$l!ms brutally assaulted the Hindu youth!
Reportedly Police shielded the assailants
This situation in the Hindu-majority Nepal is… pic.twitter.com/Pq2cqIxNNs
— Sanatan Prabhat (@SanatanPrabhat) June 27, 2024
ರೌತಹಾಟ ಜಿಲ್ಲೆಯ ಗರುಡ್ ಪುರಸಭೆಯ ವಾರ್ಡ್ ಸಂಖ್ಯೆ 6 ರ ಪೊಥ್ಯಾಹಿ ಗ್ರಾಮದ ಒಂದು ವೃತ್ತದಲ್ಲಿ ಮುಸ್ಲಿಮರು ‘ಇಸ್ಲಾಂನಗರ’ ಎಂಬ ಫಲಕವನ್ನು ಹಾಕಿದ್ದರು. ಈ ಫಲಕಕ್ಕೆ ಹಸಿರು ಬಣ್ಣ ನೀಡಲಾಗಿತ್ತು. ಅದರ ಮೇಲೆ ಅರೇಬಿಕ್ ಮತ್ತು ಉರ್ದು ಭಾಷೆಗಳಲ್ಲಿ ಅನೇಕ ಪದಗಳನ್ನು ಬರೆಯಲಾಗಿತ್ತು. ಫಲಕದ ಎರಡೂ ಬದಿಗಳಲ್ಲಿ ಇಸ್ಲಾಮಿಕ್ ಪ್ರಾರ್ಥನಾ ಸ್ಥಳಗಳ ಚಿತ್ರಗಳನ್ನು ಸಹ ಚಿತ್ರಿಸಲಾಗಿತ್ತು. ಇಲ್ಲಿ ನಿಂತು ಮುಸ್ಲಿಂ ವೃದ್ಧರೊಬ್ಬರು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದರ ನಂತರ ಸ್ಥಳೀಯ ಮುಸ್ಲಿಮರು ಈ ಗ್ರಾಮವನ್ನು ‘ಇಸ್ಲಾಂನಗರ’ ಎಂದು ಕರೆಯಲು ಪ್ರಾರಂಭಿಸಿದರು.
ಗ್ರಾಮದಲ್ಲಿ ಕೇವಲ ಶೇ.4ರಷ್ಟು ಮುಸ್ಲಿಮರಿದ್ದಾರೆ !
ನೇಪಾಳದ ‘ಹಿಂದೂ ಸಾಮ್ರಾಟ್ ಸೇನಾ’ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ರಾಜೇಶ ಯಾದವ ಇವರು ಸುದ್ದಿವಾಹಿನಿಯೊಂದಕ್ಕೆ ಈ ಬಗ್ಗೆ ಹೇಳುತ್ತಾ, ಪೋಥ್ಯಾಹಿ ಗ್ರಾಮದಲ್ಲಿ ಕೇವಲ 10 ಮುಸ್ಲಿಮರ ಮನೆಗಳಿವೆ, ಇದು ಗ್ರಾಮದ ಒಟ್ಟು ಜನಸಂಖ್ಯೆಯ ಶೇಕಡಾ 4 ರಷ್ಟು ಮಾತ್ರ ಇದೆ. (ಶೇ. 4ರಷ್ಟು ಮುಸ್ಲಿಮರು ಈ ರೀತಿ ಮಾಡುತ್ತಿದ್ದರೆ, ಹಿಂದೂಗಳು ‘ಹಿಂದೂ’ಗಳಾಗಿ ಬದುಕಲು ಅರ್ಹರೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. – ಸಂಪಾದಕರು) ಹೀಗಿರುವಾಗ ಅವರು ಸಂಪೂರ್ಣ ಪೊಥ್ಯಹಿ ಗ್ರಾಮದ ಹೆಸರು ಬದಲಾಯಿಸುವ ಸಂಚು ರೂಪಿಸಲಾಗಿತ್ತು. ಜೂನ್ 23 ರಂದು ಹಿಂದೂ ಸಾಮ್ರಾಟ್ ಸೇನೆಯ ಸದಸ್ಯರು ಸ್ಥಳೀಯ ನಾಗರಿಕರೊಂದಿಗೆ ಇಸ್ಲಾಂನಗರದಲ್ಲಿ ಫಲಕವನ್ನು ತೆಗೆದುಹಾಕಿದರು. ಆ ಸಮಯದಲ್ಲಿ ಮುಸ್ಲಿಮರು ಮೌನವಾಗಿದ್ದರು; ಆದರೆ ಆಂತರಿಕವಾಗಿ ಹಿಂಸಾಚಾರ ನಡೆಸಲು ಸಂಚು ರೂಪಿಸಿದ್ದರು. ಜೂನ್ 25 ರ ರಾತ್ರಿ 3 ಹಿಂದೂ ಯುವಕರು ವೃತ್ತದ ಬಳಿ ಹಾದು ಹೋಗುತ್ತಿದ್ದರು. ಈ ವೇಳೆ ಅವರನ್ನು 12ಕ್ಕೂ ಹೆಚ್ಚು ಮುಸ್ಲಿಮರು ಸುತ್ತುವರಿದು ಫಲಕ ತೆಗೆದಿದ್ದೀರಿ ಎಂದು ಆರೋಪಿಸಿ ನಿಂದಿಸಿ ನಂತರ ಥಳಿಸಿದ್ದಾರೆ. ಇದರಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಂದ್ ದಿವಾನ್, ರಫೀಕ್, ಸಿರಾಜುಲ್, ಮಂಜೂರ್ ಮತ್ತಿತರರು ಹಲ್ಲೆ ಮಾಡಿದವರೆಂದು ಗುರುತಿಸಲಾಗಿದೆ. ಥಳಿಸಿದ ಸುದ್ದಿ ತಿಳಿದ ತಕ್ಷಣ ಹಿಂದೂಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು. ಪೊಲೀಸರು ಕೂಡ ಅಲ್ಲಿಗೆ ತಲುಪಿದರು.
ಪೋಲೀಸರಿಂದ ಥಳಿಸಿದ ಮುಸ್ಲಿಮರ ರಕ್ಷಣೆ !
ಹಿಂದೂ ಯುವಕರನ್ನು ಥಳಿಸಿದ ಮುಸ್ಲಿಮರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. (ಭಾರತದ ಪೊಲೀಸರು ಏನು ಮಾಡುತ್ತಿದ್ದಾರೆ, ನೇಪಾಳದ ಪೊಲೀಸರು ಅದೇ ಮಾಡುತ್ತಿದ್ದಾರೆ! – ಸಂಪಾದಕರು) ಅಷ್ಟೇ ಅಲ್ಲ, ಅವರನ್ನು ಥಳಿಸಿದ ಮುಸ್ಲಿಮರಿಗೆ ಪೊಲೀಸರು ರಕ್ಷಣೆ ನೀಡಿದರು. ನೇಪಾಳದ ಆಡಳಿತವು ಘಟನೆಯನ್ನು ‘ಪರಸ್ಪರ ವಿವಾದ’ ಎಂದು ಮುಚ್ಚಿಡಲು ಪ್ರಯತ್ನಿಸುತ್ತಿದೆ. ಪ್ರಕರಣದಲ್ಲಿ ಯಾವುದೇ ಧಾರ್ಮಿಕ ಉದ್ದೇಶವಿಲ್ಲ ಎಂದು ಪೊಲೀಸರು ಹೇಳುತ್ತಾರೆ; ಆದರೆ ಪೊಲೀಸರು ವಿಷಯವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಹಿಂದೂ ಸಂಘಟನೆಗಳು ಹೇಳಿವೆ.
ಸಂಪಾದಕೀಯ ನಿಲುವುಹಿಂದೂ ಬಹುಸಂಖ್ಯಾತರಾಗಿರುವ ನೇಪಾಳದ ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ಇನ್ನು ಕೆಲವೇ ದಶಕಗಳಲ್ಲಿ ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಹಿಂದೂಗಳು ಅಳಿದು ಹೋದರೆ ಆಶ್ಚರ್ಯಪಡಬೇಡಿ ! |