ಹಿಂದೂಗಳ ವಿರುದ್ಧ ಸುಳ್ಳು ಕಥನವನ್ನು ಸೃಷ್ಟಿಸಲಾಗುತ್ತಿದೆ ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದು ಜನಜಾಗೃತಿ ಸಮಿತಿ

ವೈಶ್ವಿಕ ಹಿಂದು ರಾಷ್ಟ್ರ ಅಧಿವೇಶನದ ನಾಲ್ಕನೇ ದಿನ (೨೭ ಜೂನ್) : ಉದ್ಬೋಧನ ಸತ್ರ

ಓಟಿಟಿ ಮತ್ತು ಹಿಂದಿ ಚಲನಚಿತ್ರೋದ್ಯಮ

ರಮೇಶ ಶಿಂದೆ

ಜಗತ್ತಿನಲ್ಲಿ ಎಲ್ಲಿಯೂ ‘ಹಿಂದು ಭಯೋತ್ಪಾದನೆ’ ಅಸ್ತಿತ್ವದಲ್ಲಿಲ್ಲ. ಅಮೇರಿಕದ ಭಯೋತ್ಪಾದಕರ ಪಟ್ಟಿಯಲ್ಲಿ ಅಥವಾ ‘ವಿಕಿಪಿಡಿಯಾ’ದಲ್ಲಿನ ಭಯೋತ್ಪಾದಕರ ಪಟ್ಟಿಯಲ್ಲಿ ಎಲ್ಲಿಯೂ ‘ಹಿಂದು ಭಯೋತ್ಪಾದನೆ’ ಎಂಬ ಉಲ್ಲೇಖವಿಲ್ಲ. ಭಾರತದಲ್ಲಿ ಮಾತ್ರ ಹಿಂದು ಭಯೋತ್ಪಾದನೆಯ ಸುಳ್ಳು ಕಥನವನ್ನು ಸೃಷ್ಟಿಸಲಾಗಿದೆ. ‘ಒಂದು ಕಡೆಗೆ ಭಯೋತ್ಪಾದಕರಿಗೆ ಧರ್ಮ ಇರುವುದಿಲ್ಲ’, ಎಂದು ಹೇಳಲಾಗುತ್ತದೆ ಮತ್ತು ಇನ್ನೊಂದೆಡೆ ಹಿಂದು ಭಯೋತ್ಪಾದನೆಯ ಸುಳ್ಳು ಕಥನವನ್ನು ಸೃಷ್ಟಿಸಲಾಗುತ್ತದೆ. ‘ದಿ ವೈರ್’ ಈ ವಾರ್ತಾಜಾಲತಾಣದಲ್ಲಿ ‘ಭಯೋತ್ಪಾದನೆ’ ಮತ್ತು ‘ಉಗ್ರವಾದ’ ಇವು ವಿಭಿನ್ನವಾಗಿವೆ ಮತ್ತು ಭಾರತ ಸರಕಾರದೊಂದಿಗಿನ ಅವರ ಹೋರಾಟವು ಹಕ್ಕುಗಳಿಗಾಗಿ ಇದೆ ಎಂದು ಬಿಂಬಿಸಲಾಗುತ್ತದೆ. ಹಮಾಸ್‌ನಂತಹ ಭಯೋತ್ಪಾದನಾ ಸಂಘಟನೆಗಳ ಉಲ್ಲೇಖ ‘ಬಿಬಿಸಿ’ ವಾರ್ತಾವಾಹಿನಿಯಲ್ಲಿ ‘ಉಗ್ರವಾದಿ’ (ಮಿಲಿಟಂಟ್) ಎಂದು ಮಾಡಲಾಗುತ್ತದೆ. ಕಾಶ್ಮೀರ್‌ದಲ್ಲಿ ಕಾಶ್ಮೀರಿ ಪಂಡಿತರ ನರಸಂಹಾರ ಮಾಡುವವರು, ಮಹಿಳೆಯರ ಮೇಲೆ ಬಲಾತ್ಕಾರ ಮಾಡುವವರು ಭಯೋತ್ಪಾದಕರಲ್ಲ ; ಆದರೆ ಹಿಂದೂಗಳನ್ನು ಭಯೋತ್ಪಾದಕರೆಂದು ನಿರ್ಧರಿಸಲಾಗುತ್ತದೆ.

ಮುಸ್ಲಿಮರಿಗೆ ಕಾಂಗ್ರೆಸ್ ನೀಡಿದ ಭರವಸೆಯಿಂದಾಗಿಯೇ ಸ್ವಾತಂತ್ರ್ಯಾನಂತರ ಭಾರತ ಹಿಂದೂ ರಾಷ್ಟ್ರವಾಗಲಿಲ್ಲ ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ

‘ಜಮಿಯತ್ ಉಲೇಮಾ ಇ ಹಿಂದ್’ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ಇಂದು ಸಾರ್ವಜನಿಕ ಸಭೆಯಲ್ಲಿ, ‘ಸ್ವಾತಂತ್ರ್ಯ ಸಿಗುವ ಮುನ್ನವೇ ಕಾಂಗ್ರೆಸ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಿಲ್ಲ’ ಎಂದು ಮುಸ್ಲಿಮರಿಗೆ ಆಶ್ವಾಸನೆ ನೀಡಿತ್ತು. ಆದ್ದರಿಂದ ಭಾರತ ‘ಹಿಂದೂ ರಾಷ್ಟ್ರ’ ಆಗಲಿಲ್ಲ. ಸಂವಿಧಾನದ 368 ನೇ ವಿಧಿಯಲ್ಲಿ ಸರಕಾರಕ್ಕೆ ಸಂವಿಧಾನ ತಿದ್ದುಪಡಿ ಮಾಡುವ ಸಂಪೂರ್ಣ ಅಧಿಕಾರ ಇದೆ ಎಂದು ಹೇಳಿದೆ. 106 ಬಾರಿ ತಿದ್ದುಪಡಿಯಾದ ಸಂವಿಧಾನದ 107 ನೇ ತಿದ್ದುಪಡಿ ಮಾಡಿ ಭಾರತವನ್ನು ‘ಹಿಂದೂ ರಾಷ್ಟ್ರ’ ಮಾಡಬಹುದು ಎಂದು ಹೇಳಿದರು.

ಸಾಮಾಜಿಕ ಮಾಧ್ಯದಲ್ಲಿ ಪುಟ್ಟ ಬಾಲಕಿಯೊಬ್ಬಳು ‘ಮೋದಿ ಬಂದ ಮೇಲೆ ಭಾರತದ ತಲಾ ಆದಾಯ ಕಡಿಮೆಯಾಗಿದೆ’ ಎಂದು ಹೇಳಿರುವ ವಿಡಿಯೋ ಹರಿದಾಡಿತು. ಆ ಸಮಯದಲ್ಲಿ ಆಕೆಗೆ ತಲಾ ಆದಾಯ ಎಂದರೆ ಏನು ? ಹಿಂದಿನ ತಲಾ ಆದಾಯ ಎಷ್ಟು ಇತ್ತು ? ಮತ್ತು ಈಗ ಅದು ಎಷ್ಟು ಇದೆ? ಎಂದು ಕೇಳಿದಾಗ ಆಕೆಗೆ ಉತ್ತರಿಸಲಾಗಲಿಲ್ಲ. ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ, ಇದನ್ನು ಹಿಂದೂಗಳು ಅರಿತುಕೊಳ್ಳಬೇಕು.