ಹಿಂದೂ ರಾಷ್ಟ್ರಕ್ಕಾಗಿ ದೊಡ್ಡ ಜನಾಂದೋಲನವನ್ನು ಮಾಡುವುದು ಅಗತ್ಯ ! – ಪ್ರವೀಣ ಚತುರ್ವೇದಿ, ಸಂಸ್ಥಾಪಕ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ, ‘ಪ್ರಾಚ್ಯಂ’

ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ನಾಲ್ಕನೇ ದಿನ (ಜೂನ್ 27)- ಬೋಧಪ್ರದ ಸತ್ರ

OTT ಮತ್ತು ಹಿಂದಿ ಚಲನಚಿತ್ರ ನಿರ್ಮಾಣ

ಪ್ರವೀಣ ಚತುರ್ವೇದಿ

ವಿದ್ಯಾಧಿರಾಜ ಸಭಾಂಗಣ – ಇಂದು ಇಡೀ ಜಗತ್ತು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ಹಾಗಾಗಿ ನಮಗೆ ಸಂಘಟಿತರಾಗಿ ಎದುರಿಸಬೇಕಾಗಬಹುದು. ಹಿಂದೂ ರಾಷ್ಟ್ರಕ್ಕಾಗಿ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯ ಮಿಶ್ರಣದೊಂದಿಗೆ ಬೃಹತ್ ಜನಾಂದೋಲನವನ್ನು ನಿರ್ಮಿಸುವುದು ಅವಶ್ಯಕವಾಗಿದೆ. ಅದನ್ನೇ ಹಿಂದೂ ಜನಜಾಗೃತಿ ಸಮಿತಿಯು ಈ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಮೂಲಕ ಮಾಡುತ್ತಿದೆ ಎಂದು ‘ಪ್ರಾಚ್ಯಂ’ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ. ಪ್ರವೀಣ ಚತುರ್ವೇದಿ ಇವರು ‘ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವ’ದ ನಾಲ್ಕನೇ ದಿನದಂದು ಹೇಳಿದರು. ‘ಹಿಂದೂ ಒಟಿಟಿ ಪ್ಲಾಟ್‌ಫಾರ್ಮ ‘ಪ್ರಾಚ್ಯಂ’ ಮೂಲಕ ಸೈದ್ಧಾಂತಿಕ ಭಯೋತ್ಪಾದನೆಯನ್ನು ತಡೆಯಲು ಮಾಡಿದ ಕಾರ್ಯ’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

‘ಪ್ರಾಚ್ಯಂ’ನ ಸ್ಥಾಪನೆಯ ಉದ್ದೇಶ !

ಅವರು ಮಾತು ಮುಂದುವರೆಸುತ್ತಾ, ”ಹಿಂದೂ ತಮ್ಮ ಧರ್ಮ ಮತ್ತು ಸಂಸ್ಕೃತಿಯಿಂದ ದೂರ ಹೋಗಬೇಕು, ಅದಕ್ಕಾಗಿ ಹಿಂದೂ ವಿರೋಧಿ ಶಕ್ತಿ ಚಲನಚಿತ್ರ, ಧಾರವಾಹಿಗಳು, ಯುಟ್ಯುಬ್ ಗಳು ಸುಳ್ಳು ನರೆಟಿವ್ ಗಳನ್ನು ಹಬ್ಬಿಸುತ್ತಿದೆ. ಈ ಯೋಜಿತ ಷಡ್ಯಂತ್ರ ದೇಶ ವಿದೇಶಗಳಿಂದಲೇ ನಡೆಯುತ್ತಿದೆ. ‘ಭಾರತದ ಹೊಸ ತಲೆಮಾರಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬಾರದು’ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಈ ಸುಳ್ಳು ನರೆಟಿವ್ ಅನ್ನು ಎದುರಿಸುವ ಮೂಲಕ, ಭಾರತದ ನೈಜ ಇತಿಹಾಸ, ಹಿಂದೂ ಧರ್ಮ ಮತ್ತು ಶ್ರೇಷ್ಠ ಸಂಸ್ಕೃತಿಯನ್ನು ಜನರ ಮುಂದೆ ಇಡಬೇಕಾಗುತ್ತದೆ. ಈ ಪರಿಕಲ್ಪನೆಯಿಂದ ಯೂಟ್ಯೂಬ್ ಚಾನೆಲ್ ‘ಪ್ರಾಚ್ಯಂ’ ಆರಂಭವಾಗಿದೆ.” ಎಂದು ಹೇಳಿದರು.

ಒಟಿಟಿ ವೇದಿಕೆಯಲ್ಲಿ ‘ಪ್ರಾಚ್ಯಂ’ ಉದಯ !

ಅವರು, ”ಶ್ರೀರಾಮಮಂದಿರದ ಪ್ರಾಣಪ್ರತಿಷ್ಠಾಪನೆ ಆಗುವುದಿತ್ತು. ಆದ್ದರಿಂದ ಶ್ರೀರಾಮಜನ್ಮಭೂಮಿಗಾಗಿ ರಾಮಭಕ್ತರು ನಡೆಸುತ್ತಿರುವ ಹೋರಾಟದ ಕುರಿತು ‘ವಿಡಿಯೋ’ ಮಾಡಲಾಗಿತ್ತು. ಆ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ 1 ಗಂಟೆಯೊಳಗೆ ಅದನ್ನು ಚಾನಲ್ ಅದನ್ನು ತೆಗೆದುಹಾಕಿದೆ. ಅವರು ನನ್ನ ಯೂಟ್ಯೂಬ್ ಅನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದರು. ಆ ನಂತರ ಈ ‘ವೀಡಿಯೋ’ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಯಿತು. ಅದಕ್ಕೆ ಕೊಟ್ಯಾಂತರ ವೀಕ್ಷಕರಿಂದ ಉತ್ಸಾಹಭರಿತ ಪ್ರತಿಕ್ರಿಯೆಯನ್ನು ಸಿಕ್ಕಿತು. ಅದರ ನಂತರ, YouTube ವೀಡಿಯೊವನ್ನು ಮರು-ಪ್ರಸಾರ ಮಾಡಿತು. ಈ ನಿಷೇಧದ ನಂತರ, ಹಿಂದೂ ‘OTT ಪ್ಲಾಟ್‌ಫಾರ್ಮ್’ ‘ಪ್ರಾಚ್ಯಂ’ ಈ ವೇದಿಕೆಯಿಂದ ಶ್ರೇಷ್ಠ ಭಾರತೀಯ ಸಂಸ್ಕೃತಿಯ ವೀಡಿಯೊಗಳನ್ನು ಮಾಡಲಾಗುತ್ತಿದೆ. ಇದು ಭಾರತೀಯ ಯುವಕರಿಗೆ ಉತ್ತಮ ಸಂದೇಶವನ್ನು ನೀಡುತ್ತದೆ.” ಎಂದು ಹೇಳಿದರು.

ಕ್ಷಣಚಿತ್ರ :

‘ನಾವು ಏನಾಗಿದ್ದೆವು ಮತ್ತು ಏನಾಗಿದ್ದೇವೆ?’, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಪ್ರಸ್ತುತ ಪರಿಸ್ಥಿತಿಯನ್ನು ತೋರಿಸುವ ‘ಸಾಹೇಬ’ ಮತ್ತು ‘ಶ್ರೀ ರಾಮಜನ್ಮಭೂಮಿ ಹೋರಾಟ’ಗಳನ್ನು ಈ ಸಂದರ್ಭದ ಕುರಿತು ವಿಡಿಯೋ ತೋರಿಸಲಾಯಿತು.