ಕೇರಳದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಸರ್ಕಾರ ಶಬರಿಮಲೆ ಯಾತ್ರೆಗೆ ಅವಕಾಶ ನೀಡುತ್ತಿರಲಿಲ್ಲ! – ಟಿ.ಬಿ. ಶೇಖರ್, ರಾಷ್ಟ್ರೀಯ ಅಧ್ಯಕ್ಷರು, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಮೂರನೇ ದಿನ (ಜೂನ್ 26): ದೇಶದ ಭದ್ರತೆ ಮತ್ತು ಧರ್ಮ ರಕ್ಷಣೆ

ಟಿ.ಬಿ. ಶೇಖರ್

ರಾಮನಾಥಿ – ‘ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ’ವನ್ನು 2008 ರಲ್ಲಿ ಮಿಜೋರಾಂನ ಮಾಜಿ ಗವರ್ನರ್ ಕುಮಾರಂ ರಾಜಶೇಖರ್ಚಿ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು. ‘ಸರ್ವ ಅಯ್ಯಪ್ಪ ಸೇವ್ ಶಬರಿಮಲಾ’ (ಅಯ್ಯಪ್ಪ ಸ್ವಾಮಿಯ ಸೇವೆ ಮಾಡಿ, ಶಬರಿಮಲೆ ರಕ್ಷಿಸಿ) ಎಂಬ ಉದ್ದೇಶದಿಂದ ‘ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ’ ಸ್ಥಾಪಿಸಲಾಗಿದೆ. ಈ ಸಂಸ್ಥೆಯು ಶಬರಿಮಲೆಗೆ ಬರುವ ಭಕ್ತರಿಗೆ ಸುರಕ್ಷಿತ ಮತ್ತು ತೊಂದರೆಯಿಲ್ಲದ ಅಯ್ಯಪ್ಪನ ದರ್ಶನವಾಗುವುದನ್ನು ಖಚಿತಪಡಿಸಿಕೊಳ್ಳುವ ಕೆಲಸ ಮಾಡುತ್ತಿದೆ; ಏಕೆಂದರೆ ಇಲ್ಲಿಗೆ ಬರುವ ಯಾತ್ರಿಕರು ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೇರಳದ ಇಲ್ಲಿಯವರೆಗೆ ಕಾಂಗ್ರೆಸ್ ಅಥವಾ ಕಮ್ಯುನಿಸ್ಟ್ ಸರ್ಕಾರಗಳು ಹಿಂದೂ ವಿರೋಧಿಗಳಾಗಿವೆ.

ಯಾತ್ರಾರ್ಥಿಗಳಿಗೆ ಹಲವು ಅಡೆತಡೆಗಳನ್ನು ಸೃಷ್ಟಿಸುತ್ತಾರೆ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ್ ಇವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಹೇಳಿದರು. 2017 ರಿಂದ ಶ್ರೀ. ಟಿ.ಬಿ. ಶೇಖರ್ ಇವರು ‘ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ’ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.