ದೇವಸ್ಥಾನಗಳ ಸ್ವಚ್ಛತೆಯ ಮೂಲಕ ಹೊಸ ಯುವಕರು ಧರ್ಮಕಾರ್ಯದೊಂದಿಗೆ ಸೇರಿಸಿಕೊಳ್ಳಬೇಕು ! – ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ ಅಧ್ಯಕ್ಷರು, ಯುವಾ ಬ್ರಿಗೇಡ್, ಕರ್ನಾಟಕ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂರನೇ ದಿನ (ಜೂನ್ 26) – ಉದ್ಬೋದನ ಸತ್ರ : ಭಾರತ ವಿರೋಧಿ ಶಕ್ತಿಗಳು

ವಿದ್ಯಾಧಿರಾಜ ಸಭಾಂಗಣ – ಯುವಕರನ್ನು ಆಕರ್ಷಿಸಲು ರಾಷ್ಟ್ರಪ್ರೇಮ ಜಾಗೃತಗೊಳಿಸುವ ಗೀತೆಗಳನ್ನು ಸಿದ್ಧಪಡಿಸಿ ಆ ಹಾಡನ್ನು ನಾವು ಮಹಾವಿದ್ಯಾಲಯಗಳಲ್ಲಿ ಹಾಕಿದ್ದೇವೆ. ಇದರಿಂದ, ಅನೇಕ ಮಕ್ಕಳು ರಾಷ್ಟ್ರಕಾರ್ಯದಲ್ಲಿ ತೊಡಗಿಸಿಕೊಂಡರು. ಹಿಂದೂ ಧರ್ಮಪ್ರೇಮಿಯಾಗಿರುವ ಹಳ್ಳಿಗಳಲ್ಲೂ ಇಂತಹ ಹಾಡುಗಳನ್ನು ಹಾಕಿದ್ದೇವೆ. ಇದರಿಂದಾಗಿ ಹಿಂದೂಗಳಲ್ಲಿ ಸಂಗಟನೆ ಹೆಚ್ಚಿಸಿತು.

ಕರ್ನಾಟಕದ ದೇವಸ್ಥಾನಗಳ ಬಳಿ ಇರುವ ಕೆರೆಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ನಾವು ಕೈಗೊಂಡಿದ್ದೇವೆ. ಇದರಡಿ 250ಕ್ಕೂ ಹೆಚ್ಚು ಕೆರೆಗಳನ್ನು ಸ್ವಚ್ಛಗೊಳಿಸಲಾಯಿತು. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ಶ್ರದ್ಧೆ ಹೆಚ್ಚಾಯಿತು. ಮುಂದಿನ ಹಂತದಲ್ಲಿ ನದಿ ಸ್ವಚ್ಛತಾ ಅಭಿಯಾನವನ್ನು ಕೈಗೆತ್ತಿಕೊಂಡಿದ್ದೇವೆ. ಇದರ ಅಡಿಯಲ್ಲಿ ಕರ್ನಾಟಕದ 9-10 ನದಿಗಳನ್ನು ಸ್ವಚ್ಛಗೊಳಿಸಲಾಯಿತು. ನದಿಗಳ ಸ್ವಚ್ಛತೆಯಲ್ಲಿ ಸ್ಥಳೀಯ ಹಿಂದೂಗಳೂ ಪಾಲ್ಗೊಂಡಿದ್ದರು. ನದಿಗಳು ಶುದ್ಧವಾದ ನಂತರ ಅಲ್ಲಿ ಆರತಿ ಮಾಡಲಾಯಿತು. ಪ್ರಸ್ತುತ, ಕರ್ನಾಟಕದ 5-6 ನದಿ ಸ್ಥಳಗಳಲ್ಲಿ ಪ್ರತಿವರ್ಷ ಆರತಿ ನಡೆಯುತ್ತದೆ. ಈ ನದಿಗಳನ್ನು ಸ್ಥಳೀಯ ಹಿಂದೂಗಳು ಸ್ವಚ್ಛಗೊಳಿಸುತ್ತಿದ್ದಾರೆ. ಇದಾದ ಬಳಿಕ ದೇವಸ್ಥಾನಗಳನ್ನು ಸ್ವಚ್ಛಗೊಳಿಸಲು ಆರಂಭಿಸಿದೆವು. ದೇವಸ್ಥಾನಗಳ ಸ್ವಚ್ಛತೆಯ ಮೂಲಕ ಅನೇಕ ಹೊಸ ಯುವಕರು ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡರು. ಹಿಂದೂ ಧರ್ಮವನ್ನು ಟೀಕಿಸುವ ಓರ್ವ ನಾಯಕನ ಪ್ರದೇಶದಲ್ಲಿ ನಾವು ‘ಮೈ ಹೂ ಹಿಂದೂ’ (ನಾನು ಹಿಂದೂ) ಎಂಬ ಸಭೆಯನ್ನು ಆಯೋಜಿಸಿದೆವು. ಈ ಸಭೆಯಲ್ಲಿ ಸಾವಿರಾರು ಹಿಂದೂಗಳು ನೆರೆದಿದ್ದರು ಎಂದು ಕರ್ನಾಟಕ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರು ‘ಹಿಂದುತ್ವದ ಕಾರ್ಯದಲ್ಲಿ ಯುವಕರನ್ನು ಹೇಗೆ ಸೆಳೆಯುವುದು ? ಈ ಬಗ್ಗೆ ಮಾತನಾಡುತ್ತಿದ್ದರು.