ಮುಸ್ಲಿಮರ ಮೇಲೆ ಅನ್ಯಾಯವಾಗುತ್ತಿದೆಯೆಂದು ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಡಿಸಿತು ! – ಡಾ.ಎಸ್.ಆರ್. ಲೀಲಾ, ಲೇಖಕಿ, ಬೆಂಗಳೂರು

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂರನೇ ದಿನ (ಜೂನ್ 26)- ಉದ್ಬೋಧನ ಸತ್ರ : ಹಿಂದೂ ಇಕೋಸಿಸ್ಟಮ್

ರಾಮನಾಥಿ – ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸುಳ್ಳು ಕಥೆಗಳನ್ನು(ನರೆಟಿವ್) ಹರಡಿ ಸಮಾಜದ ನಡುವೆ ಒಡಕು ಮೂಡಿಸಲಾಗುತ್ತಿದೆ. ಈ ಸುಳ್ಳು ಕಥೆಯ ಪರಿಣಾಮವನ್ನು ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ನೋಡಿದ್ದಾರೆ. ‘ಸಧ್ಯ ಭಾರತದಲ್ಲಿ ಸ್ವಾತಂತ್ರ್ಯವಿಲ್ಲ’, ಎನ್ನುವ ಕಥಾನಕವನ್ನು ಹರಡಲಾಗುತ್ತಿದೆ. ‘ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿತು’, ಎನ್ನುವ ಕಥಾನಕವನ್ನು ಮೊದಲಿನಿಂದಲೂ ರೂಪಿಸಲಾಗಿದೆ. ಇದು ಸಂಪೂರ್ಣ ತಪ್ಪಾಗಿದೆ. ಕಾಂಗ್ರೆಸ್ ನಮಗೆ ಸ್ವಾತಂತ್ರ್ಯ ದೊರಕಿಸಿಕೊಡಲಿಲ್ಲ, ಬದಲಾಗಿ ದೇಶದ ವಿಭಜನೆಯನ್ನು ಮಾಡಿದೆ. ಕಾಂಗ್ರೆಸ ಮತ್ತು ಮುಸ್ಲಿಂ ಲೀಗ ಭಾರತದ ವಿಭಜನೆಗೆ ಹೊಣೆಯಾಗಿದೆ. ಅವರು ಹಿಂದೂಗಳ ಹತ್ಯೆಗಳಾಗುವಂತೆ ಮಾಡಿದರು. ಅವರ ಮೇಲೆ ಅಮಾನವೀಯ ರೀತಿಯಲ್ಲಿ ದೌರ್ಜನ್ಯ ನಡೆಸಿದರು. `ಭಾರತದಲ್ಲಿ ಮುಸಲ್ಮಾನರ ಮೇಲೆ ಅನ್ಯಾಯವಾಗುತ್ತಿದೆ’, ಎಂದು ಸುಳ್ಳು ಕಥಾನಕವನ್ನು ಕಾಂಗ್ರೆಸ್ ಹರಡಿದೆ. ಈ ಅಪಪ್ರಚಾರದ ವಿರುದ್ಧ ಪ್ರತಿದಾಳಿ ನಡೆಸುವ ‘ನರೆಟಿವ್’ಅನ್ನು ನಮಗೆ ಸಿದ್ಧಪಡಿಸಬೇಕಾಗುವುದು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಮತ್ತು ಲೇಖಕಿ ಡಾ. ಎಸ್.ಆರ್. ಲೀಲಾ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ‘ಹಿಂದೂ ವಿರೋಧಿ ನರೆಟಿವ್ ವಿರುದ್ಧ ಪ್ರತಿದಾಳಿ ಅಗತ್ಯ’ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.

ಡಾ. ಲೀಲಾ ತಮ್ಮ ಮಾತನ್ನು ಮುಂದುವರಿಸಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಭಾರತವನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ, ಸ್ವಾತಂತ್ರ್ಯವೀರ ಸಾವರ್ಕರ ಮತ್ತು ಸುಭಾಷ ಚಂದ್ರ ಬೋಸ ಅವರ ಬಹುದೊಡ್ಡ ಕೊಡುಗೆಗಳಿವೆ; ಆದರೆ ಅವರ ಕೊಡುಗೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಯಿತು ಮತ್ತು ಕಾಂಗ್ರೆಸ್ಸಿನ ನಾಯಕರನ್ನು ಕೊಂಡಾಡುವ ಸುಳ್ಳು ಕಥಾನಕವನ್ನು ಕಾಂಗ್ರೆಸ್ಸಿಗರು ಎಲ್ಲೆಡೆ ಹರಡಿದರು. `ಭಾರತದಲ್ಲಿ ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದಾರೆ’, ಎಂದು ಸುಳ್ಳು ಕಥಾನಕಗಳನ್ನು ಸಿದ್ಧಪಡಿಸಲಾಯಿತು; ಆದರೆ ಪ್ರತ್ಯಕ್ಷದಲ್ಲಿ ಮುಸಲ್ಮಾನರು ಅಲ್ಪಸಂಖ್ಯಾತರಲ್ಲ. ಪಾಕಿಸ್ತಾನಕ್ಕಿಂತ ಭಾರತದಲ್ಲಿ ಹೆಚ್ಚು ಮುಸಲ್ಮಾನರಿದ್ದಾರೆ. ಹಿಂದೂಗಳ ಹಿಂದೆಯೇ ಅವರ ಜನಸಂಖ್ಯೆಯಿದೆ. ಮುಸಲ್ಮಾನ ಅಲ್ಪಸಂಖ್ಯಾತರಾಗಿದ್ದರೆ, ಅವರು ಬಹುಸಂಖ್ಯಾತ ಹಿಂದೂಗಳಿಗೆ ಸವಾಲು ಹಾಕುವ ಧೈರ್ಯ ಮಾಡುತ್ತಿರಲಿಲ್ಲ. ಈ ಕಥಾನಕ ಸಂಪೂರ್ಣವಾಗಿ ಸುಳ್ಳಾಗಿದೆ. ಅದನ್ನು ಸುಳ್ಳೆಂದು ಸಾಬೀತುಪಡಿಸಲು ನಾವು ಆಂದೋಲನ ನಡೆಸಬೇಕಾಗಿದೆ ಎಂದು ಹೇಳಿದರು.