ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಶೀರ್ವಾದದಿಂದ ಹಿಂದೂ ರಾಷ್ಟ್ರವನ್ನು ಸ್ಥಾಪಿಸೋಣ ! – ಆಚಾರ್ಯ ಚಂದ್ರ ಕಿಶೋರ್ ಪರಾಶರ, ಸಂಸ್ಥಾಪಕರು, ಅಂತಾರಾಷ್ಟ್ರೀಯ ಸನಾತನ ಹಿಂದೂ ವಾಹಿನಿ, ಬಿಹಾರ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ – ಎರಡನೇ ದಿನ (ಜೂನ್ 25): ಅನುಭವ ಕಥನ ಮತ್ತು ಉಪಾಸನೆಯ ಮಹತ್ವ

ಹಿಂದೂ ರಾಷ್ಟ್ರ ಇಂದಿನ ಅಗತ್ಯವಾಗಿದೆ. ನಮ್ಮಂತಹ ಸಣ್ಣ ಸಂಘಟನೆಗಳು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಿಂದ ಧರ್ಮಕಾರ್ಯಕ್ಕಾಗಿ ಊರ್ಜೆಯನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಶೀರ್ವಾದವಿದೆ. ಅವರ ಆಶೀರ್ವಾದದಿಂದ ನಾವು ಹಿಂದೂ ರಾಷ್ಟ್ರವನ್ನು ಸ್ಥಾಪಿಸೋಣ. ಅವರು ನೀಡಿರುವ ಜ್ಞಾನದ ಆಧಾರದಲ್ಲಿ ಪ್ರತಿಯೊಬ್ಬ ಹಿಂದೂವಿನ ವರೆಗೆ ಹಿಂದೂ ರಾಷ್ಟ್ರದ ಸಂಕಲ್ಪನೆಯನ್ನು ತಲುಪಿಸೋಣ. ಈ ಧರ್ಮಕಾರ್ಯಕ್ಕಾಗಿ ಭಗವಾನ ಪರಶುರಾಮನಂತೆ ಬ್ರಾಹ್ಮ ಮತ್ತು ಕ್ಷಾತ್ರ ತೇಜದ ಆವಶ್ಯಕತೆಯಿದೆ. ಹಿಂದೂ ರಾಷ್ಟ್ರದ ಸ್ಥಾಪನೆಯು ಕೇವಲ ಕಲ್ಪನೆಯಲ್ಲ, ವಾಸ್ತವವಾಗಿದೆ. ಕೆಲವು ಜನರು ಹಿಂದೂ ರಾಷ್ಟ್ರವನ್ನು ವಿರೋಧಿಸಬಹುದು, ಅದನ್ನು ಎದುರಿಸುವ ಸಿದ್ಧತೆಯನ್ನೂ ನಾವು ಹೊಂದಿರಬೇಕು.