ಸಂಸ್ಕಾರ ಮತ್ತು ಸಂಸ್ಕೃತಿ ಇವುಳಿಂದಾಗಿಯೇ ಲವ್ ಜಿಹಾದ್‌ಅನ್ನು ತಡೆಗಟ್ಟಲು ಸಾಧ್ಯ ! – ಛಾಯಾ ಆರ್. ಗೌತಮ್, ಜಿಲ್ಲಾಧ್ಯಕ್ಷೆ, ಹಿಂದು ಮಹಾಸಭಾ, ಮಥುರಾ, ಉತ್ತರಪ್ರದೇಶ

ವೈಶ್ವಿಕ ಹಿಂದು ರಾಷ್ಟ್ರ ಅಧಿವೇಶನದ ಎರಡನೇ ದಿನ (೨೫ ಜೂನ್)

ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ಮಾಡಿದ ಪ್ರಯತ್ನ

ಛಾಯಾ ಆರ್. ಗೌತಮ್

ವಿದ್ಯಾಧಿರಾಜ ಸಭಾಂಗಣ – ಹಿಂದೂಗಳು ತಮ್ಮ ಹೆಣ್ಣು ಮಕ್ಕಳಿಗೆ ಚಿಕ್ಕಂದಿನಿಂದಲೇ ಭಗವದ್ಗೀತೆಯನ್ನು ಏಕೆ ಕಲಿಸುವುದಿಲ್ಲ ? ‘ಪರಧರ್ಮಕ್ಕಿಂತ ಸ್ವಧರ್ಮ ಶ್ರೇಷ್ಠವಾಗಿದೆ’, ಈ ಭೋಧನೆಯನ್ನು ಭಗವದ್ಗೀತೆಯಲ್ಲಿ ನೀಡಲಾಗಿದೆ. ಹಿಂದು ಯುವತಿಯರಿಗೆ ಈ ಶಿಕ್ಷಣ ದೊರೆತರೆ, ಅವರು ಲವ್ ಜಿಹಾದ್‌ಗೆ ಬಲಿಯಾಗಲಾರರು. ಕಾನೂನು ಮೂಲಕ ಅಲ್ಲ ಆದರೆ ಸಂಸ್ಕಾರ ಮತ್ತು ಸಂಸ್ಕೃತಿ ಇವುಗಳಿಂದಾಗಿಯೇ ಲವ್ ಜಿಹಾದ್‌ಅನ್ನು ತಡೆಗಟ್ಟಲು ಸಾಧ್ಯ. ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧ ಮೊದಲ ಕಾನೂನು ರಚಿಸಲಾಯಿತು; ಆದರೆ ಪೊಲೀಸರು ಈ ಕಾನೂನಿಗನುಸಾರ ಕಲಮ್‌ಗಳನ್ನು ವಿಧಿಸುತ್ತಿರಲಿಲ್ಲ. ಲವ್ ಜಿಹಾದ್‌ನ ಒಂದು ಪ್ರಕರಣದಲ್ಲಿ ಪೊಲೀಸರಿಗೆ ಕಾನೂನು ಬಗ್ಗೆ ಮಾಹಿತಿ ನೀಡಿದ ನಂತರ ಅವರು ಆ ಕಾನೂನಿನ ಕಲಮ್‌ಅನ್ನು ವಿಧಿಸಿದರು, ಪ್ರಸ್ತುತ ಈ ಸ್ಥಿತಿ ಇದೆ. ಲವ್ ಜಿಹಾದ್‌ನ ಪ್ರಕರಣಗಳಿಂದ ಹೊರಗೆ ಬರಲು ಹಿಂದು ಯುವತಿಯರಿಗೆ ಸಲಹೆ ನೀಡುವುದು ಆವಶ್ಯಕವಾಗಿದೆ. ಲವ್ ಜಿಹಾದ್‌ನಲ್ಲಿ ಸಿಲುಕಿದ ೪೦-೫೦ ಹುಡುಗಿಯರಿಗೆ ನಾನು ಸಲಹೆ ನೀಡಿದೆ. ಅದು ವ್ಯರ್ಥ ಹೋಗಲಿಲ್ಲ. ಹಿಂದು ಜನಜಾಗೃತಿ ಸಮಿತಿ ಮಾಡುತ್ತಿರುವ ಹಿಂದೂಗಳ ಸಂಘಟನೆಯ ಕಾರ್ಯ ಬಹಳ ದೊಡ್ಡದಾಗಿದೆ. ಸದ್ಯದ ಸ್ಥಿತಿಯಲ್ಲಿ ಈ ಕಾರ್ಯದ ಆವಶ್ಯಕತೆ ಇದೆ, ಎಂದು ಹಿಂದು ಮಹಾಸಭೆಯ ಉತ್ತರಪ್ರದೇಶದ ಮಥುರಾ ಜಿಲ್ಲಾಧ್ಯಕ್ಷೆ ಛಾಯಾ ಆರ್. ಗೌತಮ ಇವರು ತಮ್ಮ ಭಾಷಣದಲ್ಲಿ ಹೇಳಿದರು. ಅವರು ‘ಲವ್ ಜಿಹಾದ್‌ಅನ್ನು ತಡೆಗಟ್ಟಲು ಮಾಡಿದ ಪ್ರಯತ್ನ’ ಈ ವಿಷಯವನ್ನು ಪ್ರಸ್ತುತಪಡಿಸಿದರು.