Nepal as Hindu Rashtra Again : ನೇಪಾಳದ ಸಾಮಾಜಿಕ ಸಂಘಟನೆಗಳು ಮತ್ತು ರಾಜಕಾರಣಿಗಳು ವಿದೇಶಿಯರ ಗುಲಾಮರು ! – ಶಂಕರ ಖರಾಲ, ಹಿರಿಯ ಉಪಾಧ್ಯಕ್ಷ, ವಿಶ್ವ ಹಿಂದೂ ಮಹಾಸಂಘ, ನೇಪಾಳ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ (ಜೂನ್ 25) – ಎರಡನೇ ದಿನದ ದ್ವಿತೀಯ ಸತ್ರ: ರಾಷ್ಟ್ರರಕ್ಷಣೆ ಮತ್ತು ಹಿಂದೂ ರಾಷ್ಟ್ರಕ್ಕಾಗಿ ಹಿಂದೂ ಸಂಘಟನೆ

ಶಂಕರ ಖರಾಲ, ಹಿರಿಯ ಉಪಾಧ್ಯಕ್ಷ, ವಿಶ್ವ ಹಿಂದೂ ಮಹಾಸಂಘ, ನೇಪಾಳ

ಗೋವಾ – ನೇಪಾಳ ಬಹುಸಂಖ್ಯಾತ ಸನಾತನಿ ಹಿಂದೂಗಳ ದೇಶವಾಗಿದೆ. ಅಲ್ಲಿಯ ರಾಷ್ಟ್ರಧ್ವಜ ಮತ್ತು ಪಂಚಾಂಗ ಎರಡೂ ಸನಾತನಿ ಆಗಿದೆ. ಪ್ರಾಚೀನ ಕಾಲದಲ್ಲಿ ಭಾರತದ ಋಷಿಮುನಿಗಳು ತಪಸ್ಸು ಮಾಡಲು ನೇಪಾಳಕ್ಕೆ ಬರುತ್ತಿದ್ದರು. ಆದ್ದರಿಂದಲೇ ನೇಪಾಳ ಒಂದು ತಪೋಭೂಮಿಯಾಗಿದೆ. ಈ ತಪೋಭೂಮಿಯಲ್ಲಿಯಿಂದ ಖಂಡಿತವಾಗಿಯೂ ಹಿಂದೂ ರಾಷ್ಟ್ರ ಬರುತ್ತದೆ. ಅದಕ್ಕಾಗಿ ಹಿಂದುತ್ವವಾದಿ ಸಂಘಟನೆಗಳು ಮತ್ತು ಧರ್ಮಾಭಿಮಾನಿಗಳು ಒಂದು ಘೋಷಣಾ ಪತ್ರವನ್ನು ಬಿಡುಗಡೆ ಮಾಡಿ, ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಮನವಿ ಮಾಡಬೇಕು ಎಂದು ನೇಪಾಳದ ವಿಶ್ವ ಹಿಂದೂ ಮಹಾಸಂಘದ ಹಿರಿಯ ಅಧ್ಯಕ್ಷರಾದ ಶ್ರೀ. ಶಂಕರ ಖರಾಲ ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ’ ಎರಡನೇ ದಿನದಂದು ಪ್ರತಿಪಾದಿಸಿದರು. ಅವರು ‘ನೇಪಾಳವನ್ನು ಪುನಃ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಕೈಕೊಳ್ಳಲಾಗುವ ಆಂದೋಲನ, ಅದಕ್ಕೆ ಸಿಗುತ್ತಿರುವ ಪ್ರತಿಸ್ಪಂದನೆ ಮತ್ತು ಎದುರಿಗಿರುವ ಸವಾಲುಗಳು’ ಈ ವಿಷಯಗಳ ಕುರಿತು ಮಾತನಾಡುತ್ತಿದ್ದರು.

ಶ್ರೀ. ಖರಾಲ ಇವರು ಮಾತನಾಡುತ್ತಾ, “ನೇಪಾಳ ದೇಶದ ಮೇಲೆ ಇಂದಿಗೂ ಭಾರತದ ಪ್ರಬಲ ಪ್ರಭಾವವಿದೆ. ಭಾರತದಲ್ಲಿ ` ಭಾರತ’ ಮತ್ತು `ಇಂಡಿಯಾ’ ಹೀಗೆ ಎರಡು ಸಿದ್ಧಾಂತಗಳಿವೆ. ಭಾರತಕ್ಕೆ, ನೇಪಾಳ ಮತ್ತು ಭಾರತದ ನಡುವೆ ಸೌಹಾರ್ದ ಸಂಬಂಧವಿರಬೇಕು; ಎನಿಸುತ್ತದೆ. ಆದರೆ ` ಇಂಡಿಯಾ’ಕ್ಕೆ ಹಾಗೆ ಆಗಬೇಕು ಎಂದೆನಿಸುವುದಿಲ್ಲ. ನೇಪಾಳದಲ್ಲಿ ಸಾಮಾಜಿಕ ಸಂಸ್ಥೆಗಳು ಮತ್ತು ರಾಜಕಾರಣಿಗಳು ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ದೇಣಿಗೆಗಳನ್ನು ಸ್ವೀಕರಿಸುತ್ತಾರೆ. ಇದರಿಂದಾಗಿ ಅವರು ವಿದೇಶಿ ಶಕ್ತಿಗಳ ದಾಸರಾಗಿದ್ದಾರೆ. ಅಧಿಕಾರದಲ್ಲಿ ಅವರ ಅಧಿಕ ಭಾಗವಹಿಸುವಿಕೆ ಇರುವುದರಿಂದ ನೇಪಾಳದಲ್ಲಿನ ಪ್ರಜಾಪ್ರಭುತ್ವವು ಜಾತ್ಯಾತೀತವಾಗಿದೆ.  ನೇಪಾಳದ ಬುಡಕಟ್ಟು ಜನರನ್ನು ಮೊದಲು ಬೌದ್ಧರನ್ನಾಗಿಸುತ್ತಾರೆ. ತದನಂತರ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತದೆ’