HinduRashtra from Kashmir : ಕಾಶ್ಮೀರದಿಂದ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು ! – ವಿಠ್ಠಲ ಚೌಧರಿ, ಅಧ್ಯಕ್ಷರು, ಯೂಥ ಫಾರ್ ಪನುನ್ ಕಾಶ್ಮೀರ, ದೆಹಲಿ

ರಾಮನಾಥ ದೇವಸ್ಥಾನ – ಕಾಶ್ಮೀರವು ಭಾರತೀಯ ಸಂಸ್ಕೃತಿಯ ಉಗಮಸ್ಥಾನವಾಗಿದೆ. ಕಾಶ್ಮೀರಕ್ಕೆ ಭವ್ಯ ಇತಿಹಾಸವಿದೆ. ಮಹಾನ್ ಋಷಿಗಳು, ವೀರರು ಕಾಶ್ಮೀರದಲ್ಲಿ ಆಗಿ ಹೋಗಿದ್ದಾರೆ; ಆದರೆ ತೇಜಸ್ವೀ ಇತಿಹಾಸ ಹೊಂದಿರುವ ಕಾಶ್ಮೀರದಲ್ಲಿ ಪ್ರಸ್ತುತ ಹಿಂದೂಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಯಾವಾಗ ಕಾಶ್ಮೀರದಲ್ಲಿ ಸನಾತನ ಧರ್ಮದ ಪ್ರಸಾರವಾಗುವುದೋ, ಆಗ ಮಾತ್ರ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುತ್ತದೆ. ಆಕ್ರಮಣಕಾರರು ಕಾಶ್ಮೀರವನ್ನು ಹಿಂದೂಗಳಿಂದ ಕಸಿದುಕೊಂಡಿದ್ದಾರೆ. ವಾಮನ ಅವತಾರದಲ್ಲಿ ವಿಷ್ಣುವು ಮೊದಲ ಹೆಜ್ಜೆಯಿಂದ ಬಲಿರಾಜನಿಂದ ಭೂಮಿಯನ್ನು ತೆಗೆದುಕೊಂಡನು. ಅದೇ ರೀತಿ ಕಾಶ್ಮೀರದಲ್ಲಿ ಹಿಂದೂ ರಾಷ್ಟ್ರದ ಮೊದಲ ಹೆಜ್ಜೆ ಇಡಬೇಕು. ಕಾಶ್ಮೀರದಿಂದ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು.

ಕಾಶ್ಮೀರಿ ಹಿಂದೂಗಳನ್ನು ಕಾಶ್ಮೀರದಿಂದ ಸ್ಥಳಾಂತರಿಸುವುದು 15 ನೇ ಶತಮಾನದಿಂದಲೂ ನಡೆಯುತ್ತಿದೆ. 1990 ರಲ್ಲಾದ ಸ್ಥಳಾಂತರವು ಕಾಶ್ಮೀರಿ ಹಿಂದೂಗಳ 7 ನೇ ಸ್ಥಳಾಂತರವಾಗಿದೆ. ಕಳೆದ 100 ವರ್ಷಗಳಲ್ಲಿ ಕಾಶ್ಮೀರಿ ಹಿಂದೂಗಳು 4 ಬಾರಿ ಸ್ಥಳಾಂತರಗೊಂಡಿದ್ದಾರೆ; ಆದರೆ ‘ಕಾಶ್ಮೀರ ಫೈಲ್ಸ್’ ಸಿನಿಮಾ ರಿಲೀಸ್ ಆದ ಮೇಲೆಯೇ ಕಾಶ್ಮೀರದ ಪರಿಸ್ಥಿತಿ ಭಾರತೀಯರಿಗೆ ಗೊತ್ತಾಗಿದ್ದು ನಮ್ಮ ದುರಾದೃಷ್ಟವಾಗಿದೆ. ಭಾರತ ಸ್ವತಂತ್ರವಾದಾಗ, ಕಾಶ್ಮೀರದಲ್ಲಿ ಹಿಂದೂ ಜನಸಂಖ್ಯೆಯು ಶೇಕಡಾ 14.1 ರಷ್ಟಿತ್ತು. ಪ್ರಸ್ತುತ, ಕಾಶ್ಮೀರಿ ಹಿಂದೂ ಜನಸಂಖ್ಯೆಯು ಶೇಕಡಾ 0.001 ರಷ್ಟಿದೆ. ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ‘ಏಕ್ ಭಾರತ್ ಅಭಿಯಾನ’ವನ್ನು ಪ್ರಾರಂಭಿಸಲಾಯಿತು. ಇದಕ್ಕಾಗಿ, ಭಾರತದ ವಿವಿಧ ಸ್ಥಳಗಳಲ್ಲಿ 20 ಮೆರವಣಿಗೆಗಳನ್ನು ನಡೆಸಲಾಯಿತು, 100 ಸಭೆಗಳನ್ನು ನಡೆಸಲಾಯಿತು. 250ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಈಗ ಮತ್ತೊಮ್ಮೆ ಈ ಅಭಿಯಾನದ ಎರಡನೇ ಹಂತವನ್ನು ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ವಿಠ್ಠಲ್ ಚೌಧರಿ ಅವರು ‘ಕಾಶ್ಮೀರಿ ಪುನರ್ವಸತಿ ಹೇಗೆ ಮಾಡಲಾಗುತ್ತದೆ?’ ಈ ವಿಷಯದ ಕುರಿತು ಮಾತನಾಡುತ್ತಿದ್ದರು.