Goshalas : ಮಹಾರಾಷ್ಟ್ರದಲ್ಲಿ ಪ್ರತಿಯೊಂದು ದೇವಸ್ಥಾನದಲ್ಲಿ ಗೋಶಾಲೆಯನ್ನು ಆರಂಭಿಸಬೇಕು ! – ಶೇಖರ ಮುಂದಡಾ, ಅಧ್ಯಕ್ಷ, ಮಹಾರಾಷ್ಟ್ರ ಗೋ ಸೇವಾ ಆಯೋಗ, ಪುಣೆ, ಮಹಾರಾಷ್ಟ್ರ

ಮುಖ್ಯ ಶೀರ್ಷಿಕೆ – ವೈಶ್ವಿಕ ಹಿಂದು ರಾಷ್ಟ್ರ ಮಹೋತ್ವವ ವಿಶೇಷ : ಹಿಂದು ಸಂಸ್ಕೃತಿ ಮತ್ತು ಹಿಂದು ಚಿನ್ಹೆಗಳನ್ನು ರಕ್ಷಿಸುವ ಕಾರ್ಯ

ದೇವಸ್ಥಾನಗಳ ಬಳಿ ಧನ ಮತ್ತು ಜಾಗ ಇದೆ. ಮಹಾರಾಷ್ಟ್ರದಲ್ಲಿ ಎಷ್ಟು ದೇವಸ್ಥಾನಗಳಿವೆಯೋ, ಅವುಗಳಲ್ಲಿ ಗೋಶಾಲೆಯನ್ನು ಆರಂಭಿಸಬೇಕು. ‘ಇಸ್ಕಾನ್’ ಸಂಸ್ಥೆಯು ಮಹಾರಾಷ್ಟ್ರದಲ್ಲಿ ೨ ಗೋಶಾಲೆಗಳನ್ನು ಆರಂಭಿಸಿದೆ. ತುಳಜಾಪುರ ದೇವಸ್ಥಾನ, ಶಿರ್ಡಿ ದೇವಸ್ಥಾನ ಮತ್ತು ಪಂಢರಪುರ ದೇವಸ್ಥಾನ ಇವರೊಂದಿಗೆ ಗೋಶಾಲೆಯನ್ನು ಆರಂಭಿಸುವ ವಿಷಯದಲ್ಲಿ ನಾವು ಮಾತನಾಡಿದ್ದೇವೆ. ಗೋಮಾತೆ ಉಳಿದರೆ, ದೇಶವು ಉಳಿಯವುದು. ಗೋಮಾತೆಯನ್ನು ಗೌರವಿಸುವವನೇ ನಿಜವಾದ ಹಿಂದು ಆಗಿದ್ದಾನೆ. ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನಿದೆ; ಆದರೆ ಅದರ ಕಾರ್ಯಾಚರಣೆಯಾಗುತ್ತಿರಲಿಲ್ಲ. ಮಹಾರಾಷ್ಟ್ರದಲ್ಲಿ ಗೋ ಆಯೋಗದ ಸ್ಥಾಪನೆಯಾದ ನಂತರ ಗೋಹತ್ಯೆಯನ್ನು ತಡೆಗಟ್ಟಲು ಸ್ವಲ್ಪ ಮಟ್ಟಿಗೆ ಯಶ ಪ್ರಾಪ್ತವಾಗಿದೆ. ಗೋಸಾಕಾಣಿಕೆ, ಗೋ ಸಂರಕ್ಷಣೆ, ಗೋಶಾಲೆ, ಗೋ ಕೃಷಿ, ಗೋ ಪ್ರವಾಸೋದ್ಯಮ, ಗೋ ಸಾಕ್ಷರತೆ ಇವುಗಳ ಕುರಿತು ಕೆಲಸ ಮಾಡಬೇಕಾಗಿದೆ. ಇದಕ್ಕನುಸಾರ ಕೆಲಸ ಮಾಡಿದರೆ, ಮಾತ್ರ ಗೋಮಾತೆಗೆ ಗೌರವದ ಸ್ಥಾನ ಪ್ರಾಪ್ತವಾಗುವುದು.