Medical E-Visa For Bangladesh: ಬಾಂಗ್ಲಾದೇಶದಿಂದ ಚಿಕಿತ್ಸೆಗಾಗಿ ಭಾರತಕ್ಕೆ ಬರುವವರಿಗೆ ಶೀಘ್ರದಲ್ಲೇ ‘ಇ-ಮೆಡಿಕಲ್ ವೀಸಾ’ ಪ್ರಾರಂಭ!

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಪ್ರಧಾನಿ ನರೇಂದ್ರ ಮೋದಿ

ನವದೆಹಲಿ – ಇತ್ತೀಚೆಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದರು. ಅವರು ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು. ಇದಾದ ನಂತರ, ಪ್ರಧಾನಿ ಮೋದಿಯವರು ಬಾಂಗ್ಲಾದೇಶದಿಂದ ಭಾರತಕ್ಕೆ ಚಿಕಿತ್ಸೆಗಾಗಿ ಬರುವವರಿಗೆ ‘ಇ-ಮೆಡಿಕಲ್ ವೀಸಾ’ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಘೋಷಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ, ಬಾಂಗ್ಲಾದೇಶದ ಉತ್ತರ-ಪಶ್ಚಿಮ ಭಾಗದ ಜನರ ಅನುಕೂಲಕ್ಕಾಗಿ ಬಾಂಗ್ಲಾದೇಶದ ರಂಗ್‌ಪುರದಲ್ಲಿ ಹೊಸ ಸಹಾಯಕ ಹೈಕಮಿಷನ್ ತೆರೆಯುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಬಾಂಗ್ಲಾದೇಶವು ಭಾರತದ ದೊಡ್ಡ ಅಭಿವೃದ್ಧಿ ಪಾಲುದಾರನಾಗಿದ್ದು, ನಾವು ಬಾಂಗ್ಲಾದೇಶದೊಂದಿಗಿನ ನಮ್ಮ ಸಂಬಂಧಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇವೆ. ಕಳೆದ ವರ್ಷ ನಾವು ಒಟ್ಟಿಗೆ ಅನೇಕ ಪ್ರಮುಖ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಎರಡೂ ದೇಶಗಳಲ್ಲಿ ಭಾರತೀಯ ರೂಪಾಯಿ ವಹಿವಾಟು ಆರಂಭವಾಗಿದೆ ಎಂದು ಪ್ರಧಾನಿ ಹೇಳಿದರು.

ಸಂಪಾದಕೀಯ ನಿಲುವು

ಈ ಯೋಜನೆಯಿಂದ ಬಾಂಗ್ಲಾದೇಶದ ಹಿಂದೂಗಳಿಗೆ ಲಾಭವಾಗುವುದೋ ಅಥವಾ ಅಲ್ಲಿನ ಮುಸ್ಲಿಮರಿಗೆ? ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗಾಗಿ ಸರಕಾರವು ಯೋಜನೆಯನ್ನು ಜಾರಿಗೊಳಿಸಬೇಕು ಮತ್ತು ಭಾರತದಲ್ಲಿರುವ ಬಾಂಗ್ಲಾದೇಶದ ನುಸುಳುಕೋರರನ್ನು ಹೊರ ಹಾಕಲು ಯುದ್ಧೋಪಾದಿಯಲ್ಲಿ ಪ್ರಯತ್ನಗಳನ್ನು ಮಾಡಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ.