Santosh Devji Maharaj on Hindu Rashtra : ಅಂತಹ ಸಂಪ್ರದಾಯ ಸ್ಥಾಪಿಸಿ ಭಾರತ ಸಹಿತ ಜಗತ್ತಿನಲ್ಲಿ ಅನೇಕ ಹಿಂದೂ ರಾಷ್ಟ್ರಗಳು ಸಾಧ್ಯ ! – ಪ.ಪೂ. ಸಂತ ಡಾ. ಸಂತೋಷ ದೇವಜಿ ಮಹಾರಾಜ್, ಸಂಸ್ಥಾಪಕರು, ಶಿವಧಾರ ಮಿಷನ್ ಫೌಂಡೇಶನ್, ಮಹಾರಾಷ್ಟ್ರ

ಆಧ್ಯಾತ್ಮಿಕ ಸಂಸ್ಥೆಗಳ ಮೂಲಕ ಧಾರ್ಮಿಕ ಜಾಗೃತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ

ಪ.ಪೂ. ಸಂತ ಡಾ. ಸಂತೋಷ ದೇವಜಿ ಮಹಾರಾಜ್

ಇಂದು ಜಗತ್ತಿನಲ್ಲಿ ಒಂದೇ ಒಂದು ಹಿಂದೂ ದೇಶವಿಲ್ಲ. ಒಂದು ನೇಪಾಳ ಇತ್ತು; ಆದರೆ ಅದೂ ಈಗ ಇಲ್ಲ. ಜಗತ್ತಿನಲ್ಲಿ ಒಂದೇ ಅಲ್ಲ, ಜಗತ್ತಿನಲ್ಲಿ ಅನೇಕ ಹಿಂದೂ ರಾಷ್ಟ್ರಗಳು ಆಗಲಿದೆ, ಎಂದು ಯೋಚಿಸಿ. ಶ್ರೀರಾಮನು ತನ್ನ ವನವಾಸದಲ್ಲಿ ಯಾವುದೇ ಸೌಲಭ್ಯಗಳನ್ನು ಅಥವಾ ವ್ಯವಸ್ಥೆಗಳನ್ನು ತೆಗೆದುಕೊಳ್ಳಲಿಲ್ಲ. ಎಲ್ಲಾ ಸಂತೋಷಗಳನ್ನು ತ್ಯಜಿಸಿದರು; ಹಾಗಾಗಿ ಅವರನ್ನು ‘ಮರ್ಯಾದಾ ಪುರುಷೋತ್ತಮ’ ಎಂದು ಕರೆಯುತ್ತಾರೆ. ದೇವರನ್ನು ನಂಬುವ ಅನೇಕ ಸಮಾಜಗಳಿವೆ, ಅನೇಕ ಸಂಪ್ರದಾಯಗಳಿವೆ; ಆದರೆ ಅವರನ್ನು ಹಿಂದುತ್ವದಿಂದ ದೂರ ಇಡಲಾಗಿದೆ. ಅಂತಹ ಸಂಪ್ರದಾಯಗಳನ್ನು ಸ್ಥಾಪಿಸಿ ಭಾರತ ಮಾತ್ರವಲ್ಲ, ಇಡೀ ಪ್ರಪಂಚವು ಅನೇಕ ಹಿಂದೂ ರಾಷ್ಟ್ರಗಳಾಗಲಿದೆ. ನಾವು ನಮ್ಮ ಸಮಾಜವನ್ನು ನೋಡಬೇಕು.

ಹಿಂದೂಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರ ದೌರ್ಬಲ್ಯಗಳನ್ನು ಪರಿಹರಿಸಬೇಕು. ಅದಕ್ಕಾಗಿ ನೀವು ಇತರ ಸಂಘಟನೆಗಳ ಸಹಾಯವನ್ನು ತೆಗೆದುಕೊಳ್ಳಬಹುದು. ನಾವು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳೋಣ ಮತ್ತು ನಮ್ಮ ಪ್ರದೇಶದಲ್ಲಿ ಕಾರ್ಯತಂತ್ರವನ್ನು ನಿರ್ಧರಿಸೋಣ ಮತ್ತು ಕ್ರಮ ಕೈಗೊಳ್ಳೋಣ. ಚಿಂತನೆಯನ್ನು ಇಲ್ಲಿಗೆ ಬಿಡದೆ ಆಯಾ ಕ್ಷೇತ್ರಗಳಲ್ಲಿ ವೈಚಾರಿಕ ಕ್ರಾಂತಿಯ ಕಿಚ್ಚು ಹೊತ್ತಿಸೋಣ ಎಂದು ಹೇಳಿದರು.