Sanatan Dharma in African Culture : ಆಫ್ರಿಕಾದವರಿಗೆ ಸನಾತನ ಧರ್ಮದ ಮಹತ್ವ ತಿಳಿದರೆ, ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರ ಸಾಧ್ಯ ! – ಶ್ರೀವಾಸ ದಾಸ ವನಚಾರಿ, ಇಸ್ಕಾನ್, ಆಫ್ರಿಕಾ

ಆಧ್ಯಾತ್ಮಿಕ ಸಂಸ್ಥೆಗಳ ಮೂಲಕ ಧರ್ಮಜಾಗೃತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ

ಸನಾತನ ಧರ್ಮವು ಅನಾದಿ ಅನಂತವಾಗಿದೆ. ಸನಾತನದ ಧರ್ಮವು ಲಕ್ಷಾಂತರ ವರ್ಷಗಳಷ್ಟು ಹಳೆಯದಾಗಿದೆ. ಸನಾತನ ಧರ್ಮವು ಎಲ್ಲ ಧರ್ಮಗಳ ಮೂಲವಾಗಿದೆ. ಪ್ರಭುಪಾದ ಸ್ವಾಮೀಜಿಗಳು ಅಮೇರಿಕದಲ್ಲಿ ‘ಇಸ್ಕಾನ್’ಅನ್ನು ಸ್ಥಾಪಿಸಿದರು. ಈ ಮಾಧ್ಯಮದಿಂದ ಅವರು ಜಗತ್ತಿನಾದ್ಯಂತ ಸನಾತನ ಧರ್ಮದ ಪ್ರಸಾರ ಮಾಡಿದರು. ಅವರು ಸನಾತನ ಧರ್ಮದ ವಿವಿಧ ಗ್ರಂಥಗಳ ಜಗತ್ತಿನಾದ್ಯಂತದ ವಿವಿಧ ಭಾಷೆಗಳಲ್ಲಿ ಭಾಷಾಂತರ ಮಾಡಿದರು. ಮಹಾಭಾರತಕ್ಕೆ ಜಗತ್ತಿನಾದ್ಯಂತ ಒಂದು ವಿಶೇಷ ಮಹತ್ವವಿದೆ. ಆಫ್ರಿಕಾದಲ್ಲಿ ಸನಾತನ ಧರ್ಮದ ಪ್ರಸಾರ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಆಫ್ರಿಕಾದಲ್ಲಿ ಹಿಂದೂಗಳ ೫೭ ದೇವಸ್ಥಾನಗಳಿವೆ. ಆಫ್ರಿಕಾದಲ್ಲಿ ರಾಮಾಯಣ ಮತ್ತು ಭಗವದ್ಗೀತೆಯ ಅಧ್ಯಯನವನ್ನು ಮಾಡಲಾಗುತ್ತದೆ. ಅಲ್ಲಿನ ಕ್ರೈಸ್ತರು ಹಿಂದು ಧರ್ಮವನ್ನು ವಿರೋಧಿಸುತ್ತಾರೆ. ಅವರಿಗೆ ಆಫ್ರಿಕಾದಲ್ಲಿ ಹಿಂದು ಧರ್ಮದ ಪ್ರಸಾರ ಇಷ್ಟವಾಗುವುದಿಲ್ಲ; ಆದರೆ ನಾವು ‘ಹರಿನಾಮ’ವನ್ನು ಹೇಳುತ್ತಾ ಅವರನ್ನು ಎದುರಿಸುತ್ತೇವೆ.

ಆಫ್ರಿಕಾದ ಜನರು ಕುಂಭಕರ್ಣನಂತೆ ಮಲಗಿದ್ದಾರೆ. ಅವರಿಗೆ ಸನಾತನ ಧರ್ಮದ ಮಹತ್ವ ಮನವರಿಕೆಯಾದರೆ, ಅಲ್ಲಿ ಸನಾತನ ಧರ್ಮದ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತದೆ. ಘಾನಾದಲ್ಲಿ ಅನೇಕ ಜನರು ಹಿಂದು ಧರ್ಮವನ್ನು ಸ್ವೀಕರಿಸುತ್ತಾರೆ. ಅಲ್ಲಿ ಸನಾತನ ಧರ್ಮದ ಅಂತರ್ಗತ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯವು ನಡೆದಿದೆ.