ISRO Successfully Tests RLV: ‘ಇಸ್ರೋ’ದಿಂದ ಪುನರ್ಬಳಕೆ ಉಡಾವಣೆ ವಾಹನದ ಮೂರನೇ ಪರೀಕ್ಷೆ ಕೂಡ ಯಶಸ್ವಿ !

ರೀಯುಜೆಬಲ್ ಲಾಂಚ್ ವೆಹಿಕಲ್’ನ (‘ಆರ್.ಎಲ್.ವಿ.’ಯ)

ಬೆಂಗಳೂರು – ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದಿಂದ ಜೂನ್ ೨೩ ರಂದು ಸತತ ಮೂರನೇಯ ಬಾರಿ ‘ರೀಯುಜೆಬಲ್ ಲಾಂಚ್ ವೆಹಿಕಲ್’ನ (‘ಆರ್.ಎಲ್.ವಿ.’ಯ) ಎಂದರೆ ಪುನರ್ಬಳಕೆಗೆ ಸಾಧ್ಯವಾಗುವಂತಹ ಉಡಾವಣೆಯ ವಾಹನ ಪರೀಕ್ಷೆಯಲ್ಲಿ ಯಶಸ್ಸು ದೊರೆತಿದೆ.

ಈ ಪರೀಕ್ಷೆಯಲ್ಲಿ ಭಾರತೀಯ ವಾಯುಸೇನೆಯ ಚಿನೂಕ ಹೆಲಿಕಾಪ್ಟರ್ ಯಿಂದ ‘ಪುಷ್ಪಕ’ ರಾಕೇಟನ್ನು ಚಿತ್ರದುರ್ಗದಲ್ಲಿನ ಎರೋನಾಟಿಕಲ್ ಪರೀಕ್ಷಾ ಕ್ಷೇತ್ರದಲ್ಲಿ ೪.೫ ಕಿಲೋ ಮೀಟರ್ ಎತ್ತರಕ್ಕೆ ಕೊಂಡೊಯ್ಯದರು ಮತ್ತು ರನ್ವೆಯಲ್ಲಿ ಲ್ಯಾಂಡಿಂಗ್ ಗಾಗಿ ಬಿಟ್ಟರು. ಪುಷ್ಪಕವು ನಿಖರವಾಗಿ ಲ್ಯಾಂಡಿಂಗ್ ಮಾಡಿತು. ಯಾವಾಗ ಪುಷ್ಪಕ್ ಹೆಲಿಕಾಪ್ಟರ್ ನಿಂದ ಬಿಡಲಾಯಿತು, ಆಗ ಅದರ ಲ್ಯಾಂಡಿಂಗ್ ವೇಗ ಶೇಕಡ ೩೨೦ ಕಿಲೋಮೀಟರ್ ಗಿಂತಲೂ ಹೆಚ್ಚಾಗಿತ್ತು. ಈ ವೇಗ ವ್ಯವಸಾಯಿಕ ವಿಮಾನದ ೨೬೦ ಕಿಲೋಮೀಟರ್ ಪ್ರತಿ ಗಂಟೆ ಮತ್ತು ಯುದ್ಧ ವಿಮಾನದ ೨೮೦ ಕಿಲೋಮೀಟರ್ ಪ್ರತಿ ಗಂಟೆಯ ವೇಗಗಿಂತಲೂ ಹೆಚ್ಚಾಗಿತ್ತು. ಪುಷ್ಪಕದಲ್ಲಿ ಅಳವಡಿಸಿರುವ ಬ್ರೇಕ್ ಪ್ಯಾರಾಶೂಟಿನ ಸಹಾಯದಿಂದ ವೇಗ ಕಡಿಮೆ ಮಾಡಲಾಯಿತು. ಇದರ ನಂತರ ಲ್ಯಾಂಡಿಂಗ್ ಗೇರ್ ಬ್ರೇಕ್ ಹಾಕಲಾಯಿತು ಮತ್ತು ವಾಹನ ರನ್ವೆಯಲ್ಲಿ ನಿಲ್ಲಿಸಲಾಯಿತು.

ನಾಸಾದ ಪೇಸ್ ಶಟಲ್ ನಂತೆ ಇಸ್ರೋದ ಆರ್.ಎಲ್.ವಿ.

ಇಸ್ರೋದ ರೀಯುಜೇಬಲ್ ಲಾಂಚ್ ವೆಹಿಕಲ್ ಇದು ನಾಸಾದ ‘ಸ್ಪೇಸ್ ಶಟಲ್’ನಂತೆ ಇದೆ. ೨೦೩೦ ರಲ್ಲಿ ಈ ಯಾನ ಪೂರ್ಣ ಆದ ನಂತರ ಅದು ೧೦ ಸಾವಿರ ಕೆಜಿಗಿಂತಲೂ ಹೆಚ್ಚಿನ ವಸ್ತುಗಳನ್ನು ಪೃಥ್ವಿಯ ಕಕ್ಷೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಕಡಿಮೆ ಖರ್ಚಿನಲ್ಲಿ ಉಪಗ್ರಹಗಳನ್ನು ಕಕ್ಷೆಗೆ ಸ್ಥಾಪಿಸುವುದು.

ಪುನರ್ಬಳಕೆ ತಂತ್ರಜ್ಞಾನ ಎಂದರೆ ಏನು ?

ಬಾಹ್ಯಾಕಾಶ ಅಭಿಯಾನದಲ್ಲಿ ರಾಕೆಟ್ ಮತ್ತು ಅದರಲ್ಲಿನ ಬಾಹ್ಯಾಕಾಶ ನೌಕೆ ಇರುತ್ತದೆ. ರಾಕೆಟ್ ನ ಕೆಲಸ ಬಾಹ್ಯಾಕಾಶ ನೌಕೆಯನ್ನು ಆಕಾಶಕ್ಕೆ ಒಯ್ಯುವುದು ಆಗಿದೆ. ಕೆಲಸ ಪೂರ್ಣ ಆದ ನಂತರ ರಾಕೆಟ್ಅನ್ನು ಸಮುದ್ರದಲ್ಲಿ ಬೀಳಿಸಲಾಗುತ್ತದೆ, ಅಂದರೆ ಅದರ ಪುನರ್ಬಳಕೆ ಆಗುವುದಿಲ್ಲ. ಈಗ ವಿಮಾನನಂತೆಯೇ ರಾಕೆಟ್ ಬಾಹ್ಯಾಕಾಶ ನೌಕೆಯನ್ನು ಆಕಾಶಕ್ಕೆ ಕೊಂಡೊಯ್ದ ನಂತರ ಪೃಥ್ವಿಯ ಮೇಲೆ ಹಿಂತರಿಸಬಹುದು. ಇಸ್ರೋ ಈ ರೀತಿಯ ಬಾಹ್ಯಾಕಾಶ ನೌಕೆಯ ನಿರ್ಮಾಣ ಮತ್ತು ಉಡಾವಣೆ ೨೦೨೩ ವರೆಗೆ ಮಾಡಬಹುದೆಂದು ವಿಜ್ಞಾನಿಗಳಿಗೆ ಅನಿಸುತ್ತಿದೆ. ಅಮೇರಿಕಾದ ಉದ್ಯಮಿ ಇಲಾನ್ ಮಸ್ಕ್ ಇವರ ಕಂಪನಿಯ ಬಳಿ ಈ ರೀತಿಯ ಖಾಸಗಿ ಬಾಹ್ಯಾಕಾಶ ಉಡಾವಣೆ ಇವೆ.