೧. ಜೀವನದಲ್ಲಿ ನಿತ್ಯ ಪರೀಕ್ಷೆಯ ಮಹತ್ವ
‘ನಮ್ಮೆದುರು ಬಂದ ವ್ಯಕ್ತಿಯೇ ನಮ್ಮ ‘ಗುರು’ ಆಗಿದ್ದಾರೆ’, ಎಂದು ತಿಳಿದು ಸಾಧನೆಯನ್ನು ಮಾಡಬೇಕು. ‘ದೇವರು ಯಾವಾಗ ಯಾರ ರೂಪದಲ್ಲಿ ಬಂದು ನಮ್ಮನ್ನು ಪರೀಕ್ಷಿಸುವನೋ ?’, ಎಂದು ಹೇಳಲು ಬರುವುದಿಲ್ಲ. ಆದುದರಿಂದ ಉತ್ತಮ ಶಿಷ್ಯನು ಯಾವಾಗಲೂ ಪರೀಕ್ಷೆಯನ್ನು ಎದುರಿಸಲು ಸಿದ್ಧನಾಗಿರುತ್ತಾನೆ. ದೇವರು ಕೆಲವೊಮ್ಮೆ ಗುರುಗಳ ರೂಪದಿಂದ ಪರೀಕ್ಷೆ ತೆಗೆದುಕೊಳ್ಳುತ್ತಾನೆ ಮತ್ತು ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಯ ರೂಪದಲ್ಲಿಯೂ ಅವನು ಬರುತ್ತಾನೆ. ನಮ್ಮ ಪ್ರತಿನಿತ್ಯದ ಜೀವನ ಇದೊಂದು ಪರೀಕ್ಷೆಯೇ ಆಗಿದೆ. ಅದನ್ನು ನಗುನಗುತ್ತಾ ಎದುರಿಸುವುದೇ ನಮ್ಮ ಸತ್ತ್ವಪರೀಕ್ಷೆಯಾಗಿದೆ. ಜೀವನದಲ್ಲಿ ಮಾಯೆಗೆ ಮರುಳಾದವನು ಸಿಲುಕಿಕೊಳ್ಳುತ್ತಾನೆ ಮತ್ತು ಜೀವನ ದಲ್ಲಿ ಅಧ್ಯಾತ್ಮದ ಶೋಧಕ್ಕಾಗಿ ಬದುಕಿದವನು ಗೆಲ್ಲುತ್ತಾನೆ.
೨. ‘ಸಂತ, ಗುರು ಮತ್ತು ಸದ್ಗುರು’, ಹೀಗೆ ದೇವರು ನೀಡಿದ ಪದವಿಗಳಿಂದ ಜೀವನವು ಸಾರ್ಥಕವಾಗುತ್ತದೆ!
ಕೇವಲ ಆಧುನಿಕ ವೈದ್ಯರು ಮತ್ತು ಅಭಿಯಂತರು (ಇಂಜಿನಿಯರ್) ಇಂತಹ ಪದವಿಗಳನ್ನು ಪಡೆದರೆ ಉಪಯೋಗ ವಿಲ್ಲ, ಆದರೆ ಅಧ್ಯಾತ್ಮದಲ್ಲಿನ ಪದವಿಯನ್ನು ಪಡೆಯಬೇಕಾಗುತ್ತದೆ, ಅಂದರೆ ಅಧ್ಯಾತ್ಮದಲ್ಲಿ ಸಾಧನೆಯನ್ನು ಮಾಡಿ ಪ್ರಗತಿ ಮಾಡಿ ಕೊಳ್ಳಬೇಕಾಗುತ್ತದೆ. ನಂತರವೇ ದೇವರ ಪದವಿಯನ್ನು ಸಂಪಾದಿಸಲು ಬರುತ್ತದೆ. ‘ಸಂತ, ಗುರು ಮತ್ತು ಸದ್ಗುರು’, ಹೀಗೆ ದೇವರು ನೀಡಿದ ಪದವಿಗಳಿಂದ ಜೀವನ ಸಾರ್ಥಕವಾಗುತ್ತದೆ. ಗಣಿತ, ಭೂಗೋಲ ಇತ್ಯಾದಿ ಅಶಾಶ್ವತ ವಿಷಯಗಳಿಂದಲ್ಲ, ಆದರೆ ಗುರುಕೃಪೆಯಿಂದ ಮತ್ತು ಗುರುಗಳ ಬೋಧನೆಯನ್ನು ಕೃತಿಯಲ್ಲಿ ತಂದು ಸಾಧನೆ ಮಾಡಿದರೆ ಮೋಕ್ಷವು ಪ್ರಾಪ್ತವಾಗುತ್ತದೆ.
೩. ಸಮಾಜಕ್ಕೆ ಮೋಕ್ಷಪ್ರಾಪ್ತಿಯನ್ನು ಮಾಡಿಸಿಕೊಡುವ ಶಿಕ್ಷಣ ಮಂದಿರಗಳು ಅತ್ಯಂತ ಆವಶ್ಯಕವಾಗಿವೆ!
‘ಭಗವಂತನ ನಾಮದ ಮಹತ್ವದ ಬಗ್ಗೆ ಹೇಳುವುದು, ‘ಅದನ್ನು ಹೇಗೆ ಜಪಿಸಬೇಕು ?’, ಎಂಬುದನ್ನು ಕಲಿಸುವುದು’, ಇದೇ ನಿಜವಾದ ಶಿಕ್ಷಣವಾಗಿದೆ. ಮೃತ್ಯುವಿನ ನಂತರ ತಲೆಯಲ್ಲಿರುವ ‘ಗಣಿತ ಮತ್ತು ವಿಜ್ಞಾನ’ ಈ ಎಲ್ಲ ಜಡ ವಿಷಯಗಳು ಸುಟ್ಟು ಬೂದಿಯಾಗುತ್ತವೆ. ಕೇವಲ ಶಾಶ್ವತವಾಗಿರುವ ದೇವರ ನಾಮವೇ ಆ ಜೀವದೊಂದಿಗೆ ಹೋಗುತ್ತದೆ. ಶಾಲೆಯಲ್ಲಿನ ಗುರುಗಳಿಗೆ ಅಸಾಧಾರಣ ಮಹತ್ವವಿದೆ. ಉತ್ತಮ ಗುರುವೇ ಜೀವನದಲ್ಲಿ ನಿಜವಾದ ಮಾರ್ಗದರ್ಶಕರಾಗಿದ್ದಾರೆ. ‘ಯಾವ ಶಾಲೆಯು ಗುರುಗಳ ಮಹತ್ವವನ್ನು ಕಲಿಸುವುದಿಲ್ಲವೋ, ಆ ಶಾಲೆ ಮತ್ತು ಆ ಶಿಕ್ಷಣದ ಉಪಯೋಗವೇನು ?’, ಇಂತಹ ಜಡ ನಿರರ್ಥಕ ಶಿಕ್ಷಣದಿಂದ ಜನರ ಅನೇಕ ಜನ್ಮಗಳು ವ್ಯರ್ಥವಾಗುತ್ತವೆ. ನಿಜವಾದ ಶಾಲೆ ಮೋಕ್ಷಪ್ರಾಪ್ತಿಯನ್ನು ಮಾಡಿಸಿಕೊಡುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಶಾಲೆಗೆ ದೇವಸ್ಥಾನದ ಸ್ಥಾನಮಾನವನ್ನು ನೀಡಲಾಗಿದೆ. ಶಾಲೆಗೆ ‘ಶಿಕ್ಷಣ ಮಂದಿರ’, ಎಂದು ಸಂಬೋಧಿಸಲಾಗುತ್ತದೆ. ಇಂದಿನ ಸಮಾಜಕ್ಕೆ ಮೋಕ್ಷಪ್ರಾಪ್ತಿಯನ್ನು ಮಾಡಿಸಿಕೊಡುವ ಶಿಕ್ಷಣ ಮಂದಿರಗಳು ಅತ್ಯಂತ ಆವಶ್ಯಕವಾಗಿವೆ.’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ