Pakistan Minority Hindus : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಿಂದ ಹಿಂದೂ ಮತ್ತು ಸಿಖ್ಖರ ಪಲಾಯನ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಲ್ಪಸಂಖ್ಯಾತರ ಅನೇಕ ಕುಟುಂಬಗಳು ಅಲ್ಲಿನ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯಿಂದಾಗಿ ದೇಶದ ಇತರ ಭಾಗಗಳಿಗೆ ಅಥವಾ ವಿದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದು ಹಿಂದೂ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ವರ್ಷದ ಏಪ್ರಿಲ್ ಅಂತ್ಯದವರೆಗೆ ಭಯೋತ್ಪಾದನೆಗೆ ಸಂಬಂಧಿಸಿದ ಕನಿಷ್ಠ 179 ಘಟನೆಗಳು ನಡೆದಿವೆ.

1. ಪಾಕಿಸ್ತಾನದ ಹಿಂದೂ ದೇವಾಲಯದ ಆಡಳಿತ ಸಮಿತಿಯ ಹರೂನ್ ಸಬರದಿಯಾಲ ಮಾತನಾಡಿ, ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಕುಟುಂಬಗಳು ಬಹುತೇಕ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಿಗೆ ಸ್ಥಳಾಂತರಗೊಂಡರೆ, ಕೆಲವರು ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಿದ್ದಾರೆ.
ಈ ಪ್ರಾಂತ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯು ಹಿಂದೂ ಮತ್ತು ಸಿಖ್ ವ್ಯಾಪಾರಿಗಳನ್ನು ತಮ್ಮ ಪೂರ್ವಜರ ಮನೆಗಳನ್ನು ತೊರೆಯುವಂತೆ ಮಾಡಿದೆ. ಬುಡಕಟ್ಟು ಪ್ರದೇಶಗಳು, ಪೇಶಾವರ, ಸ್ವಾತ್ ಮತ್ತು ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಿನ ಹಿಂದೂಗಳು ಮತ್ತು ಸಿಖ್ಖರು ತಮ್ಮ ಪೂರ್ವಜರ ಭೂಮಿಯನ್ನು ತೊರೆದಿದ್ದಾರೆ.

2. ಕಳೆದ ಕೆಲವು ವರ್ಷಗಳಲ್ಲಿ ಈ ಪ್ರಾಂತ್ಯದಲ್ಲಿ ಗುರಿ ಹತ್ಯೆಗಳ(ಟಾರ್ಗೆಟ್ ಕಿಲ್ಲಿಂಗ್) ಘಟನೆಗಳು ಹೆಚ್ಚಿವೆ. ಇದರಿಂದ ಅನೇಕ ಸಿಖ್ ಕುಟುಂಬದವರು ಪೇಶಾವರದ ಹಳೆಯ ಸಿಖ್ ವಸಾಹತುಗಳಲ್ಲಿ ಒಂದಾದ ಮೊಹಲ್ಲಾ ಜೋಗನ್ ಷಾಹ ತೊರೆದಿದ್ದಾರೆ. ಈ ಪ್ರದೇಶದಲ್ಲಿ ಐತಿಹಾಸಿಕ ಗುರುದ್ವಾರ ಮತ್ತು ಸಿಖ್ ಸಮುದಾಯದ ಶಾಲೆಯಿದೆ. ಮೊಹಲ್ಲಾ ಜೋಗನ್ ಶಾಹನಲ್ಲಿ ಸುಮಾರು 6 ಸಾವಿರ ಸಿಖ್ಖರು ವಾಸಿಸುತ್ತಿದ್ದರು.

3. ಇಲ್ಲಿನ ನಿವಾಸಿ ಪ್ರದೀಪ್ ಸಿಂಗ್ ಮಾತನಾಡಿ, ಇದು ನಮ್ಮ ಪೂರ್ವಜರು ವಾಸಿಸುತ್ತಿದ್ದ ಪ್ರದೇಶವಾಗಿದೆ. ಇಲ್ಲಿ ನಾವು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿಕೊಂಡಿದ್ದೇವೆ.

ಸಂಪಾದಕೀಯ ನಿಲುವು

ಭಾರತವಿರಲಿ ಅಥವಾ ಪಾಕಿಸ್ತಾನವಿರಲಿ ಮತಾಂಧ ಮುಸ್ಲಿಮರಿಂದಾಗಿ ಹಿಂದೂಗಳು ಪಲಾಯನ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಇದು ಕಳೆದ 1 ಸಾವಿರ ವರ್ಷಗಳ ಅನುಭವವಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಆವಶ್ಯಕವಾಗಿದೆ !