ದೌಲತಾಬಾದ (ಛತ್ರಪತಿ ಸಂಭಾಜಿನಗರ)ನಲ್ಲಿ 5 ಹಿಂದೂಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಮತಾಂಧರು!

  • ಗೋಹತ್ಯೆ ಬಗ್ಗೆ ಮಾಹಿತಿ ನೀಡಿರುವ ಅನುಮಾನ; ಹಲ್ಲೆ

  • ದ್ವಿಚಕ್ರವಾಹನಕ್ಕೆ ಬೆಂಕಿ, 150 ಜನರ ವಿರುದ್ಧ ಗಲಭೆ ದೂರು ದಾಖಲು!

ಛತ್ರಪತಿ ಸಂಭಾಜಿನಗರ – ಜಿಲ್ಲೆಯ ದೌಲತಾಬಾದನಲ್ಲಿ ಹತ್ಯೆಗಾಗಿ ಗೋವುಗಳನ್ನು ಕೊಂಡೊಯ್ಯುತ್ತಿರುವ ಮಾಹಿತಿ ಸಿಕ್ಕಿದ್ದರಿಂದ ಪೊಲೀಸರು ಮತಾಂಧರ ವಿರುದ್ಧ ಕ್ರಮ ಕೈಗೊಂಡರು. ಇದರಿಂದ ಸಿಟ್ಟುಗೊಂಡ ಮತಾಂಧರ ಗುಂಪೊಂದು 5 ಹಿಂದೂ ಯುವಕರನ್ನು ಅಮಾನವೀಯವಾಗಿ ಥಳಿಸಿ ಅವರ ದ್ವಿಚಕ್ರ ವಾಹನಕ್ಕೆ ಬೆಂಕಿ ಹಾಕಿದರು. (ಮತಾಂಧರು ಕಾನೂನಿಗೆ ಬಗ್ಗದೇ ಹಿಂದೂಗಳ ಮೇಲೆ ದೌರ್ಜನ್ಯ ಮುಂದುವರಿಸುತ್ತಿದ್ದಾರೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ – ಸಂಪಾದಕರು) ದೌಲತಾಬಾದ ಪ್ರದೇಶದ ಅಬ್ದಿಮಂಡಿ ಪರಿಸರದಲ್ಲಿ ಜೂನ್ 17 ರಂದು ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ನಂತರ ಪೊಲೀಸ್ ಠಾಣೆಯ ಎದುರು ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಗಾಯಗೊಂಡ ಹಿಂದೂ ಯುವಕರ ದೂರುಗಳ ಆಧಾರದ ಮೇಲೆ ಪೊಲೀಸರು 100 ರಿಂದ 150 ಗಲಭೆಕೋರರ ವಿರುದ್ಧ ದೂರು ದಾಖಲಿಸಿದ್ದಾರೆ. ನರೇಶ ಬಳಿ, ತುಷಾರ ಮ್ಹಸ್ಕೆ, ಭಾಗವತ ವಾಘ, ಜ್ಞಾನೇಶ್ವರ ಫುಕೆ, ಅಮೋಲ ಬೊರಾಟೆ(ಎಲ್ಲರೂ ದೌಲತಾಬಾದ ನಿವಾಸಿಗಳು) ಗಾಯಗೊಂಡ ಹಿಂದೂ ಯುವಕರ ಹೆಸರುಗಳಾಗಿವೆ.

ಒಂದು ಮನೆಯ ಶಟರನಲ್ಲಿ ಹಸುಗಳ ಹತ್ಯೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಪೊಲೀಸ್ ತಂಡವು ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿತು. ಅದಕ್ಕೆ `ಈದ್’ ದಿನದಂದೇ ಏಕೆ ಕ್ರಮ ಕೈಕೊಳ್ಳುತ್ತೀರಿ?’ ಎಂದು ಪ್ರಶ್ನಿಸುತ್ತಾ ಮುಸಲ್ಮಾನರು ಪೊಲೀಸ್ ಠಾಣೆಯ ಎದುರಿಗೆ ಗುಂಪುಗೂಡಿದರು; ಪೊಲೀಸರು ಅವರಿಗೆ ತಿಳಿ ಹೇಳಿ, ಮರಳಿ ಕಳುಹಿಸಿದ್ದರು. ಇದೇ ಸಮಯದಲ್ಲಿ ಕೆಲವು ಹಿಂದೂ ಯುವಕರು ಪೊಲೀಸರಿಗೆ ಗೋಹತ್ಯೆಯ ವಿಷಯದ ಮಾಹಿತಿ ನೀಡುತ್ತಿರುವ ಚರ್ಚೆ ಪ್ರಾರಂಭವಾಯಿತು. ಈ ಹಿಂದೂ ಯುವಕರು ನಾಗೇಶ್ವರ ದೇವಸ್ಥಾನದಲ್ಲಿ ಇರುವ ಮಾಹಿತಿ ಸಿಗುತ್ತಲೇ ಮತಾಂಧರ ಒಂದು ಗುಂಪು ಅತ್ತ ಕಡೆಗೆ ಹೋಗಿ 5 ಹಿಂದೂ ಯುವಕರನ್ನು ಅಮಾನವೀಯವಾಗಿ ಥಳಿಸಿ ಅವರ ದ್ವಿಚಕ್ರ ವಾಹನವನ್ನು ಸುಟ್ಟರು. ಈ ಹಲ್ಲೆಯ ಮಾಹಿತಿ ಸಿಗುತ್ತಲೇ ದೌಲತಾಬಾದ ಪೊಲೀಸರು ಘಟನಾಸ್ಥಳವನ್ನು ತಲುಪಿ ಹಿಂದೂ ಯುವಕರನ್ನು ಈ ದಾಳಿಯಿಂದ ರಕ್ಷಿಸಿದರು.

ದೌಲತಾಬಾದ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಅಧೀಕ್ಷಕ ರಾಮಸೇವ ಜಿತಬಹಾದೂರ ಗುರೂಮ ಅವರ ದೂರಿನ ಮೇರೆಗೆ ಆರೋಪಿ ಕಲೀಮ್ ಕರೀಮ್ ಖಾನ್ (ವಯಸ್ಸು 29 ವರ್ಷ) ಎಂಬವನ ಮೇಲೆ ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆ 1995 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ದಾಳಿಯಲ್ಲಿ 14 ಸಾವಿರ ರೂಪಾಯಿಗಳ 70 ಕೆ.ಜಿ. ಮಾಂಸವನ್ನು ಜಪ್ತಿ ಮಾಡಿಕೊಂಡಿದ್ದಾರೆ. (ಗೋಹತ್ಯೆ ವಿರೋಧಿ ಕಾನೂನಿನಂತೆ ಪೊಲೀಸರು ಯಾವಾಗ ಪರಿಣಾಮಕಾರಿಯಾಗಿ ಕ್ರಮ ಕೈಕೊಳ್ಳುವರು? – ಸಂಪಾದಕರು)

 

ಸಂಪಾದಕೀಯ ನಿಲುವು

ಛತ್ರಪತಿ ಶಿವರಾಯರ ಮಹಾರಾಷ್ಟ್ರದಲ್ಲಿ ಹಿಂದೂಗಳ ಮೇಲೆ ಈ ರೀತಿ ಹಲ್ಲೆ ನಡೆಯುವುದು ನಾಚಿಕೆಗೇಡಿನ ಸಂಗತಿ!