Canada Glorifies Khalistan Terrorists: ಸಂಸತ್ತಿನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಗೆ ಶ್ರದ್ಧಾಂಜಲಿ!

ಒಟಾವಾ (ಕೆನಡಾ) – ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಜೂನ್ 18, 2023 ರಂದು ಕೆನಡಾದ ಸರೆಯಲ್ಲಿ ಕೊಲ್ಲಲಾಗಿತ್ತು. ಈಗ, ನಿಜ್ಜರ್ ಹತ್ಯೆಯ ವಾರ್ಷಪೂರ್ತಿಯಂದು, ಅಂದರೆ ಜೂನ್ 18 ರಂದು ಕೆನಡಾದ ಸಂಸತ್ತಿನಲ್ಲಿ 2 ನಿಮಿಷಗಳ ಮೌನವನ್ನು ಆಚರಿಸಲಾಯಿತು. ನಿಜ್ಜರ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಹಿಂದೆ ಆರೋಪಿಸಿದೆ; ಆದರೆ ಇದಕ್ಕೆ ಯಾವುದೇ ಪುರಾವೆಗಳನ್ನು ನೀಡಲು ಸಾಧ್ಯವಾಗಲಿಲ್ಲ.

ಜೂನ್ 18 ರಂದು ಕೆನಡಾದ ಸಂಸತ್ತಿನ ಕೆಲಸದ ಕೊನೆಯಲ್ಲಿ, ಸಂಸತ್ತಿನ ಸ್ಪೀಕರ್ ಗ್ರೆಗ್ ಫರ್ಗುಸ್ ಮಾತನಾಡಿ, “ಈ ಸದನದಲ್ಲಿ ಎಲ್ಲಾ ಪಕ್ಷಗಳ ನಾಯಕರ ನಡುವೆ ಚರ್ಚೆಯ ನಂತರ, ಒಂದು ವರ್ಷದ ಹಿಂದೆ ಬ್ರಿಟಿಷ್ ಕೊಲಂಬಿಯಾದ ಪರಿಸರದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಲಾಗಿತ್ತು. ಈ ಘಟನೆಗೆ 1 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಭಾಂಗಣದಲ್ಲಿ 2 ನಿಮಿಷ ಮೌನ ಆಚರಿಸಲು ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.” ಬಳಿಕ ಸದನದ ಎಲ್ಲಾ ಸಭಾ ಸದಸ್ಯರು ಎದ್ದು ನಿಂತು 2 ನಿಮಿಷ ಮೌನಾಚರಣೆ ಮಾಡಿ ಕಾರ್ಯಕಲಾಪವನ್ನು ಮುಗಿಸಿದರು.

ಕೆನಡಾಕ್ಕೆ ಭಾರತದ ಪ್ರತ್ಯುತ್ತರ !

ಖಲಿಸ್ತಾನಿ ಭಯೋತ್ಪಾದಕರು ‘ಕಾನಿಷ್ಕ’ ವಿಮಾನದ ಮೇಲೆ ನಡೆಸಿದ ದಾಳಿಯಲ್ಲಿ ಹುತಾತ್ಮರಾದವರಿಗೆ ಕೆನಡಾದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜನೆ !

ಕೆನಡಾದ ಭಾರತೀಯ ರಾಯಭಾರಿ ಕಚೇರಿಯು ನಿಜ್ಜರ್ ಗೆ ಶ್ರದ್ಧಾಂಜಲಿ ಸಲ್ಲಿಸಲು ಕೆನಡಾದ ಕ್ರಮಕ್ಕೆ ಪ್ರತ್ಯುತ್ತರ ನೀಡಿದೆ. ರಾಯಭಾರ ಕಚೇರಿಯು ‘ಎಕ್ಸ್’ ನಲ್ಲಿನ ಪೋಸ್ಟ್‌ನಲ್ಲಿ, ‘ಭಾರತವು ಭಯೋತ್ಪಾದನೆಗೆ  ವಿರುದ್ಧವಾಗಿದ್ದೂ ಈ ಜಾಗತಿಕ ಬಿಕ್ಕಟ್ಟನ್ನು ಎದುರಿಸಲು ಎಲ್ಲಾ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದೆ. ಜೂನ್ 23, 2024 ಏರ್ ಇಂಡಿಯಾ ಫ್ಲೈಟ್ 182 (ಕಾನಿಷ್ಕಾ) ಮೇಲಿನ ಭಯೋತ್ಪಾದಕ ದಾಳಿಯ 39 ನೇ ಸೃತಿದಿನವಾಗಿದೆ, ಈ ದಾಳಿಯಲ್ಲಿ 329 ಅಮಾಯಕರು ಪ್ರಾಣ ಕಳೆದುಕೊಂಡರು. ಮೃತರಲ್ಲಿ 86 ಮಕ್ಕಳು ಸೇರಿದ್ದಾರೆ. ನಾಗರಿಕ ವಿಮಾನಯಾನ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದೆ. ಘಟನೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು 23 ಜೂನ್ 2024 ರಂದು ಕೆನಡಾದ ವ್ಯಾಂಕೋವರ್‌ನ ಸ್ಟಾನ್ಲಿ ಪಾರ್ಕ್‌ನಲ್ಲಿರುವ ಏರ್ ಇಂಡಿಯಾ ಸ್ಮಾರಕದಲ್ಲಿ ಸ್ಮಾರಕ ಸೇವೆಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಹೆಚ್ಚೆಚ್ಚು ಭಾರತೀಯ ಮೂಲದ ಜನರು ಉಪಸ್ಥಿತರಿದ್ದು ಭಯೋತ್ಪಾದನೆಯ ವಿರುದ್ಧ ಒಟ್ಟಾಗಬೇಕು.” ಎಂದು ಹೇಳಿದೆ. ಈ ದಾಳಿಗೆ ಪರೋಕ್ಷವಾಗಿ ಕೆನಡಾದ ಬೆಂಬಲವಿತ್ತು, ಎಂಬುದು ಬಹಿರಂಗವಾಗಿತ್ತು. ಆದ್ದರಿಂದಲೇ ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ಭಾರತ ಕೆನಡಾಗೆ ಪ್ರತ್ಯುತ್ತರ ನೀಡಿದೆ.

ಏನಿದು ಘಟನೆ ?

ಜೂನ್ 22, 1985 ರಂದು, ಏರ್ ಇಂಡಿಯಾ ವಿಮಾನವು ಕೆನಡಾದ ಮಾಂಟ್ರಿಯಲ್ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟಿತು. ಮರುದಿನ, 23 ಜೂನ್ 1985, ವಿಮಾನವು ಐರಿಶ್ ವಾಯುಪ್ರದೇಶದ ಮೇಲೆ ಹಾರುತ್ತಿದ್ದಾಗ, ಒಂದು ದೊಡ್ಡ ಸ್ಫೋಟ ಸಂಭವಿಸಿತು ಮತ್ತು ವಿಮಾನವು ತುಂಡಾಗಿ ಅಟ್ಲಾಂಟಿಕ್ ಸಾಗರದಲ್ಲಿ ಪತನಗೊಂಡಿತು. ‘ಆಪರೇಷನ್ ಬ್ಲೂ ಸ್ಟಾರ್’ (ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ ಖಲಿಸ್ತಾನಿ ಉಗ್ರಗಾಮಿಗಳ ವಿರುದ್ಧ ಭಾರತೀಯ ಸೇನೆಯು ಜೂನ್ 1984 ರಲ್ಲಿ ನಡೆಸಿದ ಕಾರ್ಯಾಚರಣೆಯ ಹೆಸರು) ಪ್ರತೀಕಾರವಾಗಿ ಖಲಿಸ್ತಾನಿ ಉಗ್ರರು ಈ ದಾಳಿ ನಡೆಸಿದರು. ಈ ದಾಳಿಯಲ್ಲಿ ಸಿಬ್ಬಂದಿ ಸೇರಿದಂತೆ ಎಲ್ಲಾ 329 ಜನರು ಸಾವನ್ನಪ್ಪಿದ್ದರು. ಖಲಿಸ್ತಾನಿ ಭಯೋತ್ಪಾದಕರ ಇಂತಹ ದಾಳಿಯ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗಳು ಕೆನಡಾ ಸರ್ಕಾರಕ್ಕೆ ಮಾಹಿತಿ ನೀಡಿದ್ದವು, ಆದರೂ ಕೆನಡಾ ಸರ್ಕಾರ ಯಾವುದೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿಲ್ಲ.

ಸಂಪಾದಕೀಯ ನಿಲುವು

ಕೆನಡಾದ ಟ್ರುಡೊ ಸರ್ಕಾರವು ಖಲಿಸ್ತಾನಿ ಪರವಾಗಿರುವ ಸಿಖ್ ಸಂಸದರ ಬೆಂಬಲದ ಮೇಲೆ ನಡೆಯುತ್ತಿರುವುದರಿಂದ, ಅದರಿಂದ ಅಂತಹುದೊಂದು ಸಂಭವಿಸಿದರೆ ಆಶ್ಚರ್ಯಪಡಬೇಕಾಗಿಲ್ಲ !