ರಾಜಕೀಯ ಪಕ್ಷಗಳಿಂದ ಅಲ್ಪಸಂಖ್ಯಾತರ ಓಲೈಕೆಯ ಕುರಿತಾದ ಮಾಹಿತಿ ಈಗ ಪಠ್ಯದ ರೂಪದಲ್ಲಿ !

  • ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ತಿನಿಂದ ೧೧ ತರಗತಿಯ ರಾಜ್ಯಶಾಸ್ತ್ರದ ಹೊಸ ಪುಸ್ತಕ

  • ‘ವೋಟ್ ಬ್ಯಾಂಕಿನ ರಾಜಕಾರಣ’ ಹೆಸರಿನ ಪಠ್ಯ ಅಳವಡಿಕೆ

ನವ ದೆಹಲಿ – ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್’ನ(‘ಎನ್.ಸಿ.ಇ.ಆರ್.ಟಿ. ಯ) ೧೧ ನೇ ತರಗತಿಯ ಸುಧಾರಿತ ಪಠ್ಯಕ್ರಮದಲ್ಲಿ ರಾಜ್ಯಶಾಸ್ತ್ರದ ಪಠ್ಯಪುಸ್ತಕದಲ್ಲಿ ‘ಭಾರತದಲ್ಲಿನ ವೋಟ್ ಬ್ಯಾಂಕ್’ನ ರಾಜಕಾರಣ, ಇದು ಅಲ್ಪಸಂಖ್ಯಾತರ ಒಲೈಕೆಯ ಕುರಿತು ಇರಲಿದೆ. ಇದರ ಮೂಲಕ ‘ಎಲ್ಲಾ ರಾಜಕೀಯ ಪಕ್ಷ ನಾಗರಿಕರ ಸಮಾನತೆಯ ಕಡೆಗೆ ನಿರ್ಲಕ್ಷಿಸಿ ಕೇವಲ ಅಲ್ಪಸಂಖ್ಯಾತರ ಹಿತಕ್ಕೆ ಆದ್ಯತೆ ನೀಡುತ್ತಾರೆ’, ಎಂದು ಹೇಳಲಾಗಿದೆ. ‘ವೋಟ್ ಬ್ಯಾಂಕಿನ ರಾಜಕಾರಣ’ ಈ ಪಠ್ಯದಲ್ಲಿ ಈ ವಿಷಯ ಪ್ರಕಾಶಿತಗೊಳಿಸಲಾಗಿದೆ.

ವೋಟ್ ಬ್ಯಾಂಕಿನ ರಾಜಕಾರಣದಿಂದ ಚುನಾವಣೆಯ ರಾಜಕಾರಣ ವಿಕೃತವಾಗುತ್ತಿದೆ !

ಪಠ್ಯ ಪುಸ್ತಕದ ಹೊಸ ಆವೃತ್ತಿಯಲ್ಲಿ, ವೋಟ್ ಬ್ಯಾಂಕಿನ ರಾಜಕಾರಣದಲ್ಲಿ ಯಾವುದು ತಪ್ಪಾಗಿರಲು ಸಾಧ್ಯವಿಲ್ಲ; ಆದರೆ ಈ ವೋಟ್ ಬ್ಯಾಂಕಿನ ರಾಜಕಾರಣದಿಂದ ಯಾವುದೋ ಗುಂಪಿಗೆ ಅಥವಾ ಜನಾಂಗದಲ್ಲಿ ಚುನಾವಣೆಯ ಸಮಯದಲ್ಲಿ ವಿಶಿಷ್ಟ ಅಭ್ಯರ್ಥಿ ನೀಡಲಾಗುತ್ತಿದ್ದರೆ ಅಥವಾ ಯಾವುದೋ ಜನಾಂಗ ಅಥವಾ ಗುಂಪು ಒಂದು ರಾಜಕೀಯ ಪಕ್ಷಕ್ಕಾಗಿ ಒಟ್ಟಾಗಿ ಸೇರಿದರೆ, ಆಗ ಚುನಾವಣೆಯ ರಾಜಕೀಯ ವಿಕೃತವಾಗುತ್ತದೆ. ನೀವು ಇಂತಹ ಉದಾರಣೆಗಳ ಬಗ್ಗೆ ಯೋಚನೆ ಮಾಡಬಹುದೇ ? ಈ ರೀತಿಯ ರಾಜಕಾರಣ ಮತದಾನದ ಸಮಯದಲ್ಲಿನ ಒಂದು ಸಂಪೂರ್ಣ ಗುಂಪು ಒಟ್ಟಾಗಿ ಸೇರಿ ಕೆಲಸ ಮಾಡುತ್ತದೆ. ಇದರಲ್ಲಿ ವಿವಿಧತೆ ಇದ್ದರೂ, ಅವರು ಒಂದು ನಿರ್ಧರಿಸಿದ ವ್ಯಕ್ತಿ ಅಥವಾ ಪಕ್ಷಕ್ಕೆ ಮತದಾನ ಮಾಡುತ್ತಾರೆ. ಆ ಸಮಯದಲ್ಲಿ ವೋಟು ಬ್ಯಾಂಕಿನ ರಾಜಕಾರಣ ನಡೆಸುವ ಪಕ್ಷ ಅಥವಾ ನಾಯಕ ಆ ಒಂದು ಗುಂಪಿನ ಯೋಚನೆ ಮಾಡುತ್ತಾರೆ. ಅಥವಾ ‘ನಾವು ಆ ಒಂದು ಗುಂಪಿಗಾಗಿ ಕೆಲಸ ಮಾಡುವ ಪ್ರಯತ್ನ ಮಾಡುವೆವು’ ಎಂದು ವಿಶ್ವಾಸ ಆ ಗುಂಪಿನ ಜನರಲ್ಲಿ ನಿರ್ಮಾಣ ಮಾಡುತ್ತಾರೆ.

ರಾಜಕೀಯ ಪಕ್ಷ ಅಲ್ಪಸಂಖ್ಯಾತರ ಗುಂಪಿಗೆ ಮತ್ತು ಅವರ ಹಿತಕ್ಕೆ ಆದ್ಯತೆ ನೀಡುತ್ತಾರೆ !

ಈ ಪಠ್ಯದಲ್ಲಿ, ಭಾರತದಲ್ಲಿನ ರಾಜಕೀಯ ಪಕ್ಷಗಳು ಬಹಳಷ್ಟು ಬಾರಿ ಮಹತ್ವದ ಅಂಶಗಳನ್ನು ನಿರ್ಲಕ್ಷಿಸುತ್ತದೆ. ಅವರು ಚುನಾವಣೆಯ ಲಾಭಕ್ಕಾಗಿ ಭಾವನೆ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುತ್ತಾರೆ, ಹೀಗೆ ಮಾಡುವಾಗ ಅವರು ಸಮಾಜಕ್ಕೆ ಕಾಡುವ ನಿಜವಾದ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಇದರ ಅರ್ಥ ರಾಜಕೀಯ ಪಕ್ಷ ನಾಗರಿಕರ ಸಮಾನತೆಯ ತತ್ವಕ್ಕೆ ಅವಮಾನಿಸುತ್ತಾರೆ ಮತ್ತು ಅಲ್ಪಸಂಖ್ಯಾತರ ಗುಂಪಿಗೆ ಮತ್ತು ಅವರ ಹಿತಕ್ಕೆ ಆದ್ಯತೆ ನೀಡುತ್ತಾರೆ; ಆದರೆ ಹೀಗೆ ಮಾಡುವಾಗ ಅಲ್ಪಸಂಖ್ಯಾತರ ಗುಂಪು ಅಲಿಪ್ತವಾಗಿ ಉಳಿಯುತ್ತದೆ. ಹಾಗೂ ಅಲ್ಪಸಂಖ್ಯಾತರ ಗುಂಪಿನಲ್ಲಿನ ವಿವಿಧತೆ ಕಡೆಗೆ ದುರ್ಲಕ್ಷವಾಗುತ್ತದೆ, ಅವರ ಸಾಮಾಜಿಕ ಸುಧಾರಣೆಯ ಅಂಶಗಳು ಹಿಂದೆ ಉಳಿಯುತ್ತವೆ.