Congress Atrocities: ಪೋಪ್ ಫ್ರಾನ್ಸಿಸ್ ಅವರನ್ನು ಅವಮಾನಿಸುವ ಪೋಸ್ಟ್ ಅನ್ನು ಅಳಿಸಿ ಕ್ಷಮೆಯಾಚಿಸಿದ ಕೇರಳದ ಕಾಂಗ್ರೆಸ್ !

ಪ್ರಧಾನಿ ಮೋದಿ ಟೀಕೆಗೆ ಬೆಂಬಲ !

ತಿರುವನಂತಪುರಂ (ಕೇರಳ) – ಪ್ರಧಾನಿ ಮೋದಿ ಭೇಟಿ ಇಟಲಿಯಲ್ಲಿ ‘ಜಿ-7’ (ಅಮೇರಿಕಾ, ಕೆನಡಾ, ಬ್ರಿಟನ್, ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಜಪಾನ್ ಒಳಗೊಂಡ ರಾಷ್ಟ್ರಗಳ ಗುಂಪು) ಶೃಂಗಸಭೆಯಲ್ಲಿ ಕ್ರೈಸ್ತ ಧರ್ಮದ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರನ್ನು ಭೇಟಿಯಾಗಿದ್ದರು. ಆ ಭೇಟಿಯ ಛಾಯಾಚಿತ್ರವನ್ನು ‘X’ ನಲ್ಲಿ ಪೋಸ್ಟ್ ಮಾಡಿದ ಕೇರಳ ಕಾಂಗ್ರೆಸ್, ‘ಕೊನೆಗೂ ಪೋಪ್‌ಗೆ ದೇವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು’ ಎಂದು ಹೇಳಿದೆ. ಇತ್ತೀಚೆಗೆ ದೇಶದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಹೇಳಿಕೆಯ ಮೇಲೆ ಕಾಂಗ್ರೆಸ್ ಈ ಅಪಹಾಸ್ಯ ಮಾಡಿತ್ತು. ಚುನಾವಣಾ ಪ್ರಚಾರದ ವೇಳೆ ‘ದೇವರು ನನ್ನನ್ನು ವಿಶೇಷ ಕಾರ್ಯಕ್ಕೆ ಕಳುಹಿಸಿದ್ದಾನೆ’, ಎಂದು ಪ್ರಧಾನಿ ಮೋದಿ ಹೇಳಿದ್ದರು. ಕಾಂಗ್ರೆಸ್‌ನ ಈ ಪೋಸ್ಟ್ ಪೋಪ್‌ಗೆ ಅವಮಾನ ಮಾಡಿದೆ ಎಂದು ಬಿಜೆಪಿ ಟೀಕಿಸಿದೆ. ಇದಾದ ಬಳಿಕ ಕಾಂಗ್ರೆಸ್ ಈ ಪೋಸ್ಟ್ ಅನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿದೆ.

ಕೇರಳ ರಾಜ್ಯ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ವಿ.ಟಿ. ಬಲರಾಮ ಇವರು, ನಮ್ಮ ಪೋಸ್ಟ್ ವಿಡಂಬನೆಗಾಗಿ ಇತ್ತು. ಯಾವ ಕಾಂಗ್ರೆಸ್ ಕಾರ್ಯಕರ್ತನೂ ಪೋಪ್‌ರನ್ನು ಅವಮಾನಿಸುವ ಯೋಚನೆ ಮಾಡುವುದಿಲ್ಲ. ಪ್ರಪಂಚದಾದ್ಯಂತದ ಕ್ರೈಸ್ತರು ಪೋಪ್ ಅವರನ್ನು ದೇವರೆಂದು ಪರಿಗಣಿಸುತ್ತಾರೆ. ನರೇಂದ್ರ ಮೋದಿ ಅವರನ್ನು ಗೇಲಿ ಮಾಡಲು ಕಾಂಗ್ರೆಸ್‌ಗೆ ಯಾವುದೇ ಹಿಂಜರಿಕೆ ಇಲ್ಲ. ಮೋದಿ ತಮ್ಮನ್ನು ದೇವರು ಎಂದು ಕರೆದುಕೊಳ್ಳುವ ಮೂಲಕ ವಿವಿಧ ಧರ್ಮಗಳ ಜನರನ್ನು ಅವಮಾನಿಸುತ್ತಾರೆ. ಮಣಿಪುರದ ಬಗ್ಗೆ ಪ್ರಧಾನಿ ಉದ್ದೇಶಪೂರ್ವಕವಾಗಿ ಮೌನ ವಹಿಸುತ್ತಿದ್ದಾರೆ. ಮಣಿಪುರದಲ್ಲಿ ಕ್ರೈಸ್ತ ಸಮುದಾಯದ ಜನರು ತುಳಿತಕ್ಕೊಳಗಾಗಿದ್ದಾರೆ. ಚರ್ಚ್‌ಗಳನ್ನು ನಾಶ ಮಾಡಲಾಗಿದೆ. ಈಶಾನ್ಯದಲ್ಲಿ ಅಲ್ಪಸಂಖ್ಯಾತರು ದಬ್ಬಾಳಿಕೆಯನ್ನು ಎದುರಿಸಿದ್ದಾರೆ; (ಈಶಾನ್ಯ ಭಾರತದಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರಲ್ಲ, ಆದರೆ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ; ಆದರೆ ಕಾಂಗ್ರೆಸ್ಸಿಗರು ಅಲ್ಲಿಯೂ ಹಿಂದೂಗಳನ್ನು ಬಹುಸಂಖ್ಯಾತರು ಎಂದು ಟೀಕಿಸುತ್ತಿದ್ದಾರೆ ಎಂಬುದನ್ನು ಗಮನಿಸಿ ! – ಸಂಪಾದಕರು) ಆದರೆ ಪ್ರಧಾನಿ ಒಂದು ಮಾತನ್ನೂ ಹೇಳಲಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಪ್ರಧಾನಿ ತೋರುತ್ತಿರುವ ನಿರ್ಲಕ್ಷ್ಯವನ್ನು ನಾವು ಖಂಡಿಸುತ್ತೇವೆ. ಪ್ರಧಾನಿಯವರು ಕ್ರೈಸ್ತ ಸಮುದಾಯದ ಕ್ಷಮೆ ಯಾಚಿಸಬೇಕು.

ಸಂಪಾದಕೀಯ ನಿಲುವು

ಕ್ರೈಸ್ತರ ಧರ್ಮಗುರುಗಳ ಅವಮಾನಿಸಿದ ತಕ್ಷಣ ಕ್ಷಮೆಯಾಚಿಸಿದ ಕಾಂಗ್ರೆಸ್ ಹಿಂದೂ ಸಂತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !