Telangana Medak Violence : ಮೇಡಕ (ತೇಲಂಗಾಣ) : ಗೋವು ಕಳ್ಳಸಾಗಾಣಿಕೆಯನ್ನು ವಿರೋಧಿಸಿದ್ದರಿಂದ ಮುಸ್ಲಿಮರಿಂದ ಹಿಂದುತ್ವನಿಷ್ಠರ ಮೇಲೆ ಹಲ್ಲೆ !

‘ಹಿಂದುತ್ವನಿಷ್ಠರು ದೂರು ನೀಡುವ ಬದಲು, ಗೋವುಕಳ್ಳಸಾಗಾಣಿಕೆದಾರರನ್ನು ತಡೆದಿದ್ದರಿಂದ ಹಲ್ಲೆ (ಯಂತೆ) !’ – ಪೊಲೀಸ

ಮೇಡಕ (ತೇಲಂಗಾಣ) – ಇಲ್ಲಿ ಗೋವು ಕಳ್ಳಸಾಗಣೆ ಮಾಡುವ ಮುಸಲ್ಮಾನರನ್ನು ಭಾರತೀಯ ಜನತಾ ಯುವ ಮೋರ್ಚಾ (ಭಾಜಯುಮೊ) ಕಾರ್ಯಕರ್ತರು ವಿರೋಧಿಸಿದರು. ಆ ಸಮಯದಲ್ಲಿ ಅವರು ಸಂಚಾರವನ್ನು ನಿಲ್ಲಿಸಲು ಪ್ರಯತ್ನಿಸಿದರು. ಇದರಿಂದ ಮುಸ್ಲಿಮರು ಅವರ ಮೇಲೆ ದಾಳಿ ಮಾಡಿದರು. ಆ ಸಮಯದಲ್ಲಿ ಹಿಂದೂಗಳು ಅವರನ್ನು ಥಳಿಸಿದರು. ಹಿಂಸಾಚಾರದಲ್ಲಿ ಕೈಫ ಮತ್ತು ಆರಿಫ ಇವರಿಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಜೂನ್ 15 ರಂದು ನಡೆದ ಈ ಪ್ರಕರಣದ ಬಳಿಕ ಎರಡೂ ಗುಂಪುಗಳ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ.

ಮೇಡಕ ಪೊಲೀಸ್ ಅಧೀಕ್ಷಕ ಬಿ. ಬಾಳಾ ಸ್ವಾಮಿಯವರನ್ನು `ಸನಾತನ ಪ್ರಭಾತ’ದ ಪ್ರತಿನಿಧಿ ಸಂಪರ್ಕಿಸಿದಾಗ ಅವರು, ಪೊಲೀಸರು ಕಲಂ 144 ಅನ್ನು ಜಾರಿಗೊಳಿಸಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಕೆಲವುರನ್ನು ವಶಕ್ಕೆ ಪಡೆಯಲಾಗಿದೆ. ಭಾಜಯುಮೋ ಮುಖಂಡರು ದೂರು ದಾಖಲಿಸುವ ಬದಲು ಸಂಚಾರವನ್ನು ನಿಲ್ಲಿಸಿದರು. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ಮೇಲೆಯೂ ದಾಳಿ ನಡೆದಿದೆ. (ನೇರವಾಗಿ ಆಸ್ಪತ್ರೆಯ ಮೇಲೆಯೇ ದಾಳಿ ಮಾಡಲು ಮತಾಂಧ ಮುಸ್ಲಿಮರಿಗೆ ಧೈರ್ಯವಾಗುತ್ತದೆ ಮತ್ತು ಒಬ್ಬನೇ ಒಬ್ಬ ಜಾತ್ಯತೀತವಾದಿ ರಾಜಕೀಯ ಪಕ್ಷ ಅದರ ಬಗ್ಗೆ ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ತೆಲಂಗಾಣದಲ್ಲಿ ಕಾಂಗ್ರೆಸ ಸರಕಾರ ಇರುವುದರಿಂದ ಇದಕ್ಕಿಂತ ಬೇರಿನ್ನೇನು ನಡೆಯುವುದು ? ಕಾಂಗ್ರೆಸ್ ಸರಕಾರ ಎಂದರೆ ಪಾಕಿಸ್ತಾನದ ಆಡಳಿತ ಎನ್ನುವುದು ಹಿಂದೂಗಳಿಗೆ ಎಂದು ಗಮನಕ್ಕೆ ಬರುವುದು ?

ಎಲ್ಲಾ ವ್ಯವಸ್ಥೆ ತಮ್ಮ ಬಳಿಯಿರುವಾಗಲೂ ತಾವು ಗೋವು ಕಳ್ಳಸಾಗಾಣಿಕೆಯನ್ನು ತಡೆಯುವುದಿಲ್ಲ ಮತ್ತು ಅದನ್ನು ತಡೆಯುವ ಹಿಂದೂಗಳ ಮೇಲೆಯೇ ಹಿಂಸಾಚಾರದ ಆರೋಪವನ್ನು ಹೊರಿಸುತ್ತಿದ್ದಾರೆ. ಈ ವೃತ್ತಿಯ ಹೊಂದಿರುವ ಹಿಂದೂದ್ವೇಷಿ ಪೊಲೀಸರು !

ಹಿಂದೂಗಳು ಅವರ ಮೇಲಿನ ಇಂತಹ ಆಘಾತಗಳನ್ನು ಮೌನವಾಗಿ ಸಹಿಸಿದರೂ ಅಥವಾ ಜಾಗರೂಕರಾಗಿ ಪ್ರತಿಭಟಿಸಿದ್ದರೂ, ಅವರನ್ನು ‘ಅಸಹಿಷ್ಣು’ ಮತ್ತು ‘ಹಿಂಸಾಚಾರಿ’ ಎಂದು ಹೀಯಾಳೀಸುತ್ತಾರೆ. ಇದರಿಂದ ಈಗ ಹಿಂದೂಗಳೂ ‘ದೇಶದಲ್ಲಿ ಯಾರೂ ಗೋವು ಕಳ್ಳಸಾಗಾಣಿಕೆ ಮಾಡಲು ಧೈರ್ಯ ಮಾಡುವುದಿಲ್ಲ’ ಎನ್ನುವಂತಹ ಅಂಕುಶವನ್ನಿಡಲು ಸಿದ್ಧರಾಗಬೇಕು. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳು ರಕ್ಷಿಸಲ್ಪಡುವುದು !

 

ಮೇಡಕಗೆ ಹೋಗುವ ಮೊದಲು ಶಾಸಕ ಟಿ. ರಾಜಾ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದರು !

ಭಾಗ್ಯನಗರದ ಗೋಶಾಮಹಲ್ ಕ್ಷೇತ್ರದ ಭಾಜಪ ಶಾಸಕ ಟಿ. ರಾಜಾ ಸಿಂಗ ಅವರನ್ನು ಪೊಲೀಸರು ವಿಮಾನ ನಿಲ್ದಾಣದಲ್ಲಿಯೇ ವಶಕ್ಕೆ ಪಡೆದರು. ಸದ್ಯ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

ಮುಂಬಯಿಯಿಂದ ಅವರು ಇಲ್ಲಿಗೆ ತಲುಪಿದ್ದರು. ಇಲ್ಲಿಂದ ಅವರು ನೇರವಾಗಿ ಮೇಡಕಗೆ ಹೋಗಲು ಪ್ರಯತ್ನಿಸುತ್ತಿರುವಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಶಾಸಕ ಟಿ. ರಾಜಾಸಿಂಗ ಅವರನ್ನು ತಡೆಯಲು ಸೈಬರಾಬಾದ್ ಗಲಭೆ ನಿಯಂತ್ರಣ ಪೊಲೀಸರು ಮತ್ತು ಸ್ಥಳೀಯ ಪೊಲೀಸರ ಹಲವಾರು ಘಟಕಗಳನ್ನು ಬೆಳಿಗ್ಗೆಯಿಂದಲೇ ರಾಜೀವಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ನಿಯೋಜಿಸಲಾಗಿತ್ತು. ‘ಮೇಡಕ್‌ನಲ್ಲಿ ಸೆಕ್ಷನ್ 144 ಹೇರಿದ್ದರಿಂದ ಟಿ. ರಾಜ ಸಿಂಗ್‌ ಇವರಿಗೆ ಅಲ್ಲಿಗೆ ಹೋಗಲು ಬಿಡಲಿಲ್ಲ’ ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ರಾಜ್ಯದಲ್ಲಿ ಹಿಂದುತ್ವನಿಷ್ಠ ಶಾಸಕರ ಮೇಲೆ ದಬ್ಬಾಳಿಕೆ ಮಾಡುತ್ತಿರುವಾಗ ಸಾಮಾನ್ಯ ಹಿಂದೂಗಳನ್ನು ಯಾರು ರಕ್ಷಿಸುತ್ತಾರೆ ?