Palestine PM : ಗಾಜಾದಲ್ಲಿನ ಹತ್ಯಾಕಾಂಡವನ್ನು ನಿಲ್ಲಿಸಲು ಭಾರತ ಸಹಾಯ ಮಾಡಬೇಕು !

ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಆಹ್ವಾನಿಸಿದ ಪ್ಯಾಲೆಸ್ತೀನ್ ಪ್ರಧಾನಿ ಮೊಹಮ್ಮದ್ ಮುಸ್ತಫಾ

ಟೆಲ್ ಅವಿವ್ (ಇಸ್ರೇಲ್) – ಭಾರತ ಜಾಗತಿಕ ನಾಯಕನಾಗಿದ್ದು, ಗಾಝಾದಲ್ಲಿ ನಡೆಯುತ್ತಿರುವ ನರಮೇಧವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ಭಾರತವು ಎಲ್ಲಾ ರಾಜಕೀಯ ಮಾಧ್ಯಮಗಳನ್ನು ಉಪಯೋಗಿಸುವುದು ಮಹತ್ವದ್ದಾಗಿದೆಯೆಂದು ಪ್ಯಾಲೆಸ್ತೀನ್ ಮನವಿ ಮಾಡಿದೆ. ಪ್ಯಾಲೆಸ್ತೀನ್ ಪ್ರಧಾನಿ ಮತ್ತು ವಿದೇಶಾಂಗ ಸಚಿವರಾಗಿರುವ ಮಹಮ್ಮದ ಮುಸ್ತಫಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಈ ಮೇಲಿನಂತೆ ಮನವಿ ಮಾಡಿದ್ದಾರೆ. ಹಾಗೆಯೇ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿರುವುದಕ್ಕೆ ಅಭಿನಂದಿಸಿದ್ದಾರೆ.

ಪ್ಯಾಲೆಸ್ತೀನ್ ಪ್ರಧಾನಿ ಮುಸ್ತಫಾ ಮಾತನ್ನು ಮುಂದುವರಿಸಿ, ಗಾಝಾಕ್ಕೆ ಮಾನವೀಯ ನೆರವು ನೀಡುವುದು ಸೇರಿದಂತೆ, ಭಾರತವು ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಪ್ಯಾಲೆಸ್ತೀನಿಯನ್ನರ ಭದ್ರತೆಗಾಗಿ ಮತ್ತು ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕಠಿಣ ನಿಲುವನ್ನು ಹೊಂದುವ ಅಗತ್ಯವಿದೆ ಎಂದು ಹೇಳಿದರು. ಭಾರತ ನಿರಂತರವಾಗಿ ತನ್ನ ವಚನಬದ್ಧತೆಯನ್ನು ತೋರಿಸಿದೆ ಮತ್ತು ಪ್ಯಾಲೆಸ್ತೀನ್ ಜನರ ಹಕ್ಕು ರಕ್ಷಣೆಗೆ ಕೊಡುಗೆ ನೀಡಿದೆ. ‘ಯಾವುದೇ ಸಂಘರ್ಷದಲ್ಲಿ ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸಲೇಬೇಕು’ ಎಂದು ಭಾರತ ಯಾವಾಗಲೂ ಹೇಳುತ್ತದೆ. ಭಾರತ ಯಾವಾಗಲೂ ಮಾನವ ಹಕ್ಕುಗಳು ಮತ್ತು ಶಾಂತಿಯನ್ನು ಬೆಂಬಲಿಸುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಪ್ಯಾಲೆಸ್ತೀನ್ ಎಂದಾದರೂ ‘ಹಮಾಸ ಭಯೋತ್ಪಾದಕ ಕೃತ್ಯಗಳನ್ನು ನಡೆಸಬಾರದು’, ‘ಹಮಾಸ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು’, ಎನ್ನುವ ಕರೆಯನ್ನು ಮಾಡಿದೆಯೇ ?
  • ಕಾಶ್ಮೀರ ಸಮಸ್ಯೆ ಬಗ್ಗೆ ಪ್ಯಾಲೆಸ್ತೀನ್ ಎಂದಾದರೂ ಭಾರತವನ್ನು ಬೆಂಬಲಿಸಿದೆಯೇ? ಇಸ್ಲಾಮಿಕ್ ದೇಶವಾದ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯಾಕಾಂಡವನ್ನು ಖಂಡಿಸಿ ಪ್ಯಾಲೆಸ್ತೀನ್ ಎಂದಾದರೂ ಪ್ರಶ್ನಿಸಿದೆಯೇ ?