ಬಕ್ರೀದ್ ಗೆ ಬಲಿ ನೀಡುವುದಕ್ಕಾಗಿ ತಂದಿದ್ದ ಮೇಕೆಯ ಮೇಲೆ ‘ರಾಮ’ ಎಂದು ಬರೆದಿರುವ ೩ ಮತಾಂಧರ ಬಂಧನ !

  • ಬೇಲಾಪುರ್ (ನವಿಮುಂಬಯಿ) ಇಲ್ಲಿಯ ಘಟನೆ !

  • ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳು ಮಾಹಿತಿ ನಿಡಿದ ನಂತರ ಕ್ರಮ

‘ರಾಮ’ ಎಂದು ಬರೆದಿರುವ ಮೇಕೆ

ನವಿ ಮುಂಬಯಿ, ಜೂನ್ ೧೬ (ವಾರ್ತೆ) – ಬಕ್ರೀದ್ ಪ್ರಯುಕ್ತ ಕುರ್ಬಾನಿ (ಇಸ್ಲಾಂ ಪದ್ಧತಿಯಿಂದ ನೀಡಲಾಗುವ ಪಶುಗಳ ಬಲಿ) ನೀಡಲು ತಂದಿರುವ ಮೇಕೆಯ ಹೊಟ್ಟೆಯ ಮೇಲೆ ‘ರಾಮ’ ಎಂದು ಬರೆದು ಅದನ್ನು ಮಾರುತ್ತಿದ್ದ ೩ ಮತಾಂಧರನ್ನು ಸಿಬಿಡಿ ಬೇಲಾಪುರ್ ಪೋಲಿಸ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಹಸಚಿವ ಸ್ವರೂಪ ಪಾಟೀಲ್ ಇವರು ಈ ಪ್ರಕರಣದಲ್ಲಿ ದೂರು ನೀಡಿದ್ದರು. ಮಹಮ್ಮದ್ ಶಫಿ ಶೇಖ್, ಸಾಜೀರ್ ಶೇಖ್, ಕಯ್ಯಮ್ ಈ ಬಂಧಿತ ಆರೋಪಿಗಳ ಹೆಸರಾಗಿವೆ.

ಅವರ ಮೇಲೆ ಅಪರಾಧವೂ ದಾಖಲಿಸಲಾಗಿದೆ.

೧. ಇಲ್ಲಿಯ ಒಂದು ಅಂಗಡಿಯಲ್ಲಿ ಬಕ್ರೀದ್ ಬಲಿಗಾಗಿ ತಂದಿರುವ ಒಂದು ಮೇಕೆಯ ಹೊಟ್ಟೆಯ ಮೇಲೆ ‘ರಾಮ’ ಎಂದು ಬರೆದಿದ್ದು ಅದಕ್ಕೆ ಹಿಂಸೆ ನೀಡಲಾಗುತ್ತಿತ್ತು ಹಾಗೂ ಅದರ ಹತ್ಯೆಗಾಗಿ ಕಟ್ಟಿಡಲಾಗಿತ್ತು ಎಂದು ಸ್ವರೂಪ ಪಾಟೀಲ್ ಇವರಿಗೆ ಕೆಲವು ಧರ್ಮಾಭಿಮಾನಿಗಳು ಮಾಹಿತಿ ನೀಡಿದರು.

೨. ಅದರ ಪ್ರಕಾರ ಪಾಟೀಲ್ ಮತ್ತು ಅವರ ಸಹಯೋಗಿಗಳು ಪೊಲೀಸರಿಗೆ ಇದರ ಕುರಿತು ಮಾಹಿತಿ ನೀಡಿದರು. ಪೊಲೀಸರ ಜೊತೆಗೆ ಸಂಬಂಧಿತ ಅಂಗಡಿಗೆ ಹೋಗಿ ಮೇಕೆ, ಬಣ್ಣದ ಡಬ್ಬಿ ಮತ್ತು ಬ್ರಷ್ ವಶಕ್ಕೆ ಪಡೆದರು.

೩. ಅಂಗಡಿಯಲ್ಲಿ ೨೨ ಮೇಕೆಗಳು ವಶಕ್ಕೆ ಪಡೆದು ಅವುಗಳಿಗೆ ವಾಸಿಯಲ್ಲಿಯ ದನದ ಕೊಟ್ಟಿಗೆಯಲ್ಲಿ ಇಡಲಾಗಿದೆ. ಕೆಲವು ತಿಂಗಳ ಹಿಂದೆ ಇದೆ ಅಂಗಡಿಯವನ ವಿರುದ್ಧ ಗೋಮಾಂಸ ಮಾರಾಟ ಮಾಡಿರುವ ಪ್ರಕರಣದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

೪. ಸಂಬಂದಿತರ ಮೇಲೆ ಕ್ರಮ ಕೈಗೊಳ್ಳುವ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ನವಿ ಮುಂಬಯಿ ಜಿಲ್ಲಾ ಸಹಸಚಿವ ಸ್ವರೂಪ ಪಾಟೀಲ್, ಅಮರಜಿತ ಸುರ್ವೆ, ನಗರ ಕಾರ್ಯವಾಹ ನಿಶಾಂತ ನಾಯಿಕ, ಸಮಾಜ ಸೇವಕ ನಿಲೇಶ್ ಪಾಟೀಲ, ಜ್ಞಾನೇಶ್ವರ ಪಾಟೀಲ, ಭಜರಂಗದಳದ ಸಹ ಸಂಯೋಜಕ ಶಂಕರ ಸಂಗಪಾಳ, ತೇಜಸ ಪಾಟೀಲ, ಬೇಲಾಪುರ ಪ್ರಖಂಡ ಅಧ್ಯಕ್ಷ ಮುಕೇಶ ಗಾಂಧಿ, ಬೇಲಾಪುರ ಪ್ರಖಂದ ಸಹ ಸಚಿವ ಸತ್ಯಪ್ರಕಾಶ ಸಿಂಹ, ಬೇಲಾಪುರ ಪ್ರಖಂಡ ಸಂಯೋಜಕ ಜೀವನ ದೇಶಮುಖ, ಬೇಲಾಪುರ್ ಪ್ರಖಂಡ ಸಾಹಸಯೋಜಕ ಹರ್ಷಲ ಸೋನಗಿರೆ ಇವರು ವಿಶೇಷ ಪರಿಶ್ರಮ ತೆಗೆದುಕೊಂಡರು.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕೆ ಸಂಘಟಿತ ಆಗುವ ಧರ್ಮಾಭಿಮಾನಿಗಳಿಗೆ ಅಭಿನಂದನೆ ! ಇಂತಹ ಧರ್ಮಾಭಿಮಾನಿಯರೇ ಹಿಂದೂ ಧರ್ಮದ ನಿಜವಾದ ಶಕ್ತಿ ಆಗಿದ್ದಾರೆ !