ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವೈದ್ಯಕೀಯ ಕ್ಷೇತ್ರದ ಸಂಶೋಧನೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕಾರ್ಯಕ್ಕೆ ಮಿತಿ ಇಲ್ಲ. ಅವರು ವಿಶ್ವ ಕಲ್ಯಾಣಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಕಾರ್ಯ ಮಾಡಿದ್ದಾರೆ. ಅವರ ಬ್ರಹ್ಮಾಂಡವ್ಯಾಪಿ ಕಾರ್ಯದ ಕೆಲವು ಕಾರ್ಯಗಳ ಬಗ್ಗೆ ಯಾವುದು ಈ ಮೊದಲು ಹೆಚ್ಚಾಗಿ ಮುದ್ರಣ ವಾಗಿಲ್ಲವೋ ಅದರ ಬಗ್ಗೆ ಈ ವಿಶೇಷಾಂಕದಲ್ಲಿ ಕಿರುಪರಿಚಯ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲಿ ವೈದ್ಯಕೀಯ ಕ್ಷೇತ್ರ ದಲ್ಲಿನ ಅವರ ಕಾರ್ಯದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

೧. ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನಕಾರ್ಯ !

ಮುಂಬೈಯ ವಿವಿಧ ಆಸ್ಪತ್ರೆಗಳಲ್ಲಿ ೫ ವರ್ಷಗಳ ಕಾಲ ನೌಕರಿ ಮಾಡಿದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ೧೯೭೧ ರಿಂದ ೧೯೭೮ ರ ಕಾಲಾವಧಿಯಲ್ಲಿ ನೌಕರಿ ನಿಮಿತ್ತ ಬ್ರಿಟನ್‌ನಲ್ಲಿ ವಾಸ್ತವ್ಯಕ್ಕಿದ್ದರು. ಈ ಕಾಲದಲ್ಲಿ ಅವರು ಮುಂದಿನ ಸಂಶೋಧನೆಗಳನ್ನು ಮಾಡಿದರು.

ಅ. ಮನೋರೋಗಗಳಿಗೆ ಸಮ್ಮೋಹನ ಉಪಚಾರಪದ್ಧತಿಯ ಬಗ್ಗೆ ಸಂಶೋಧನೆ ಮಾಡಿದರು.

ಆ. ಬಳಸಿ ಎಸೆಯುವಂತಹ (Use and Throw) ಕಿವಿ ತಪಾಸಣೆಯ ಪ್ಲಾಸ್ಟಿಕ್‌ ಉಪಕರಣ (Disposable Aural and Speculum) ವನ್ನು ವೈದ್ಯಕೀಯ ಶಾಸ್ತ್ರದಲ್ಲಿಯೇ ಮೊದಲ ಬಾರಿಗೆ ತಯಾರಿಸಿದರು. ೪. ಕೃಷಿ ಉಪಕರಣಗಳು, ನೀರು, ಬೀಜಗಳು ವಿಪುಲವಾಗಿರಬೇಕು. ನಮ್ಮ ಭಾರತವು ಕೃಷಿಪ್ರಧಾನ ದೇಶವಾಗಿರುವುದರಿಂದ ಕೃಷಿಗಾಗಿ ಸಾಕಷ್ಟು ನೀರಿನ ಆವಶ್ಯಕತೆಯಿದೆ. ಅದಕ್ಕಾಗಿ ನೀರಾವರಿ ನಿರ್ಮಿಸಬೇಕು. ಅದೇ ರೀತಿ ಉತ್ತಮ ಬೀಜ ಮತ್ತು ರಸಗೊಬ್ಬರಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ‘ಸಹಕಾರಿ ಪದ್ಧತಿಯಲ್ಲಿ ಬೇಸಾಯ ಮಾಡುವುದರಿಂದ ಮತ್ತು ‘ಜಪಾನಿ’ ಪದ್ಧತಿಯಲ್ಲಿ ಭತ್ತದ ಕೃಷಿ ಮಾಡುವುದರಿಂದ ಏನು ಲಾಭವಾಗುತ್ತದೆ ?’ ಎಂದು ಮನವರಿಕೆ ಮಾಡಿಕೊಡಬೇಕು. ರೈತನ ಸಂಪತ್ತುಗಳಾದ ಹಸು-ಗೂಳಿಗಳ ಉತ್ತಮ ಸಂತಾನೋತ್ಪತ್ತಿಗಾಗಿ ಮತ್ತು ಬೆಳವಣಿಗೆಗಾಗಿ ಗ್ರಾಮದಲ್ಲಿ ಹುಲ್ಲುಗಾವಲುಗಳನ್ನಿಡಬೇಕು. ಬಾಹ್ಯಜಗತ್ತಿನೊಂದಿಗೆ ಸತತ ಸಂಪರ್ಕವಿರಬೇಕೆಂದು ಅಂಚೆಕಚೇರಿ, ದೂರವಾಣಿ, ರೈಲ್ವೆ ಇತ್ಯಾದಿ ವ್ಯವಸ್ಥೆಗಳನ್ನು ಮಾಡಬೇಕು, ಹಾಗೆಯೇ ಎಲ್ಲೆಡೆ ವಿದ್ಯುತ್‌ನ್ನು ಪೂರೈಸಬೇಕು. ಮೇಲೆ ಹೇಳಿದ ವಿಷಯಗಳಿಂದ ಪರಿಪೂರ್ಣವಾಗಿರುವ ಗ್ರಾಮವೇ ಶೀಘ್ರದಲ್ಲಿ ಅಭಿವೃದ್ಧಿ ಹೊಂದುವುದು ಮತ್ತು ಗ್ರಾಮೋತ್ಕರ್ಷದಿಂದಲೇ ಭಾರತೋತ್ಕರ್ಷವಾಗುವುದು. ಆ ಒಳ್ಳೆಯ ದಿನಗಳು ಶೀಘ್ರದಿಂದ ಬರಲೆಂದು ಹಾರೈಸುತ್ತೇನೆ !’

೨. ಸಂಮ್ಮೋಹನ ಉಪಚಾರ ಕ್ಷೇತ್ರದಲ್ಲಿನ ಸಂಶೋಧನಕಾರ್ಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಸಮ್ಮೋಹನ ಉಪಚಾರತಜ್ಞರು

ಪರಾತ್ಪರ ಗುರು ಡಾ. ಆಠವಲೆಯವರು ಬ್ರಿಟನ್‌ನಲ್ಲಿ ಸಂಮ್ಮೋಹನ ಉಪಚಾರ ಪದ್ಧತಿಯ ಯಶಸ್ವಿ ಸಂಶೋಧನೆ ಮಾಡಿದ ನಂತರ ಅವರು ‘ಸಂಮ್ಮೋಹನ ಉಪಚಾರ ತಜ್ಞ’ರೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದರು. ೧೯೭೮ ರಲ್ಲಿ ಮುಂಬೈಗೆ ಹಿಂತಿರುಗಿದ ನಂತರ ಅವರು ಮುಂಬೈಯಲ್ಲಿ ಮನೋರೋಗಗಳ ಸಂಮ್ಮೋಹನ ಉಪಚಾರ ತಜ್ಞರಾಗಿ ಸ್ವತಂತ್ರ ವೃತ್ತಿಯನ್ನು ಪ್ರಾರಂಭಿಸಿದರು. ಹಾಗೆಯೇ ೧೯೭೮ ರಿಂದ ೧೯೮೩ ರವರೆಗೆ ಅವರು ೧೦೦ ಕ್ಕೂ ಹೆಚ್ಚು ವೈದ್ಯರಿಗೆ ಸಂಮ್ಮೋಹನ ಶಾಸ್ತ್ರ ಮತ್ತು ಸಮ್ಮೋಹನ ಉಪಚಾರದ ಸಿದ್ಧಾಂತ ಮತ್ತು ಪ್ರಾತ್ಯಕ್ಷಿಕೆಗಳ ಬಗ್ಗೆ ಮಾರ್ಗದರ್ಶನ ಮಾಡಿದರು.

೨ ಅ. ಸಂಮ್ಮೋಹನ ಉಪಚಾರದಲ್ಲಿನ ಸ್ವಯಂಸೂಚನೆಗಳ ನೂತನ ಪದ್ಧತಿಯ ಸಂಶೋಧನೆ

ಬ್ರಿಟನ್‌ನಲ್ಲಿ ಮನೋರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮನೋರೋಗವು ಮೂಲಭೂತವಾಗಿ ಸ್ವಭಾವದೋಷ ಮತ್ತು ಅಹಂನಿಂದಾಗಿ ಬರುತ್ತದೆ ಎಂಬುದು ಪರಾತ್ಪರ ಗುರು ಡಾ. ಆಠವಲೆಯವರ ಗಮನಕ್ಕೆ ಬಂದಿತು. ಸ್ವಭಾವಕ್ಕೆ ಔಷಧಿ ಇಲ್ಲದ್ದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಗಾಗಿ ಚಿಕಿತ್ಸಾಪದ್ಧತಿಯನ್ನು ಕಂಡುಹಿಡಿದರು. ಅಲ್ಲದೇ ಮನೋರೋಗಿಗಳಿಗೆ ಉಪಚಾರ ಮಾಡುವವರ ಬಳಿ ಪದೇ ಪದೇ ಹೋಗಬೇಕಾಗುತ್ತದೆ ಎಂಬುದೂ ಗಮನಕ್ಕೆ ಬಂದಿತು. ಇದರಿಂದ ರೋಗಿಗಳ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ, ಹಾಗೆಯೇ ಉಪಚಾರವನ್ನು ಪ್ರತಿದಿನ ಮಾಡಲು ಸಾಧ್ಯ ವಾಗುವುದಿಲ್ಲ. ಈ ಸ್ವಯಂಸೂಚನೆಗಳ ಉಪಚಾರಪದ್ಧತಿಗಳನ್ನು ಬಳಸಿ ರೋಗಿಗಳು ತಮ್ಮ ಮೇಲೆ ದಿನವಿಡಿ ೧೦-೧೫ ಸಲ ಉಪಚಾರ ಮಾಡಿಕೊಳ್ಳಬಹುದು. ಇದರಿಂದ ಅವರು ಬೇಗ ಗುಣವಾಗುತ್ತಾರೆ.

೨ ಆ. ಮಾನಸಿಕ ಒತ್ತಡದಿಂದಲೂ ‘ಇಯೋಸಿನೋಫಿಲಿಯಾ’ ಆಗುವುದನ್ನು ಕಂಡು ಹಿಡಿಯುವುದು

ಪರಾತ್ಪರ ಗುರು ಡಾ. ಆಠವಲೆಯವರು ‘ಇಯೋಸಿನೋಫಿಲಿಯಾ’ ಎಂಬ ರಕ್ತದಲ್ಲಿನ ಜೀವಕೋಶಗಳ ಒಂದು ರೋಗವು ಮಾನಸಿಕ ಒತ್ತಡದಿಂದಲೂ ಆಗಬಹುದು’ ಎಂಬುದನ್ನು ಕಂಡುಹಿಡಿದರು.

೨ ಇ.’ಭಾರತೀಯ ವೈದ್ಯಕೀಯ ಸಮ್ಮೋಹನ ಮತ್ತು ಸಂಶೋಧನ ಸಂಸ್ಥೆ’ಯ ಸ್ಥಾಪನೆ ಮತ್ತು ಅದರ ಮೂಲಕ ಮಾಡಿದ ಕಾರ್ಯ

ಪರಾತ್ಪರ ಗುರು ಡಾ. ಆಠವಲೆಯವರು ೧.೧.೧೯೮೨ ರಂದು ‘ಭಾರತೀಯ ವೈದ್ಯಕೀಯ ಸಮ್ಮೋಹನ ಮತ್ತು ಸಂಶೋಧನ ಸಂಸ್ಥೆ (ದ ಇಂಡಿಯನ್‌ ಸೊಸೈಟಿ ಫಾರ್‌ ಕ್ಲಿನಿಕಲ್‌ ಹಿಪ್ನಾಸಿಸ್‌ ಆಂಡ್‌ ರಿಸರ್ಚ್‌)’ಯನ್ನು ಸ್ಥಾಪನೆ ಮಾಡಿದರು. ‘ಅಂತಾರಾಷ್ಟ್ರೀಯ ಸಮ್ಮೋಹನ ಸಂಸ್ಥೆ’ಗೆ ಸಂಬಂಧಿಸಿದ ಈ ಸಂಸ್ಥೆಯ ಉದ್ದೇಶವು ‘ವೈದ್ಯಕೀಯ ದೃಷ್ಟಿಕೋನದಿಂದ ಸಮ್ಮೋಹನಶಾಸ್ತ್ರದ ಬಗ್ಗೆ ಸಂಶೋಧನೆ ಮಾಡುವುದು ಮತ್ತು ಭಾರತದಲ್ಲಿ ಸಮ್ಮೋಹನ ಉಪಚಾರ ಪದ್ಧತಿಯ ಪ್ರಸಾರ ಮಾಡುವುದು’ ಆಗಿತ್ತು. ಈ ಸಂಸ್ಥೆಯಲ್ಲಿ ೮-೧೦ ಡಾಕ್ಟರ್‌ಗಳು ಸಂಶೋಧನಾನಿರತರಾಗಿದ್ದರು. ಈ ಸಂಸ್ಥೆಯ ಮೂಲಕ ವೈದ್ಯರು, ದಂತವೈದ್ಯರು, ಮಾನಸಿಕತಜ್ಞರು (ಸೈಕಾಲಾಜಿಸ್ಟ್‌) ಮತ್ತು ಮಾನಸೋಪಚಾರತಜ್ಞರು ಮುಂತಾದವರಿಗಾಗಿ ೧೯೮೨ ರಿಂದ ೧೯೮೬ ರ ಕಾಲಾವಧಿಯಲ್ಲಿ ಮುಂಬೈ, ಬರೋಡಾ, ಕೊಲ್ಕತ್ತಾ ಮುಂತಾದ ಕಡೆಗಳಲ್ಲಿ ಸಮ್ಮೋಹನ ಉಪಚಾರಶಾಸ್ತ್ರದ ಅಧ್ಯಯನವರ್ಗಗಳನ್ನು ಆಯೋಜಿಸಿ ಸುಮಾರು ೪೦೦ ತಜ್ಞರಿಗೆ ತರಬೇತಿ ಕೊಡಲಾಯಿತು.

೨ ಈ. ಸಂಮ್ಮೋಹನಶಾಸ್ತ್ರ ಮತ್ತು ಸಂಮ್ಮೋಹನ ಉಪಚಾರಗಳ ಬಗೆಗಿನ ಗ್ರಂಥಸಂಪತ್ತು !

ಪರಾತ್ಪರ ಗುರು ಡಾ. ಆಠವಲೆಯವರು ಬರೆದ ‘ದಿ ಇಂಡಿಯನ್‌ ಜರ್ನಲ್‌ ಆಫ್‌ ಕ್ಲಿನಿಕಲ್‌ ಹಿಪ್ನೋಸಿಸ್‌ ಯಾಂಡ್‌ ರಿಸರ್ಚ್‌’ನ ೧ ರಿಂದ ೫ ಭಾಗಗಳು (೧೯೮೩ ರಿಂದ ೧೯೮೭), ಆ ಸಮಯದಲ್ಲಿ ಅನೇಕ ಕಿವಿ-ಮೂಗು-ಗಂಟಲು ತಜ್ಞರು (ಇ.ಎನ್.ಟಿ. ಸ್ಪೆಶಲಿಸ್ಟ್) ಈ ಸಂಶೋಧನೆಯನ್ನು ಪ್ರಶಂಸಿಸಿದರು.

ಇ. ಬಳಸಿ ಎಸೆಯುವ ಮೂಗು ತಪಾಸಣೆಯ ಪ್ಲಾಸ್ಟಿಕ್ ಉಪಕರಣ (Disposal Nasal Speculum), ಫೈಬರ್ ಗ್ಲಾಸ್‌ನ ಗುಳಿಗೆ ಎಣಿಸುವ ಯಂತ್ರ (ಟ್ಯಾಬ್ಲೆಟ್ ಕೌಂಟಿಂಗ್ ಮೆಶಿನ್), ಹಾಗೆಯೇ ‘ಸ್ಟೆತೋಸ್ಕೋಪ್ನ (ಟಿಪ್ಪಣಿ) ಕಿವಿಗೆ ಹಾಕುವ ಬಳಸಿ ಎಸೆಯುವ ಭಾಗವನ್ನು (ಡಿಸ್ಪೋಸಬಲ್ ಇಯರ್ ಪೀಸ್) ತಯಾರಿಸುವ ವಿಚಾರ ನಡೆಯುತ್ತಿದ್ದಾಗ ಪರಾತ್ಪರ ಗುರು ಡಾ. ಆಠವಲೆಯವರು ಭಾರತಕ್ಕೆ ಹಿಂತಿರುಗುವುದು ನಿಗದಿಯಾಗಿದ್ದರಿಂದ ಸಂಶೋಧನಾ ಕಾರ್ಯವು ಪೂರ್ಣವಾಗಲಿಲ್ಲ.

ಟಿಪ್ಪಣಿ – ‘ಸ್ಟೆತೋಸ್ಕೋಪ್ ಎಂದರೆ ಹೃದಯದ ಬಡಿತ ಅಥವಾ ಶ್ವಾಸೋಚ್ಛ್ವಾಸವನ್ನು ಕೇಳಲು ಉಪಯೋಗಿಸುವ ಉಪಕರಣ.

‘ಹಿಪ್ನೋಥೆರಪಿ ಎಕಾರ್ಡಿಂಗ್ ಟು ದಿ ಪರ್ಸನಾಲಿಟಿ ಡಿಫೆಕ್ಟ್ ಮಾಡೆಲ್ ಆಫ್ ಸೈಕೋಥೆರಪಿ, ‘ಸಂಮ್ಮೋಹನಶಾಸ್ತ್ರ, ‘ಸುಖೀ ಜೀವನಕ್ಕಾಗಿ ಸಮ್ಮೋಹನ ಉಪಚಾರ, ‘ಶಾರೀರಿಕ ರೋಗಗಳಿಗೆ ಸಂಮ್ಮೋಹನ ಉಪಚಾರ, ‘ಲೈಂಗಿಕ ಸಮಸ್ಯೆಗಳಿಗೆ ಸಂಮ್ಮೋಹನ ಉಪಚಾರ, ‘ಮನೋರೋಗಗಳಿಗೆ ಸ್ವಸಂಮ್ಮೋಹನ ಉಪಚಾರ (೨ ಭಾಗಗಳು), ‘ಸ್ವಭಾವದೋಷ ನಿರ್ಮೂಲನೆ ಮತ್ತು ಗುಣವೃದ್ಧಿ ಪ್ರಕ್ರಿಯೆ (೩ ಭಾಗಗಳು) ಈ ಗ್ರಂಥಗಳು ಮತ್ತು ಜನಪ್ರಿಯ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಅವರ ೧೨೩ ಲೇಖನಗಳು ಹಾಗೂ ವಿದೇಶಗಳಲ್ಲಿ ಪ್ರಶಂಸಿಸಲ್ಪಟ್ಟ ಸಂಶೋಧನಾ ಪ್ರಬಂಧಗಳು ಅವರ ವೈದ್ಯಕೀಯ ಕ್ಷೇತ್ರದಲ್ಲಿನ ಯಶಸ್ವಿ ಕಾಲಘಟ್ಟದ, ಹಾಗೆಯೇ ಸಮ್ಮೋಹನ ಉಪಚಾರದ ಸಂದರ್ಭದಲ್ಲಿನ ಅಧ್ಯಯನಪೂರ್ಣ ಮತ್ತು ಅದ್ವಿತೀಯ ಸಂಶೋಧನೆಯ ಫಲಶ್ರುತಿಯಾಗಿದೆ.