|
ನವದೆಹಲಿ – ಯಮುನಾ ನದಿಯ ಪ್ರವಾಹ ಪರಿಸರದಲ್ಲಿರುವ ಪುರಾತನ ಶಿವಮಂದಿರವು ಅಕ್ರಮವಾಗಿದೆಯೆಂದು ಸರ್ವೋಚ್ಚ ನ್ಯಾಯಾಲಯವು ಜೂನ್ 14 ರಂದು ತೀರ್ಪು ನೀಡಿ, ಅದನ್ನು ಕೆಡವಲು ದೆಹಲಿ ಸರ್ಕಾರಕ್ಕೆ ಅನುಮತಿ ನೀಡಿದೆ. ಕಳೆದ ತಿಂಗಳು ಮೇ 29 ರಂದು ದೆಹಲಿ ಉಚ್ಚ ನ್ಯಾಯಾಲಯವು ನೀಡಿದ ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಆಖಾಡಾ ಸಮಿತಿಯು ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿತ್ತು. ನ್ಯಾಯಮೂರ್ತಿ ಪಿ.ವಿ.ಸಂಜಯ ಕುಮಾರ ಮತ್ತು ಅಗಸ್ಟಿನ ಜಾರ್ಜ ಮಸಿಹ ಅವರ ಪೀಠವು ಈ ತೀರ್ಪು ನೀಡಿತು. ಪ್ರವಾಹ ಪ್ರದೇಶದಲ್ಲಿ ನೀವು ಅಖಾಡಾವನ್ನು ಹೇಗೆ ನಿರ್ಮಿಸುತ್ತೀರಿ? ಎಂದು ನ್ಯಾಯಮೂರ್ತಿ ಪಿ.ವಿ. ಸಂಜಯ ಕುಮಾರ ಕೇಳಿದರು.
ದೆಹಲಿ ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದ್ದೇನು ?
ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಧರ್ಮೇಶ ಶರ್ಮಾ ಹೇಳಿದ್ದು:
1. ಯಮುನಾ ನದಿಯ ಜಲಾನಯನ ಪ್ರದೇಶ ಮತ್ತು ಪ್ರವಾಹ ಪ್ರದೇಶವನ್ನು ಅತಿಕ್ರಮಣ ಮತ್ತು ಅಕ್ರಮ ನಿರ್ಮಾಣದಿಂದ ಮುಕ್ತಗೊಳಿಸಿದರೆ ಭಗವಾನ ಶಿವನು ಹೆಚ್ಚು ಪ್ರಸನ್ನನಾಗುತ್ತಾನೆ.
2. ಭಗವಾನ ಶಿವನಿಗೆ ನ್ಯಾಯಾಲಯದ ಸಂರಕ್ಷಣೆಯ ಆವಶ್ಯಕತೆಯಿಲ್ಲ. ಬದಲಾಗಿ ನಮಗೆ ಶಿವನ ರಕ್ಷಣೆ ಮತ್ತು ಆಶೀರ್ವಾದದ ಅವಶ್ಯಕತೆಯಿದೆ.
3. ದೇವಸ್ಥಾನದಲ್ಲಿ ದೈನಂದಿನ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ ಮತ್ತು ಹಬ್ಬದ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಅದಕ್ಕೆ ಸಾರ್ವಜನಿಕ ಮಹತ್ವ ಸಿಗುವುದಿಲ್ಲ. ‘ದೇವಸ್ಥಾನ ಸಾರ್ವಜನಿಕರಿಗೆ ಸಮರ್ಪಿತವಾಗಿದೆ’ ಹಾಗೆಯೇ ‘ದೇವಸ್ಥಾನವು ಸಮಾಜದಿಂದ ವ್ಯವಸ್ಥಿತವಾಗಿ ನಿರ್ಮಿಸಿರುವ ಖಾಸಗಿ ದೇವಸ್ಥಾನವಲ್ಲ’ ಈ ವಾದವನ್ನು ಬೆಂಬಲಿಸಲು ಅರ್ಜಿದಾರರ ಬಳಿ ಯಾವುದೇ ಇತರ ದಾಖಲೆಗಳು ಲಭ್ಯವಿಲ್ಲ.
ಸಂಪಾದಕೀಯ ನಿಲುವುಬಹುಸಂಖ್ಯಾತರ ಧಾರ್ಮಿಕ ಸ್ಥಳಗಳ ಸಂದರ್ಭದಲ್ಲಿ ಈ ರೀತಿಯ ತೀರ್ಪನ್ನು ಎಂದಾದರೂ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಇಸ್ಲಾಮಿಕ್ ದೇಶಗಳಲ್ಲಿ ನೀಡಲು ಸಾಧ್ಯವಿದೆಯೇ? ಭಾರತೀಯ ಪ್ರಜಾಪ್ರಭುತ್ವವು ಹಿಂದೂಗಳ ಪರ ಮತ್ತು ಅಲ್ಪಸಂಖ್ಯಾತರ ವಿರೋಧಿಯಾಗಿದೆ ಎಂದು ಕೂಗಾಡುವವರಿಗೆ ಈ ಬಗ್ಗೆ ಪ್ರಶ್ನಿಸಬೇಕು. |