AP CM Promises To Safeguard Hindu Interests: ಹಿಂದೂ ಧರ್ಮದ ರಕ್ಷಣೆಗಾಗಿ ನಾನು ವಚನಬದ್ಧ ! – ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

  • ಆಂಧ್ರಪ್ರದೇಶದ ಹೊಸದಾಗಿ ಚುನಾಯಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಭರವಸೆ

  • ಮುಖ್ಯಮಂತ್ರಿಗಳು ತಿರುಪತಿ ಬಾಲಾಜಿಯ ದರ್ಶನ ಪಡೆದರು ! 

  • ತಿರುಪತಿ ದೇವಸ್ಥಾನದ ಆಡಳಿತದಲ್ಲಿನ ಭ್ರಷ್ಟಾಚಾರ ತೊಡೆದು ಹಾಕಲು ನಿರ್ಧಾರ ! 

ತಿರುಮಲ (ಆಂಧ್ರಪ್ರದೇಶ) – ಹಿಂದೂ ಧರ್ಮವನ್ನು ರಕ್ಷಿಸಲು ನಾನು ವಚನಬದ್ಧನಾಗಿದ್ದೇನೆ ಎಂದು ಆಂಧ್ರಪ್ರದೇಶದ ಹೊಸದಾಗಿ ಚುನಾಯಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ಭರವಸೆ ನೀಡಿದರು.ಇತ್ತೀಚೆಗಷ್ಟೇ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದ ಚಂದ್ರಬಾಬು ನಾಯ್ಡು ಇವರು ತಿರುಪತಿ ಬಾಲಾಜಿಯ ದರ್ಶನ ಪಡೆದರು. ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ನಾಯ್ಡು ಇವರು ಮಾತನ್ನು ಮುಂದುವರಿಸಿ, “ಹಿಂದಿನ ಜಗನ್ ಮೋಹನ್ ರೆಡ್ಡಿ ಸರಕಾರದ ಕಾಲಾವಧಿಯಲ್ಲಿ, ಶ್ರೀ ವೆಂಕಟೇಶ್ವರ ದೇವಸ್ಥಾನದ ವ್ಯವಸ್ಥಾಪನೆಯನ್ನು ನೋಡಿಕೊಳ್ಳುವ ‘ತಿರುಮಲ ತಿರುಪತಿ ದೇವಸ್ಥಾನದ ಪ್ರಾಧಿಕಾರ’ದ ಕಾರ್ಯನಿರ್ವಹಣೆಯಲ್ಲಿ ಅನಿಯಮಿತತೆ ಇತ್ತು. ನಾನು ತಿರುಮಲ ತಿರುಪತಿ ದೇವಸ್ಥಾನದ ಆಡಳಿತದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ವಚನಬದ್ಧನಾಗಿದ್ದೇನೆ. ನಾನು ಸರಕಾರಿ ವ್ಯವಸ್ಥೆಯ ಶುದ್ಧೀಕರಣದ ಪ್ರಾರಂಭವನ್ನು ತಿರುಮಲದಿಂದ ಮಾಡುವೆನು. ತಿರುಮಲವನ್ನು ಅಪವಿತ್ರಗೊಳಿಸುವುದನ್ನು ನಾನು ಮನ್ನಿಸುವುದಿಲ್ಲ. ತಿರುಮಲದಲ್ಲಿ ಕೇವಲ ಗೋವಿಂದನ ನಾಮದ ಮಾರ್ದನಿಯೇ ಇರಲಿದೆ. ಹಿಂದಿನ ರಾಜ್ಯ ಸರಕಾರವು ತಿರುಮಲಾ ತಿರುಪತಿ ದೇವಸ್ಥಾನದ ವ್ಯಾಪಾರೀಕರಣ ಮಾಡಿದರು. ಅವರು ಈ ಪವಿತ್ರ ಧಾರ್ಮಿಕ ಸ್ಥಳವನ್ನು ಗಾಂಜಾ, ಸರಾಯಿ ಮತ್ತು ಮಾಂಸಾಹಾರ ಇವುಗಳ ಕೇಂದ್ರವನ್ನಾಗಿಸಿದರು. ೨೦೪೭ ರ ವರೆಗೆ, ತೆಲುಗು ಜನರು ವಿಶ್ವದಲ್ಲೇ ಮೊದಲ ಕ್ರಮಾಂಕದಲ್ಲಿರುತ್ತಾರೆ. ನಾನು ಆಂಧ್ರಪ್ರದೇಶವನ್ನು ದೇಶದಲ್ಲೇ ಮೊದಲ ಸ್ಥಾನದ(ನಂ ಒನ್) ರಾಜ್ಯವನ್ನಾಗಿ ಮಾಡುವೆನು. ರಾಜ್ಯದಲ್ಲಿ ಅಪರಾಧ ಮತ್ತು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ನಾವು ಒಳ್ಳೆಯದನ್ನು ರಕ್ಷಿಸುತ್ತೇವೆ ಮತ್ತು ಕೆಟ್ಟದ್ದನ್ನು ಶಿಕ್ಷಿಸುತ್ತೇವೆ”, ಎಂದು ಹೇಳಿದರು.