ಚಿತ್ರಕೂಟ (ಮಧ್ಯಪ್ರದೇಶ) ಇಲ್ಲಿನ ವನವಾಸಿ ಶ್ರೀರಾಮಮಂದಿರದ ಅರ್ಚಕರಿಗೆ ಕೊಲೆ ಬೆದರಿಕೆ !

  • ದೇವಸ್ಥಾನವನ್ನು ಕಬಳಿಸಲು ಭೂಗಳ್ಳರ ಪ್ರಯತ್ನ !

  • ಪೋಲೀಸರು ಯಾವುದೇ ಕ್ರಮ ಕೈಕೊಳ್ಳುತ್ತಿಲ್ಲವೆಂದು ಅರ್ಚಕರಿಂದ ಆರೋಪ

ಚಿತ್ರಕೂಟ (ಮಧ್ಯಪ್ರದೇಶ) – ಇಲ್ಲಿನ ನಾಯಗಾಂವನ ವನವಾಸಿ ಶ್ರೀರಾಮ ಮಂದಿರದಲ್ಲಿ ವಾಸವಾಗಿರುವ ಬಾಲ ಮುಕುಂದ ಆಚಾರ್ಯ ಗುರು ಶ್ರೀ ಶಂಕರನ ಪ್ರಪನ್ನಾಚಾರ್ಯಜಿ ಮಹಾರಾಜ ಅವರಿಗೆ ಕೊಲೆ ಬೆದರಿಕೆ ನೀಡಿದ್ದಾರೆ. ಮತ್ತು ಶ್ರೀರಾಮ ಮಂದಿರವನ್ನು ಹಸ್ತಾಂತರಿಸುವಂತೆ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ‘ಜೂನ್ 2 ರಂದು ನನ್ನ ಮೇಲೆ ಹಲ್ಲೆ ನಡೆಸಿ ನನ್ನ ಬಳಿಯಿದ್ದ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಬಾಲ ಮುಕುಂದ ಆಚಾರ್ಯ ಮಾತು ಮುಂದುವರೆಸಿ,

1. ಯಾದವ ಕುಟುಂಬವು 40 ವರ್ಷಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಿ ನನ್ನನ್ನು ಇಲ್ಲಿ ಅರ್ಚಕನನ್ನಾಗಿ ನೇಮಿಸಿದ್ದರು. ನನ್ನ ಬಳಿ ಈ ಬಗ್ಗೆ ಹಸ್ತಲಿಖಿತ ದಾಖಲೆಗಳಿವೆ.

2. ಈಗ ಬೆದರಿಕೆ ಹಾಕುವವರು ದೇವಸ್ಥಾನವನ್ನು ವಶಪಡಿಸಿಕೊಂಡು ಹೋಟೆಲ್ ನಿರ್ಮಿಸುವ ಉದ್ದೇಶದಿಂದ ನನ್ನನ್ನು ಇಲ್ಲಿಂದ ಹೊರದೂಡಲು ಪ್ರಯತ್ನಿಸುತ್ತಿದ್ದಾರೆ. ಅವರೆಲ್ಲರೂ ಅಪರಾಧಿ ಹಿನ್ನಲೆಯವರಾಗಿದ್ದಾರೆ.

3. 10 ವರ್ಷಗಳ ಹಿಂದೆ ಪುಂಗಾರಿಯಾ ಬಾಬಾ ಅವರ ಆಶ್ರಮದಲ್ಲಿ ಸೀಮೆಎಣ್ಣೆ ಸುರಿದು ಸುಟ್ಟುಹಾಕಿ ಅವರ ಆಶ್ರಮವನ್ನು ಜಪ್ತಿ ಮಾಡಲಾಗಿತ್ತು. ಈಗ ಅಲ್ಲಿ ಹೋಟೆಲ್ ನಿರ್ಮಾಣವಾಗುತ್ತಿದೆ. ಅದೇ ಜನರ ಗೂಂಡಾಗಿರಿ ಮುಂದುವರಿದಿದ್ದು, ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿಕೊಳ್ಳುತ್ತಿಲ್ಲ. ಇದರ ಮುಖ್ಯ ಕಾರಣವೆಂದರೆ ಯಾವುದೇ ಹುದ್ದೆಯಲ್ಲಿರುವ ಪೊಲೀಸ್ ಅಧೀಕ್ಷಕರಿಗೆ ಅವರ ಆಶ್ರಮದಲ್ಲಿ ಉಚಿತ ವಸತಿ ಒದಗಿಸಲಾಗುತ್ತದೆ. ಇದರಿಂದಾಗಿ ಪೊಲೀಸರು ಗೂಂಡಾಗಳಿಗೆ ಬೆಂಬಲ ನೀಡುತ್ತಾರೆ. ಆದ್ದರಿಂದಲೇ ಅವರ ಧೈರ್ಯ ಹೆಚ್ಚಿದೆ. ತಮಗೆ ಬೇಕಾದ ಜಮೀನನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಹೋಟೆಲ್ ಆಗಿ ಪರಿವರ್ತಿಸುತ್ತಾರೆ.

4. ನನಗೆ ಬೆದರಿಕೆ ಬಂದಾಗ, ನಾನು ಚಿತ್ರಕೂಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ; ಆದರೆ ನನಗೆ ಸ್ವೀಕೃತಿಪತ್ರ ಸಿಕ್ಕಿಲ್ಲ. ದೂರು ನೀಡಿದ ನಂತರ ಮೇಲ್ಕಂಡ ಆರೋಪಿಗಳು ಜೂನ್ 2 ರಂದು ಮುಂಜಾನೆ ಕತ್ತಿ ಮತ್ತು ಬಂದೂಕುಗಳೊಂದಿಗೆ ದೇವಸ್ಥಾನದ ಸ್ಥಳಕ್ಕೆ ಬಂದು ನನ್ನ ವಸ್ತುಗಳನ್ನು ದೋಚಿಕೊಂಡು ಹೋಗಿದ್ದರು. ನನ್ನನ್ನು ದೇವಸ್ಥಾನದಿಂದ ಹೊರಹಾಕಲಾಯಿತು. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ.

5. ಈ ಹಿಂದೆ ಮೇ 30 ರಂದು ಮಧ್ಯಪ್ರದೇಶ ಹೈಕೋರ್ಟ್ ಸಂಬಂಧಪಟ್ಟ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶ ನೀಡಿತ್ತು; ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪ ಆಡಳಿತ ಇರುವಾಗ ಭೂಗಳ್ಳರಿಂದ ಇಂತಹ ಕೃತ್ಯ ಆಗುತ್ತಿರುವುದು ಮತ್ತು ಪೊಲೀಸರು ಯಾವುದೇ ಕ್ರಮ ಕೈಕೊಳ್ಳದೇ ಇರುವುದನ್ನು ಹಿಂದೂಗಳು ಬಯಸುವುದಿಲ್ಲ ! ಈ ಪ್ರಕರಣದಲ್ಲಿ ಸರಕಾರ ತಕ್ಷಣವೇ ಕ್ರಮ ಕೈಕೊಂಡು ದೇವಸ್ಥಾನದ ಅರ್ಚಕರಿಗೆ ರಕ್ಷಣೆ ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !