ಪ್ರಧಾನಿ ಮೋದಿಗೆ 8 ದಿನಗಳ ನಂತರ ಅಭಿನಂದನೆ ನೀಡಿದ ಚೀನಾದ ಪ್ರಧಾನಿ !
ಬೀಜಿಂಗ್ (ಚೀನಾ) – ಚೀನಾದ ಪ್ರಧಾನಿ ಲಿ ಕಿಯಾಂಗ್ ಇವರು ಚುನಾವಣಾ ಫಲಿತಾಂಶದ 8 ದಿನಗಳ ನಂತರ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಕಿಯಾಂಗ್ ಇವರು ತಮ್ಮ ಸಂದೇಶದಲ್ಲಿ, ಚೀನಾ-ಭಾರತ ಸಂಬಂಧವನ್ನು ಬಲಪಡಿಸಲು ಮತ್ತು ಸ್ಥಿರ ಅಭಿವೃದ್ಧಿ ಕೇವಲ ಎರಡೂ ದೇಶಗಳ ಕಲ್ಯಾಣಕ್ಕಾಗಿಯೇ ಅವಶ್ಯಕವಲ್ಲ, ಬದಲಾಗಿ ಸಂಪೂರ್ಣ ಪ್ರದೇಶ ಹಾಗೂ ವಿಶ್ವಕ್ಕೆ ಸ್ಥಿರತೆಯನ್ನು ತರುವುದಕ್ಕಾಗಿ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.
ಉಭಯ ದೇಶಗಳ ಮಧ್ಯೆ ದ್ವಿಪಕ್ಷೀಯ ಸಂಬಂಧಗಳನ್ನು ಸರಿಯಾದ ದಿಕ್ಕಿನಲ್ಲಿ ಹೋಗುವುದಕ್ಕಾಗಿ ಭಾರತದೊಂದಿಗೆ ಕೆಲಸ ಮಾಡಲು ಚೀನಾ ಬದ್ಧವಾಗಿದೆ. ಎರಡೂ ದೇಶಗಳ ನಾಗರಿಕರಿಗಾಗಿ ಇದು ಸರಿಯಾದ ನಿರ್ಣಯ ಇರುವುದು ಎಂದು ಹೇಳಿದ್ದಾರೆ.
‘China is committed to work with India!’ – China’s Prime Minister Li Qiang
China’s PM has congratulated PM Modi 8 days after the election results!
If China really wanted to work with India, it would not have taken actions against India. So, India can never work with deceitful… pic.twitter.com/BfQev9TpVN
— Sanatan Prabhat (@SanatanPrabhat) June 12, 2024
ಸಂಪಾದಕೀಯ ನಿಲುವುಚೀನಾಗೆ ನಿಜವಾಗಿಯೂ ಭಾರತದೊಂದಿಗೆ ಕೆಲಸ ಮಾಡುವುದಿದ್ದರೆ, ಅದು ಭಾರತದ ವಿರುದ್ಧದ ಚಟುವಟಿಕೆಗಳನ್ನು ಮಾಡುತ್ತಿರಲಿಲ್ಲ. ಹಾಗಾಗಿ ಕಪಟಿ ಚೀನಾದೊಂದಿಗೆ ಭಾರತವು ಎಂದಿಗೂ ಕೆಲಸ ಮಾಡಲು ಸಾಧ್ಯವಿಲ್ಲ ! |