Geert Wilders On Hindus In Kashmir : ಕಾಶ್ಮೀರದಲ್ಲಿ ಹಿಂದೂಗಳ ಕೊಲೆಯಾಗಲು ಬಿಡಬೇಡಿ! – ದರ್ಲೆಂಡ್ಸ್‌ನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್

ನೆದರ್ಲೆಂಡ್ಸ್‌ನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್ ಅವರ ಮನವಿ !

ಗೀರ್ಟ್ ವೈಲ್ಡರ್ಸ್

ಆಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್) – ‘ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಗೆ ಹಿಂದೂಗಳನ್ನು ಕೊಲ್ಲಲು ಬಿಡಬೇಡಿ. ಭಾರತದಲ್ಲಿ ನಿಮ್ಮ ಜನರನ್ನು ರಕ್ಷಿಸಿ !’, ನೆದರ್ಲೆಂಡ್ಸ್‌ನ ‘ಪಾರ್ಟಿ ಫಾರ್ ಫ್ರೀಡಂ’ ಅಧ್ಯಕ್ಷರಾಗಿರುವ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್ ಅವರು ಒಂದು ಲೇಖನ ಪೋಸ್ಟ ಮಾಡಿದರು. ಜಮ್ಮುವಿನ ರಿಯಾಸಿ ಪ್ರದೇಶದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಹಿಂದೂ ಭಕ್ತರ ಮೇಲೆ ದಾಳಿ ಮಾಡಿದ ನಂತರ ವೈಲ್ಡರ್ಸ್ ಮೇಲಿನ ಲೇಖನವನ್ನು ಪ್ರಸಾರ ಮಾಡಿದ್ದಾರೆ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ. ಇದಕ್ಕಾಗಿ ‘ಆಲ್ ಐಸ್ ಆನ್ ರಿಯಾಸಿ'(ಎಲ್ಲರ ಕಣ್ಣು ರಿಯಾಸಿಯತ್ತ) ‘ಹ್ಯಾಶ್‌ಟ್ಯಾಗ್ ಟ್ರೆಂಡ್’ ಆಗುತ್ತಿದೆ (ಒಂದೇ ವಿಷಯದ ಬಗ್ಗೆ ಚರ್ಚೆ ಮಾಡಲು). ಗೀರ್ಟ್ ವೈಲ್ಡರ್ಸ್ ಈ ಹ್ಯಾಶ್‌ಟ್ಯಾಗ್‌ನೊಂದಿಗೆ ಮೇಲಿನದನ್ನು ಪೋಸ್ಟ್ ಮಾಡಿದ್ದಾರೆ.

‘ಆಲ್ ಐಸ್ ಆನ್ ರಾಫಾ’ ಎಂದು ಹೇಳುವವರು ಈಗೇಕೆ ಮೌನ ?

ಗಾಜಾ ಪಟ್ಟಿಯಲ್ಲಿರುವ ರಫಾ ಮೇಲೆ ಇಸ್ರೇಲಿ ನಡೆಸಿದ ಆಕ್ರಮಣದ ನಂತರ ಸಾಮಾಜಿಕ ಮಾಧ್ಯಮದಲ್ಲಿ ‘ಆಲ್ ಐಸ್ ಆನ್ ರಾಫಾ'(ಎಲ್ಲರ ಚಿತ್ತ ರಾಫಾನತ್ತ) ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಲಾಯಿತು ಮತ್ತು ಅದು ಇನ್ನೂ ಮುಂದುವರಿಸಿದೆ. ಆ ಮೂಲಕ ಇಸ್ರೇಲ್ ಗೆ ವಿರೋಧಿಸಲಾಗುತ್ತಿದೆ. ಭಾರತದ ಅನೇಕ ಗಣ್ಯರು, ಕಲಾವಿದರು ಇದನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದರು. ಇದೀಗ ಜಮ್ಮುವಿನ ರಿಯಾಸಿಯಲ್ಲಿ ನಡೆದ ದಾಳಿಗೆ ಅವರು ಟೀಕೆಗೆ ಗುರಿಯಾಗಿದ್ದಾರೆ. ‘ರಾಫಾ ಬೆಂಬಲಿಗರು ಈಗ ರಿಯಾಸಿಯಲ್ಲಿ ನಡೆದ ದಾಳಿಯಲ್ಲಿ ಹಿಂದೂಗಳ ಪರವಾಗಿ ಏಕೆ ಮಾತನಾಡುವುದಿಲ್ಲ’ ಎಂಬ ಪ್ರಶ್ನೆ ಕೇಳುವ ಮೂಲಕ ‘ಆಲ್ ಐಸ್ ಆನ್ ರಿಯಾಸಿ’ ಎಂಬ ಹ್ಯಾಶ್‌ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು, ‘ಯಾವಾಗ ಬೇರೆ ದೇಶದ ವಿಷಯಕ್ಕೆ ಬರುತ್ತದೆಯೋ ಆಗ ಬಾಲಿವುಡ್ ಸಕ್ರಿಯವಾಗಿದೆ; ಆದರೆ ನಮ್ಮದೇ ದೇಶದಲ್ಲಿ ಭಯೋತ್ಪಾದಕರ ದಾಳಿಗೆ ಮಕ್ಕಳು ಬಲಿಯಾದಾಗ ಅದರ ಬಗ್ಗೆ ಮೌನ ವಹಿಸುತ್ತಾರೆ’, ಎಂಬ ಪ್ರಶ್ನೆ ಕೇಳಲಾಗುತ್ತಿದೆ. ಹಾಗೆಯೇ ಗೀರ್ಟ್ ವೈಲ್ಡರ್ಸ್ ಅವರ ಮನವಿಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಂಪಾದಕೀಯ ನಿಲುವು

ಯುರೋಪ್‌ನಲ್ಲಿ ಕ್ರೈಸ್ತ ನಾಯಕರೊಬ್ಬರಿಗೆ ಈ ರೀತಿ ಮನವಿ ಮಾಡಲು ಅನಿಸುತ್ತದೆ; ಆದರೆ ಭಾರತದ ಒಬ್ಬನೇ ಒಬ್ಬ ಹಿಂದೂ ರಾಜಕಾರಣಿಯೂ ಸರ್ಕಾರಕ್ಕೆ ಮನವಿ ಮಾಡಲು ಅನಿಸುವುದಿಲ್ಲ, ಅವರನ್ನು ಚುನಾಯಿಸಿದ ಹಿಂದೂಗಳಿಗೆ ಅಷ್ಟೇ ನಾಚಿಕೆಗೇಡಿನ ಸಂಗತಿ !