Canada Target Killing : ಕೆನಡಾದಲ್ಲಿ ಭಾರತೀಯ ಯುವಕನ ಗುಂಡಿಕ್ಕಿ ಹತ್ಯೆ

4 ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು !

ಯುವರಾಜ್ ಗೋಯಲ್

ಒಟಾವಾ (ಕೆನಡಾ) – ಪಂಜಾಬ್‌ನ ಲೂಧಿಯಾನದಲ್ಲಿ ಭಾರತೀಯ ಮೂಲದ ಯುವಕ ಯುವರಾಜ್ ಗೋಯಲ್ ಅವರನ್ನು ಕೆನಡಾದ ಸರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗೋಯಲ್ 2019 ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಬಂದಿದ್ದನು ಮತ್ತು ಇತ್ತೀಚೆಗೆ ಕೆನಡಾದ ಖಾಯಂ ನಿವಾಸಿಯಾಗಿದ್ದನು. ಪೊಲೀಸರು, ಯುವರಾಜ್ ಬಗ್ಗೆ ಯಾವುದೇ ಅಪರಾಧ ಇತಿಹಾಸ ಇರಲಿಲ್ಲ. ಅವನ ಹತ್ಯೆಯ ಹಿಂದಿನ ಉದ್ದೇಶವನ್ನು ತನಿಖೆ ಮಾಡಲಾಗುತ್ತಿದೆ. ಪೊಲೀಸರು 4 ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಮನವೀರ್ ಬಸರಾಮ್ (ವಯಸ್ಸು 23), ಸಾಹಿಬ್ ಬಸರಾ (20 ವರ್ಷ), ಸರೆಯಲ್ಲಿನ ಹರ್ಕಿರತ್ ಜುಟ್ಟಿ (ವಯಸ್ಸು 23) ಮತ್ತು ಒಂಟಾರಿಯೊದ ಕೆಲೋನ್ ಫ್ರಾಂಕೋಯಿಸ್ (ವಯಸ್ಸು 20) ಹೀಗೆ ಗುರುತಿಸಲಾಗಿದೆ.