ಸಾಧಕರನ್ನು ತಮ್ಮ ಸ್ಥೂಲ ರೂಪದಲ್ಲಿ (ದೇಹದಲ್ಲಿ) ಸಿಲುಕಿಸದೇ ಅವರನ್ನು ರೂಪಿಸಿ ‘ಸ್ಥೂಲದಿಂದ ಸೂಕ್ಷ್ಮದೆಡೆಗೆ’ ಕರೆದೊಯ್ಯುವ ಅವತಾರಿ ದಿವ್ಯಾತ್ಮಾ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರು ಸಾಧನೆಯನ್ನು ಕಲಿಸುವಾಗ ಸಾಧಕರಿಗೆ ಸೂಕ್ಷ್ಮ ಜಗತ್ತಿನ ಜ್ಞಾನವನ್ನೂ ನೀಡಿದರು. ಅವರು ಸೂಕ್ಷ್ಮ ಪರೀಕ್ಷಣೆಯ ಸೇವೆಯ ಮೂಲಕ ಸಾಧಕರ ಆಧ್ಯಾತ್ಮಿಕ ಪ್ರವಾಸವನ್ನು ನಿಧಾನವಾಗಿ ನಿರ್ಗುಣ ಈಶ್ವರನ ಕಡೆಗೆ ಒಯ್ದರು. ಅವರು ‘ಸೂಕ್ಷ್ಮ ಜಗತ್ತಿನ ಘಟನಾವಳಿಗಳ ಪರೀಕ್ಷಣೆ ಮಾಡಲು ಹೇಗೆ ಕಲಿಸಿದರು ಮತ್ತು ಸೂಕ್ಷ್ಮವನ್ನು ತಿಳಿಯಬಲ್ಲ ಸಾಧಕರನ್ನು ಹೇಗೆ ತಯಾರಿಸಿದರು ?’, ಇವುಗಳ ಬಗ್ಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ನೀಡಿದ ಅಂಶಗಳನ್ನು ಮುಂದೆ ಕೊಡಲಾಗಿದೆ.      

(ಭಾಗ ೬)

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

೧. ಪರಾತ್ಪರ ಗುರು ಡಾಕ್ಟರರು, ‘ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ನಾಮಜಪಾದಿ ಉಪಾಯಗಳಿಂದ ಹೇಗೆ ಪರಿಣಾಮವಾಗುತ್ತದೆ ?’, ಎಂಬುದನ್ನು ಅಧ್ಯಯನ ಮಾಡಲು ಕಲಿಸುವುದು

‘ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮವನ್ನು ಅರಿಯಬಲ್ಲ ಸಾಧಕರಾದ ನಮಗೆಲ್ಲರಿಗೆ ಸೂಕ್ಷ್ಮ ಪರೀಕ್ಷಣೆಯೊಂದಿಗೆ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಿಗೆ ಉಪಾಯ ಮಾಡಲೂ ಕಲಿಸಿದರು. ಪರಾತ್ಪರ ಗುರು ಡಾಕ್ಟರರು ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಗಾಗಿ ಸ್ವತಃ ನಾಮಜಪಾದಿ ಉಪಾಯಗಳನ್ನು ಅನೇಕ ಗಂಟೆಗಳ ಕಾಲ ಮಾಡುತ್ತಿದ್ದರು ಮತ್ತು ‘ಆ ಉಪಾಯಗಳಿಂದಾಗುವ ಪರಿಣಾಮಗಳನ್ನು ನಮಗೆ ಅಧ್ಯಯನ ಮಾಡಲು ಹೇಳುತ್ತಿದ್ದರು. ಸೂಕ್ಷ್ಮವನ್ನು ತಿಳಿಯಬಲ್ಲ ಸಾಧಕರು ಇದರ ಅಧ್ಯಯನ ಮಾಡುತ್ತಿದ್ದರು.

. ಸಚ್ಚಿದಾನಂದ ಸ್ಥಿತಿಯಲ್ಲಿದ್ದರೂ ಸತತ ಕಲಿಯುವ ಸ್ಥಿತಿಯಲ್ಲಿರುವ ಪರಾತ್ಪರ ಗುರು ಡಾ. ಆಠವಲೆ !

ಆಗ ಗುರುದೇವರು, ”ನೀವು ಮಾಡಿದ ಪರೀಕ್ಷಣೆಯಿಂದ ನನಗೂ ಕಲಿಯಲು ಸಿಗುತ್ತದೆ”, ಎನ್ನುತ್ತಿದ್ದರು. ಈಗಲೂ ಅವರು ಹಾಗೆಯೇ ಹೇಳುತ್ತಾರೆ. ಪರಾತ್ಪರ ಗುರುದೇವರು, ”ಪ್ರತಿಯೊಬ್ಬ ಸಾಧಕನಿಂದ ನಾನು ನಿತ್ಯ ಕಲಿಯುತ್ತಿರುತ್ತೇನೆ, ಆದುದರಿಂದ ನನಗೆ ಎಂದಿಗೂ ಬೇಸರ ಬರುವುದಿಲ್ಲ. ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ. ಯಾರೂ ಪರಿಪೂರ್ಣರಿಲ್ಲ. ಈಶ್ವರನೊಬ್ಬನೇ ಪರಿಪೂರ್ಣನಾಗಿದ್ದಾನೆ. ಯಾವಾಗಲೂ ಕಲಿಯುತ್ತಿರುವುದರಿಂದ ಆನಂದ ಸಿಗುತ್ತದೆ. ಜ್ಞಾನದಲ್ಲಿ ಆನಂದವಿದೆ. ಆನಂದದಲ್ಲಿ ಸಾತತ್ಯ ಬಂದರೆ, ನಮಗೆ ಸಚ್ಚಿದಾನಂದ ಅವಸ್ಥೆಯನ್ನು ಬೇಗನೆ ಪ್ರಾಪ್ತಮಾಡಿಕೊಳ್ಳಬಹುದು”, ಎಂದು ಹೇಳುತ್ತಿದ್ದರು.

೩. ಪರಾತ್ಪರ ಗುರು ಡಾಕ್ಟರರು ಸಾಧಕರ ಜಿಜ್ಞಾಸೆಯನ್ನು ಜಾಗೃತಗೊಳಿಸಿ ಅವರನ್ನು ಜ್ಞಾನ ಪಡೆಯುವ

ಈಶ್ವರೀ ಪ್ರಕ್ರಿಯೆಯ ಮಾಧ್ಯಮವನ್ನಾಗಿಸುವುದು ಈ ರೀತಿ ‘ಮೋಕ್ಷಪ್ರಾಪ್ತಿಯಲ್ಲಿ ಅಧ್ಯಾತ್ಮಿಕ ಜ್ಞಾನವನ್ನು ಪಡೆಯುವ ಪ್ರಕ್ರಿಯೆಯ ಮಹತ್ವದ ಸಂಸ್ಕಾರವನ್ನೇ ಪರಾತ್ಪರ ಗುರು ಡಾಕ್ಟರರು ನಮ್ಮೆಲ್ಲ ಸಾಧಕರಲ್ಲಿ ಮಾಡಿದರು. ಜ್ಞಾನಪ್ರಾಪ್ತಿಯ ಮಹತ್ವವನ್ನು ಹೇಳಿ ಅವರು ನಮ್ಮ ಜಿಜ್ಞಾಸೆಯನ್ನು ಜಾಗೃತಗೊಳಿಸಿದರು. ಮುಂದೆ ಈ ಜಿಜ್ಞಾಸೆಯೇ ಸನಾತನದ ಸಾಧಕರಿಗೆ ಜ್ಞಾನವನ್ನು ಪಡೆಯುವ ಈಶ್ವರೀ ಪ್ರಕ್ರಿಯೆಯ ಮಾಧ್ಯಮವಾಯಿತು.

೪. ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ಕೈ ಬೆರಳುಗಳ ವಿವಿಧ ರೀತಿಯ ಮುದ್ರೆಗಳ ಅಧ್ಯಯನ ಮಾಡಲು ಕಲಿಸುವುದು

ಪರಾತ್ಪರ ಗುರು ಡಾಕ್ಟರರು ಕೈ ಬೆರಳುಗಳ ವಿವಿಧ ರೀತಿಯ ಮುದ್ರೆ ಗಳನ್ನು ಮಾಡಿ ಆಧ್ಯಾತ್ಮಿಕ ಉಪಾಯ ಮಾಡುತ್ತಿದ್ದರು. ಅವರು, ”ಈ ಜಗತ್ತು ಪಂಚಮಹಾಭೂತಗಳಿಂದ ತಯಾರಾಗಿದೆ. ಪ್ರತಿಯೊಂದು ಮುದ್ರೆಗೆ ನಿರ್ದಿಷ್ಟವಾದ ಅರ್ಥ ಇರುತ್ತದೆ. ಈ ಮುದ್ರೆಯಿಂದ ಪಂಚತತ್ತ್ವಗಳಲ್ಲಿ (ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ) ಯಾವ ತತ್ತ್ವದ ಸ್ಪಂದನಗಳು ಪ್ರಕ್ಷೇಪಿಸುತ್ತವೆ ?’, ಅವುಗಳನ್ನು ಕಂಡು ಹಿಡಿಯಿರಿ. ಆ ಸ್ಪಂದನಗಳನ್ನು ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿಗಳೆಂಬ ದೇಹದಲ್ಲಿ ಅಡಗಿರುವ ಮತ್ತು ಕಾರ್ಯದ ಆವಶ್ಯಕತೆಗನುಸಾರ ಜಾಗೃತವಾಗುವ ಆಧ್ಯಾತ್ಮಿಕ ಊರ್ಜೆಯೊಂದಿಗೆ ಜೋಡಿಸಿರಿ !” ಎಂದು ಹೇಳುತ್ತಿದ್ದರು.

೪ ಅ. ಸಾಧಕರಿಗೆ ಸೂಕ್ಷ್ಮ ಪರೀಕ್ಷಣೆಯನ್ನು ಆಧ್ಯಾತ್ಮಿಕ ಪರಿಭಾಷೆಯಲ್ಲಿ ಹೇಳಲು ಕಲಿಸುವುದು : ಆ ಸಮಯದಲ್ಲಿ ‘ಸೂಕ್ಷ್ಮ ಪರೀಕ್ಷಣೆಯನ್ನು ಹೇಳುವಾಗ ಅದನ್ನು ನಿರ್ದಿಷ್ಟವಾಗಿ ಹೇಗೆ ಹೇಳಬೇಕು ?’, ಎಂದೂ ಪರಾತ್ಪರ ಗುರು ಡಾಕ್ಟರರು ನಮಗೆ ಕಲಿಸಿದರು, ಉದಾ. ‘ಈಗ ಮಾಡಿದ ಕೈಯ ಮುದ್ರೆಯಿಂದ ತೇಜತತ್ತ್ವದ ಸ್ಪಂದನಗಳು ಶಕ್ತಿಯ ರೂಪದಲ್ಲಿ ಹೊರಬೀಳುತ್ತಿವೆ.’ ಕಾಲಾಂತರದಲ್ಲಿ ನಮಗೆ ಆಧ್ಯಾತ್ಮಿಕ ಪರಿಭಾಷೆಯಲ್ಲಿ ಈ ಪರೀಕ್ಷಣೆಯನ್ನು ಹೇಳಲು ಸಾಧ್ಯವಾಗತೊಡಗಿತು. ಪರಾತ್ಪರ ಗುರು ಡಾಕ್ಟರರೇ ನಮಗೆ ಈ ಭಾಷೆಯನ್ನು ಕಲಿಸಿದರು.

೫. ಪರಾತ್ಪರ ಗುರು ಡಾಕ್ಟರರು ‘ತಮ್ಮಲ್ಲಿನ ಈಶ್ವರೀ ಶಕ್ತಿಯನ್ನು ಸ್ಮರಿಸಿ ಅಧ್ಯಾತ್ಮದಲ್ಲಿನ ಉತ್ತರಗಳನ್ನು ಕಂಡುಹಿಡಿಯಿರಿ’, ಎಂದು ಹೇಳುವುದು ಮತ್ತು ಆ ರೀತಿ ಪ್ರಯತ್ನಿಸಿದಾಗ ‘ಗುರುದೇವರೇ ಮಾರ್ಗದರ್ಶನ ಮಾಡುತ್ತಿದ್ದಾರೆ’, ಎಂಬ ಅನುಭೂತಿ ಬರುವುದು 

ಒಂದು ಬಾರಿ ಗುರುದೇವರು, ”ನಮ್ಮಲ್ಲಿ ಒಂದು ಈಶ್ವರೀ ಶಕ್ತಿ ಅಡಗಿದೆ. ಅದೇ ನಮ್ಮ ಆಧ್ಯಾತ್ಮಿಕ ಗುರುವಾಗಿದೆ. ಅದನ್ನು ಸ್ಮರಿಸಿ ಈಗ ಉತ್ತರಗಳನ್ನು ಪಡೆಯಿರಿ !” ಎಂದು ಹೇಳಿದರು. ಆಗ ನಾವು ಗುರುದೇವರಲ್ಲಿಯೇ ಪ್ರಾರ್ಥನೆ ಮಾಡಿ ಅಧ್ಯಾತ್ಮದ ಉತ್ತರಗಳನ್ನು ಹುಡುಕತೊಡಗಿದೆವು ಮತ್ತು ಏನಾಶ್ಚರ್ಯ !

ನಮಗೆ ಗುರುದೇವರೇ ಮುಂದುಮುಂದಿನ ಹಂತದ ಸೂಕ್ಷ್ಮದಲ್ಲಿನ ಉತ್ತರಗಳ ಬಗ್ಗೆ ಒಳಗಿನಿಂದ ಮಾರ್ಗದರ್ಶನ ಮಾಡ ತೊಡಗಿದರು. ಅನಂತರ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಲು ನಾವು ಯಾವತ್ತೂ ಹಿಂದಿರುಗಿ ನೋಡಲೇ ಇಲ್ಲ.

ನಾವು ಇದನ್ನೆಲ್ಲ ಗುರುದೇವರಿಗೆ ಹೇಳುತ್ತಿದ್ದೆವು. ಆಗ ಅವರು ಬಹಳ ಚೆನ್ನಾಗಿದೆ ಎಂದು ಮುಗುಳ್ನಗೆ ಬೀರುತ್ತಾ, ”ದೇವರು ನಮಗಾಗಿ ಎಷ್ಟೆಲ್ಲ ಮಾಡುತ್ತಾನೆ ಅಲ್ಲವೇ !” ಎನ್ನುತ್ತಿದ್ದರು. ಆ ಸಮಯದಲ್ಲಿ ನಾವು ಅವರಿಗೆ, ”ಗುರುದೇವರೇ ನಮ್ಮ ಕಣ್ಣುಗಳೆದುರು ನೀವೇ ಇರುತ್ತಿರಿ. ನಾವು ನಿಮ್ಮನ್ನೇ ಸ್ಮರಿಸುತ್ತೇವೆ. ನಾವು ನಿಮ್ಮಲ್ಲಿ ಪ್ರಾರ್ಥಿಸಿಯೇ ಪರೀಕ್ಷಣೆ ಮಾಡುತ್ತೇವೆ ಮತ್ತು ನಮಗೆ ತಕ್ಷಣ ಸೂಕ್ಷ್ಮದಲ್ಲಿನ ಉತ್ತರಗಳು ಸಿಗುತ್ತವೆ !” ಎಂದು ಹೇಳುತ್ತಿದ್ದೆವು. ಅದಕ್ಕೆ ಅವರು ಬಹಳ ನಗುತ್ತಿದ್ದರು. ಈ ರೀತಿ ಪರಾತ್ಪರ ಗುರು ಡಾಕ್ಟರರು ನಮಗೆ ‘ಸಾಧಕರ ಜೀವನದಲ್ಲಿ ಗುರುಗಳ ಮಹತ್ವ ಎಷ್ಟು ಅಸಾಧಾರಣವಾಗಿರುತ್ತದೆ ?’, ಎಂಬುದನ್ನು  ಕಲಿಸಲು ಆರಂಭಿಸಿದರು.

೬. ‘ಗುರು, ಇದು ಒಂದು ದೇಹವಾಗಿರದೇ ಅದು ಒಂದು ತತ್ತ್ವವಾಗಿದೆ’, ಎಂಬ ಬೋಧನೆಯನ್ನು ನೀಡಿ ಸಾಧಕರನ್ನು ಈಶ್ವರೀ ತತ್ತ್ವದೊಂದಿಗೆ ಜೋಡಿಸುವ ಪರಾತ್ಪರ ಗುರು ಡಾ. ಆಠವಲೆ !

೬ ಅ. ಪರಾತ್ಪರ ಗುರು ಡಾಕ್ಟರರು ಸಾಧಕರನ್ನು ತಮ್ಮ ಸ್ಥೂಲದೇಹದಲ್ಲಿ ಸಿಲುಕಿಸದಿರುವುದು : ಕ್ರಮೇಣ ಪರಾತ್ಪರ ಗುರು ಡಾಕ್ಟರರು ನಮ್ಮನ್ನು ತಮ್ಮ ದೇಹದಲ್ಲಿ ಸಿಲುಕಿಸದೇ ಗುರುತತ್ತ್ವದ ಸೂಕ್ಷ್ಮ ಪ್ರಕಾಶದ ಕಡೆಗೆ ಕೊಂಡೊಯ್ಯಲು ಆರಂಭಿಸಿದರು. ಅವರು ‘ಗುರುವೆಂದರೆ ದೇಹವಲ್ಲ; ಅದೊಂದು ತತ್ತ್ವವಾಗಿದೆ’, ಎಂಬ ಬೋಧನೆಯನ್ನು ನಮ್ಮಲ್ಲಿ ಬಿಂಬಿಸಿದರು. ಇಲ್ಲವಾದರೆ ನಾವು ಅವರ ಸ್ಥೂಲ ದೇಹದಲ್ಲಿಯೇ ಸಿಲುಕಬಹುದಿತ್ತು. ಪರಾತ್ಪರ ಗುರು ಡಾಕ್ಟರರ ನಿರಂತರ ಬೋಧನೆಯಿಂದ ಸನಾತನದ ಯಾವುದೇ ಸಾಧಕ ಅವರ ಸ್ಥೂಲ ದೇಹದಲ್ಲಿ ಸಿಲುಕಿಕೊಂಡಿಲ್ಲ.

೬ ಆ. ಪರಾತ್ಪರ ಗುರು ಡಾಕ್ಟರರು ತಮ್ಮ ಕಲಿಕೆಯ ಮೂಲಕ ಧರ್ಮಪ್ರಸಾರದ ಕಾರ್ಯವನ್ನು ಸಂಭಾಳಿಸುವ ಸಾವಿರಾರು ಗುಣವಂತ ಮತ್ತು ನಿಷ್ಠಾವಂತ ಸಾಧಕರನ್ನು ಸಿದ್ಧಪಡಿಸುವುದು : ಇದರ ವಿರುದ್ಧ ಸದ್ಯದ ಕಲಿಯುಗದಲ್ಲಿನ ಗುರುಗಳನ್ನು ನೋಡಿ ! ಅವರು ತಮ್ಮ ಹೆಸರಿನೊಂದಿಗೆ ತಮ್ಮ ವರ್ಚಸ್ಸನ್ನು ಬೆಳೆಸಿ ಶಿಷ್ಯರನ್ನು ತಮ್ಮ ದೇಹದಲ್ಲಿ ಸಿಲುಕಿಸಿಡುತ್ತಾರೆ. ಆದುದರಿಂದ ಯಾವುದಾದರೊಂದು ಸಂಪ್ರದಾಯದ ಗುರುಗಳು ದೇಹತ್ಯಾಗ ಮಾಡಿದಾಗ ಆ ಸಂಪ್ರದಾಯದ ಪ್ರಚಾರ ಕ್ರಮೇಣ ಕಡಿಮೆ ಯಾಗುತ್ತದೆ. ಅವರ ಅನುಯಾಯಿಗಳನ್ನು ಆಧ್ಯಾತ್ಮಿಕ ಸ್ತರದಲ್ಲಿ ಸಂಭಾಳಿಸಲು ಮುಂದೆ ಯಾರೂ ಉಳಿಯುವುದಿಲ್ಲ. ಪರಾತ್ಪರ ಗುರು ಡಾಕ್ಟರರು ಮಾತ್ರ ಇಂದಿನವರೆಗೆ ಸಾವಿರಾರು ಶಿಷ್ಯರನ್ನು ಸಿದ್ಧಮಾಡಿದರು. ಅವರು ತಮ್ಮ ತಮ್ಮ ಮಟ್ಟದಲ್ಲಿ ಸಂಸ್ಥೆಯ ಆಧ್ಯಾತ್ಮಿಕ ಪ್ರಸಾರಕಾರ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಗುರುದೇವರು ತಮ್ಮ ಮುಂದಿನ ಕಾರ್ಯದ ಜವಾಬ್ದಾರಿ ನೀಡಿದುದರಿಂದ ಆ ಸಾಧಕರು ತಮ್ಮ ತಮ್ಮ ಕಾರ್ಯದಲ್ಲಿ ಗುರುದೇವರ ಸಮರ್ಥ ಉತ್ತರಾಧಿಕಾರಿಗಳೇ ಆಗಿದ್ದಾರೆ. ಇಂತಹ ಗುಣವಂತ, ನಿಷ್ಠಾವಂತ ಮತ್ತು ಚೈತನ್ಯಸಂಪನ್ನ ಸಾಧಕರನ್ನು ಸಿದ್ಧಪಡಿಸುವ ಈ ದಿವ್ಯಾತ್ಮರು ಅವತಾರಿಯೇ ಆಗಿರುತ್ತಾರಲ್ಲವೇ !

‘ಗುರುದೇವರೇ, ‘ನೀವು ಶ್ರೀವಿಷ್ಣುವಿನ ಅವತಾರ ಆಗಿರುವಿರಿ’, ಎಂದು ಮಹರ್ಷಿಗಳು ಏಕೆ ಹೇಳುತ್ತಾರೆ ?’, ಎಂಬುದು ಈಗ ನಮಗೂ ತಿಳಿಯಿತು. ನಮ್ಮ ಶ್ರದ್ಧೆ ಈ ಗುರುಚರಣಗಳಲ್ಲಿ ಇದೇ ರೀತಿ ಉಳಿಯಲಿ’, ಇದೇ ಈಶ್ವರನ ಚರಣಗಳಲ್ಲಿ ಕಳಕಳಿಯಿಂದ ಪ್ರಾರ್ಥನೆ !’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳುನಾಡು. (೬.೨.೨೦೨೨)    

(ಮುಂದುವರಿಯುವುದು)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.