ನಮ್ರತೆ, ಪ್ರೀತಿ, ಉತ್ತಮ ನೇತೃತ್ವ ಹಾಗೂ ಗುರುಕಾರ್ಯದ ತೀವ್ರ ತಳಮಳ, ಇಂತಹ ವಿವಿಧ ದೈವೀ ಗುಣಗಳಿರುವ ಸನಾತನದ ೭೫ ನೇ (ಸಮಷ್ಟಿ) ಸಂತರಾದ ಪೂ. ರಮಾನಂದ ಗೌಡ !

ಪೂ. ರಮಾನಂದ ಗೌಡ ಇವರ ೪೮ ನೇ ಹುಟ್ಟುಹಬ್ಬದ ಪ್ರಯುಕ್ತ ಸನಾತನ ಕುಟುಂಬದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !

ಜ್ಯೇಷ್ಠ ಶುಕ್ಲ ನವಮಿಯಂದು (೧೫.೬.೨೦೨೪ ರಂದು) ಸನಾತನದ ೭೫ ನೇ (ಸಮಷ್ಟಿ) ಸಂತರಾದ ಪೂ. ರಮಾನಂದ ಗೌಡ ಇವರ ೪೮ ನೇ ಹುಟ್ಟುಹಬ್ಬವಿದೆ. ಆ ನಿಮಿತ್ತ ಕೇರಳದ ಸಾಧಕರಿಗೆ ಅರಿವಾದ ಅವರ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.

೧. ಕು. ಪ್ರಣಿತಾ ಸುಖಟಣಕರ್‌ (ವಯಸ್ಸು ೪೪ ವರ್ಷ), ಕೊಚ್ಚಿ, ಕೇರಳ.

೧ ಅ. ಗುರುಕಾರ್ಯದ ಬಗ್ಗೆ ತಳಮಳ : ‘ಪೂ. ರಮಾನಂದ ಗೌಡ ಇವರಲ್ಲಿ ಗುರುಕಾರ್ಯದ ಬಗ್ಗೆ ತೀವ್ರ ತಳಮಳವಿದೆ. ಅವರು ನಮಗೆ ‘ಕೇರಳ ರಾಜ್ಯದಲ್ಲಿ ಕ್ರಮಬದ್ಧವಾಗಿ ಹೇಗೆ ಪ್ರಸಾರ ಮಾಡಬಹುದು ?’, ಎಂಬುದನ್ನು ಕಲಿಸಿದ್ದಲ್ಲದೇ, ಅವರು ನಮ್ಮಿಂದ ಅದನ್ನು ಮಾಡಿಸಿಕೊಂಡರು. ಅವರು ಈಗ ಕೂಡ ನಮಗೆ ಅಂಶಗಳನ್ನು ಕಳುಹಿಸಲು ಹೇಳುತ್ತಾರೆ ಹಾಗೂ ‘ಮುಂದಿನ ಪ್ರಯತ್ನ ಹೇಗೆ ಮಾಡಬೇಕು ?’, ಎಂಬುದನ್ನು ಸೂಚಿಸುತ್ತಾರೆ.’

೨. ಕು. ಅದಿತಿ ಸುಖಟಣಕರ್‌

೨ ಅ. ಇತರರ ವಿಚಾರ ಮಾಡುವುದು : ‘ಒಂದು ಕಾರ್ಯಕ್ರಮದ ಸಿದ್ಧತೆ ಮಾಡುವಾಗ ವಿದ್ಯುತ್‌ ಪೂರೈಕೆ ನಿಂತು ಹೋಯಿತು. ಆಗ ಸಾಧಕರು ‘ಪೂ. ರಮಾನಂದಣ್ಣನವರಿಗಾಗಿ ಒಂದು ಪಂಖಾವನ್ನು ಅಳವಡಿಸೋಣ’, ಎನ್ನುವ ವಿಚಾರ ಮಾಡಿದರು. ಆಗ ಪೂ. ಅಣ್ಣನವರು ‘ಕೇವಲ ನನಗೆ ಒಬ್ಬನಿಗೆ ಪ್ರತ್ಯೇಕ ಪಂಖದ ವ್ಯವಸ್ಥೆ ಮಾಡುವುದು ಬೇಡ’, ಎಂದು ಹೇಳಿದರು.

೨ ಆ. ನಮ್ರತೆ ಹಾಗೂ ಸೇವೆ ಮಾಡಲು ತತ್ಪರರಾಗಿರುವುದು : ಪೂ. ಅಣ್ಣಾ ಸಂತರಾಗಿದ್ದು ಮತ್ತು ಅವರಿಗೆ ಶಾರೀರಿಕ ತೊಂದರೆ ಇದ್ದರೂ ಅವರು ಚತುಷ್ಚಕ್ರ ವಾಹನವನ್ನು ನಡೆಸುತ್ತಾರೆ. ಒಮ್ಮೆ ನಾವು ಅವರ ಜೊತೆಗೆ ಹೋಗುವಾಗ ‘ವಾಹನ ನಡೆಸುವ ಸಾಧಕನಿಗೆ ಶಾರೀರಿಕ ತೊಂದರೆಯಾಗುತ್ತಿತ್ತು’, ಎಂಬುದು ಅರಿವಾದಾಗ ಪೂ. ಅಣ್ಣಾ ರಾತ್ರಿಯ ಸಮಯದಲ್ಲಿ ವಾಹನ ನಡೆಸಿದರು. ಇದರಿಂದ ‘ಸಂತರಲ್ಲಿ ಎಷ್ಟು ನಮ್ರತೆ ಇರುತ್ತದೆ ಹಾಗೂ ಅವರು ಸೇವೆ ಮಾಡಲು ತತ್ಪರರಾಗಿರುತ್ತಾರೆ’, ಎಂಬುದು ನನಗೆ ಕಲಿಯಲು ಸಿಕ್ಕಿತು.’

೩. ಸೌ. ಅವನಿ ಶ್ರೀರಾಮ ಲುಕತುಕೆ, ಕೊಚ್ಚಿ, ಕೇರಳ.

ಅ. ‘ಪೂ. ಅಣ್ಣಾರವರ ಗ್ರಂಥಗಳ ಅಭ್ಯಾಸ ತುಂಬಾ ಚೆನ್ನಾಗಿದೆ. ಅವರು ಪ್ರತಿಯೊಂದು ಅಂಶವನ್ನು ಹೇಳುವಾಗ ಗ್ರಂಥಗಳಲ್ಲಿನ ವಿವಿಧ ಉದಾಹರಣೆಗಳನ್ನು ನೀಡುತ್ತಾರೆ. ಅದರಿಂದ ಸಾಧಕರಿಗೆ ಸಾಧನೆಯ ದೃಷ್ಟಿಕೋನ ಸಿಗುತ್ತದೆ ಹಾಗೂ ಸಕಾರಾತ್ಮಕವಾಗಿರಲು ಸಾಧ್ಯವಾಗುತ್ತದೆ.’

೪. ಶ್ರೀಮತಿ ಸುಜಾತಾ ಠಕ್ಕರ್‌ (ವಯಸ್ಸು ೬೩ ವರ್ಷ), ಕೊಯಮತ್ತೂರು, ತಮಿಳುನಾಡು.

೪ ಅ. ದೇಹಭಾವ ಇಲ್ಲದಿರುವುದು : ಪೂ. ಅಣ್ಣನವರಿಗೆ ತೀವ್ರ ಬೆನ್ನುನೋವು ಇದೆ, ಆದರೂ ಅವರು ಮಾರ್ಗದರ್ಶನ ಮಾಡುವಾಗ ಅಥವಾ ಸತ್ಸಂಗದಲ್ಲಿ ತುಂಬಾ ಹೊತ್ತು ಒಂದೇ ಸಮನೆ ಕುಳಿತುಕೊಳ್ಳುತ್ತಾರೆ.

೫. ಶ್ರೀ. ಕನಕರಾಜ, ಕಣ್ಣೂರು ಕೇರಳ.

ಅ. ಪೂ. ಅಣ್ಣನವರು ಮಾರ್ಗದರ್ಶನದಲ್ಲಿ ಹೇಳಿದರು, ”ಸಾಧಕರು ಸೇವೆ ಮತ್ತು ಸಾಧನೆ ಯೋಗ್ಯರೀತಿಯಲ್ಲಿ ಆಗ ಬೇಕಾದರೆ ಕೇಳಿ ಕೇಳಿ ಮಾಡುವುದು, ಸಮರ್ಪಣಾಭಾವದಿಂದ ಮಾಡುವುದು, ಪ್ರಯತ್ನ ಮಾಡುವುದು, ನಿಯೋಜನೆ ಮಾಡುವುದು ಮತ್ತು ಸೇವೆಯ ವರದಿಯನ್ನು ಕೊಡುವುದು, ಇಂತಹ ಪ್ರಯತ್ನಗಳಾಗಬೇಕು. ಸಾಧಕರು ತಮ್ಮ ಸಾಧನೆಯಲ್ಲಿ ಅಡಚಣೆಯನ್ನುಂಟು ಮಾಡುವ ಸ್ವಭಾವದೋಷ ಮತ್ತು ಅಹಂಅನ್ನು ದೂರಗೊಳಿಸಲು ಕಠಿಣ ಪ್ರಯತ್ನ ಮಾಡಿ ಧ್ಯೇಯ ಸಾಧಿಸಲು ಪ್ರಯತ್ನಿಸಬೇಕು.”

೬. ಕು. ರಶ್ಮಿ ಪರಮೇಶ್ವರನ್‌ (ಆಧ್ಯಾತ್ಮಿಕ ಮಟ್ಟ ಶೇ. ೬೫, ವಯಸ್ಸು ೪೭ ವರ್ಷ), ಕೊಚ್ಚಿ, ಕೇರಳ. 

೬ ಅ. ಹಿತಚಿಂತಕರು ಮತ್ತು ಜಿಜ್ಞಾಸುಗಳೊಂದಿಗೆ ಆತ್ಮೀಯತೆ ಬೆಳೆಸಿ ಅವರನ್ನು ಸಾಧನೆ ಮಾಡಲು ಪ್ರೇರೇಪಿಸುವುದು : ಕೇರಳ ದಲ್ಲಿ ೨೪ ವರ್ಷಗಳಿಂದ ಪ್ರಸಾರ ಕಾರ್ಯ ನಡೆಯುತ್ತಿದೆ. ಪೂ. ರಮಾನಂದ ಗೌಡ ಇವರು ಕೇರಳ ರಾಜ್ಯಕ್ಕೆ ಬಂದ ತಕ್ಷಣ ಅವರು ಹಿತಚಿಂತಕರು ಮತ್ತು ಜಿಜ್ಞಾಸುಗಳೊಂದಿಗೆ ಆತ್ಮೀಯತೆ ಬೆಳೆಸಿದರು.

೧. ಶ್ರೀಮತಿ ಚಂದ್ರಿಕಾ ಮೆಹರ್‌ ಇವರು ಹಿತಚಿಂತಕರಾಗಿದ್ದಾರೆ. ಈ ಹಿಂದೆ ಅವರು ಸತ್ಸಂಗಕ್ಕೆ ಬರುತ್ತಿದ್ದರು. ಆ ಮೇಲೆ ಏನೋ ಅಡಚಣೆಯಿಂದಾಗಿ ಸತ್ಸಂಗಕ್ಕೆ ಬರಲು ಆಗಲಿಲ್ಲ. ಪೂ. ರಮಾನಂದಣ್ಣ ಇವರೊಂದಿಗೆ ಅವರ ಭೇಟಿಯಾದಾಗ ಅವರ ವಿಚಾರಶೈಲಿಯಲ್ಲಿ ಬದಲಾವಣೆ ಆಯಿತು. ಈಗ ಅವರು ಎಷ್ಟೇ ಅಡಚಣೆ ಇದ್ದರೂ ಕೊಚ್ಚಿಯಲ್ಲಿನ ಸೇವಾಕೇಂದ್ರಕ್ಕೆ ವಾರದಲ್ಲಿ ೩ ದಿನ ನಾಮಜಪಕ್ಕಾಗಿ ಬರುತ್ತಾರೆ. ಅವರ ಮಗಳು ಪೂ. ಅಣ್ಣನವರ ಮಾರ್ಗದರ್ಶನದಿಂದ ಪ್ರಭಾವಿತಗೊಂಡು ಸಾಧನೆ ಆರಂಭಿಸಿದ್ದಾಳೆ.

೨. ಕೇರಳದಲ್ಲಿ ಅನೇಕ ವರ್ಷಗಳಿಂದ ಇರುವ ಕೆಲವು ಸಾಧಕರು ಏನೋ ಕಾರಣದಿಂದ ಸಂಸ್ಥೆಯಿಂದ ದೂರವಾಗಿದ್ದರು. ಪೂ. ಅಣ್ಣರವರ ಮಾರ್ಗದರ್ಶನವನ್ನು ಕೇಳಿ ಆ ಸಾಧಕರಲ್ಲಿ ಉತ್ಸಾಹ ಹೆಚ್ಚಾಯಿತು. ಓರ್ವ ಸಾಧಕರು ಪೂ. ಅಣ್ಣರವರ ಜೊತೆಗೆ ಮಂಗಳೂರು ಸೇವಾಕೇಂದ್ರಕ್ಕೆ ಹೋಗಿ ಒಂದು ವಾರ ಉಳಿದು ಬಂದರು; ಈಗ ಅವರು ಜವಾಬ್ದಾರಿ ವಹಿಸಿ ಸೇವೆ ಮಾಡುತ್ತಿದ್ದಾರೆ.

೬ ಆ. ಸಾಧಕರನ್ನು ಮುಂದಿನ ಹಂತಕ್ಕೆ ಒಯ್ಯುವ ತಳಮಳ : ‘ಪೂ. ಅಣ್ಣನವರು ಮಾರ್ಗದರ್ಶನ ಮಾಡುವಾಗ ಹೇಳಿದರು, ”ಸಾಧನೆಯನ್ನು ಅರ್ಥ ಮಾಡಿಕೊಂಡು ಮಾಡಬೇಕಾಗುತ್ತದೆ. ‘ಸಾಮಾನ್ಯ ಕಾರ್ಯಕರ್ತರು, ಸಾಧಕರು, ಶಿಷ್ಯರು ಮತ್ತು ಉತ್ತಮ ಶಿಷ್ಯರು ಹೇಗಿರುತ್ತಾರೆ ?’, ಎಂಬುದನ್ನು ತಿಳಿದುಕೊಳ್ಳಬೇಕು. ನಮ್ಮ ಗುರುಗಳು ಶ್ರೇಷ್ಠರಾಗಿದ್ದಾರೆ. ಗುರುಕಾರ್ಯವನ್ನು ಜವಾಬ್ದಾರಿ ವಹಿಸಿ ಮಾಡುವುದಕ್ಕೆ ಮಹತ್ವವಿದೆ. ಸಾಧಕರು ಸೇವೆಗಾಗಿ ಹೆಚ್ಚು ಸಮಯ ನೀಡುವ ಅವಶ್ಯಕತೆಯಿದೆ.” ಅವರ ಮಾರ್ಗದರ್ಶನವನ್ನು ಕೇಳಿ ಎಲ್ಲ ಸಾಧಕರ ಪ್ರಯತ್ನ ಹೆಚ್ಚಾಯಿತು.’

೭. ಕೃತಜ್ಞತೆ ಮತ್ತು ಪ್ರಾರ್ಥನೆ

‘ಪ.ಪೂ. ಗುರುದೇವರು ಪೂ.ಅಣ್ಣನವರನ್ನು ಕೇರಳಕ್ಕೆ ಕಳುಹಿಸಿ ನಮ್ಮೆಲ್ಲ ಸಾಧಕರ ಮೇಲೆ ತುಂಬಾ ಕೃಪೆ ಮಾಡಿದರು. ಪೂ. ಅಣ್ಣನವರಿಂದ ನಮ್ಮೆಲ್ಲರಲ್ಲಿ ಸಾಧನೆ ಮಾಡಲು ಉತ್ಸಾಹ ಹೆಚ್ಚಾಯಿತು. ನಾವೆಲ್ಲ ಸಾಧಕರು ಗುರುದೇವರು ಮತ್ತು ಪೂ. ಅಣ್ಣ ಇವರ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ. ‘ನಮ್ಮೆಲ್ಲರಿಂದ ಸಾಧನೆಯ ಪ್ರಯತ್ನ ಹೆಚ್ಚಾಗಿ ಎಲ್ಲರಿಗೂ ಆನಂದಪ್ರಾಪ್ತಿಯಾಗಲಿ’, ಎಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.’

– ಕೇರಳ ರಾಜ್ಯದ ಎಲ್ಲ ಸಾಧಕರು (ಲೇಖನದಲ್ಲಿನ ಎಲ್ಲ ಅಂಶಗಳ ದಿನಾಂಕ : ೩.೪.೨೦೨೪)