ಮುಜಫ್ಫರ್‌ಪುರ (ಬಿಹಾರ) – ವೀಸಾ ಇಲ್ಲದೆ ನೇಪಾಳದ ಮೂಲಕ ಭಾರತಕ್ಕೆ ನುಗ್ಗಿದ ಚೀನಾದ ಪ್ರಜೆ ಲಿ ಜಿಯಾಕಿಯನ್ನು ಬಿಹಾರದ ಮುಜಫ್ಫರ್‌ಪುರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಆತನ ವಿರುದ್ಧ ಭಾರತಕ್ಕೆ ಅಕ್ರಮ ಪ್ರವೇಶ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನಿಂದ ಚೈನೀಸ್ ಪಾಸ್‌ಪೋರ್ಟ್, ಮೊಬೈಲ್, ಚೈನೀಸ್ ಕರೆನ್ಸಿ ನೋಟುಗಳು, ಚೀನಾ ನಕ್ಷೆ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಜೈಲಿಗೆ ಕಳುಹಿಸಲಾಯಿತು. ವಿದೇಶಿ ಪ್ರಜೆಯ ಬಂಧನದ ನಂತರ, ಗುಪ್ತಚರ ಸಂಸ್ಥೆಗಳು ಸೇರಿದಂತೆ ಹಲವು ತನಿಖಾ ಸಂಸ್ಥೆಗಳ ಅಧಿಕಾರಿಗಳು ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Chinese National Arrested: A Chinese national who entered #India was arrested !
After Pakistani and Bangladeshis, if Chinese citizens are also infiltrating into India, it is serious in terms of national security.#BSF #Chinese pic.twitter.com/7xNiKSEsuk
— Sanatan Prabhat (@SanatanPrabhat) June 8, 2024
ಸಂಪಾದಕೀಯ ನಿಲುವುಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿಯನಂತರ, ಈಗ ಚೀನಾದ ಪ್ರಜೆಗಳೂ ಭಾರತದೊಳಗೆ ನುಸುಳುತ್ತಿದ್ದರೆ, ಅದು ಭದ್ರತೆಯ ವಿಷಯದಲ್ಲಿ ಗಂಭೀರವಾಗಿದೆ, ಗಮನದಲ್ಲಿಟ್ಟಕೊಳ್ಳಿ ! |