Pakistan Gets UN Security Council Seat: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯತ್ವ ಪಡೆದ ಪಾಕಿಸ್ತಾನ !

ನೆತ್ತಿಗೇರಿದ ಕಾಶ್ಮೀರದ ಸಿಟ್ಟು !

ಇಸ್ಲಾಮಾಬಾದ್ (ಪಾಕಿಸ್ತಾನ) – ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯರಾಗಿ ಪಾಕಿಸ್ತಾನವನ್ನು ಆಯ್ಕೆ ಮಾಡಲಾಗಿದೆ. ಅದು 2 ವರ್ಷಗಳ ಕಾಲ ಭದ್ರತಾ ಮಂಡಳಿಯ ಸದಸ್ಯರಾಗಿರಲಿದೆ. ಅದರ ಅಧಿಕಾರಾವಧಿಯು ಜನವರಿ 1, 2025 ರಿಂದ ಪ್ರಾರಂಭವಾಗುವುದು. ಈ ಹಿಂದೆ ಅವರು 7 ಬಾರಿ ಹಂಗಾಮಿ ಸದಸ್ಯ ಆಗಿತ್ತು. ಭದ್ರತಾ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ತಕ್ಷಣ ಪಾಕಿಸ್ತಾನ ಮತ್ತೊಮ್ಮೆ ಕಾಶ್ಮೀರ ಸಮಸ್ಯೆಯನ್ನು ಎತ್ತಿ ಹಿಡಿದಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ಮುನೀರ್ ಅಕ್ರಮ್ ಅವರು ತಮ್ಮ ಆದ್ಯತೆಗಳ ಪಟ್ಟಿಯನ್ನು ಓದಿದರು. ಅದರಲ್ಲಿ ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಪ್ರೋತ್ಸಾ ಹಿಸುವುದು, ಪ್ಯಾಲೆಸ್ಟೈನ್ ಮತ್ತು ಕಾಶ್ಮೀರದ ಜನರಿಗೆ ಸ್ವಯಂ-ನಿರ್ಣಯದ ತತ್ವವನ್ನು ಎತ್ತಿಹಿಡಿಯುವುದು, ಅಫ್ಘಾನಿಸ್ತಾನದಲ್ಲಿ ಸಾಮಾನ್ಯತೆಗೆ ಚಾಲನೆ ನೀಡುವುದು, ಆಫ್ರಿಕಾದಲ್ಲಿ ಭದ್ರತೆಯನ್ನು ಉತ್ತೇಜಿಸುವುದು ಇತ್ಯಾದಿ ಸಮಾವೇಶ ಗೊಂಡಿದೆ.

ಸಂಪಾದಕೀಯ ನಿಲುವು

ಕಾಶ್ಮೀರದ ಮೇಲಿನ ಸಿಟ್ಟನ್ನು ಕೆರಳಿಸುವುದಕ್ಕಿಂತ ಪಾಕಿಸ್ತಾನ ಅಖಂಡವಾಗಿ ಉಳಿಯುತ್ತದೆಯೇ ಎಂಬುದರ ಕುರಿತು ಹೆಚ್ಚು ಯೋಚಿಸುವುದು ಅಗತ್ಯವಾಗಿದೆ !