Pakistan Debt Become Double : ದಿವಾಳಿಯಾಗುತ್ತಿರುವ ಪಾಕಿಸ್ತಾನದ ವಿದೇಶಿ ಸಾಲದಲ್ಲಿ ದ್ವಿಗುಣ !

ಪಾಕಿಸ್ತಾನದ ಪ್ರಧಾನಿ ಶಹಬಾಜ ಷರೀಫ ಮತ್ತು ಚೀನಾ ರಾಷ್ಟ್ರಾಧ್ಯಕ್ಷ ಕ್ಸಿ ಜಿನ್‌ಪಿಂಗ್

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಪ್ರಧಾನಿ ಶಹಬಾಜ ಷರೀಫ 5 ದಿನಗಳ ಚೀನಾ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಅವರು ಚೀನಾ ರಾಷ್ಟ್ರಾಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಪಾಕಿಸ್ತಾನವು ಚೀನಾದೊಂದಿಗಿನ ಸಂಬಂಧವನ್ನು ಮರುಪರಿಶೀಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪ್ರವಾಸವಾಗಿದೆ. ‘ಚೀನಾ-ಪಾಕಿಸ್ತಾನ ಆರ್ಥಿಕ ಹೆದ್ದಾರಿ’ಯಿಂದ ಪಾಕಿಸ್ತಾನ ಭರವಸೆ ಹೊಂದಿದೆ; ಆದರೆ ಕಳೆದ ಒಂದು ದಶಕದಲ್ಲಿ ಪಾಕಿಸ್ತಾನದ ಸಾಲ ದ್ವಿಗುಣಗೊಂಡಿದೆ. ಪಾಕಿಸ್ತಾನಕ್ಕೆ ತನ್ನ ಕೆಟ್ಟ ಆರ್ಥಿಕತೆಯಿಂದ ಹೊರಬರಲು ಪ್ರಯತ್ನಿಸುತ್ತಿದೆ. ಆದ್ದರಿಂದ ಎಲ್ಲರಿಗೂ ಈ ಪ್ರವಾಸದ ಮೇಲೆ ಗಮನವಿದೆ.

1. ಶಹಬಾಜ ಷರೀಫ ಚೀನಾದ ಕ್ಸಿಯಾನ್ ಮತ್ತು ಶೆನ್‌ಜೆನ್ ನಗರಗಳಿಗೆ ಭೇಟಿ ನೀಡಲಿದ್ದಾರೆ. ಈ ನಗರಗಳು ಚೀನಾದ ಅಭಿವೃದ್ಧಿಯ ಸಂಕೇತಗಳೆಂದು ಗುರುತಿಸಲಾಗಿದೆ. ಶೆನ್‌ಜೆನ್ ಅನ್ನು ಅಂದಿನ ನಾಯಕ ಡೆಂಗ್ ಕ್ಸಿಯೋಪಿಂಗ್ ಅವರು ದೇಶದ ಮೊದಲ ವಿಶೇಷ ಆರ್ಥಿಕ ವಲಯವಾಗಿ ಆಯ್ಕೆ ಮಾಡಿದ್ಧರು.

2. ಆರ್ಥಿಕ ಹೆದ್ದಾರಿಯಿಂದಾಗಿ ಪಾಕಿಸ್ತಾನ ಅಭಿವೃದ್ಧಿಯಾಗಲಿಲ್ಲ; ಅವರ ಸಾಲ ಮಾತ್ರ ನಿರಂತರವಾಗಿ ಹೆಚ್ಚುತ್ತಿದೆ. 2013ರಲ್ಲಿ ನವಾಜ್ ಷರೀಫ್ ಅಧಿಕಾರದಲ್ಲಿದ್ದಾಗ ಪಾಕಿಸ್ತಾನದ ವಿದೇಶಿ ಸಾಲ 4 ಲಕ್ಷದ 91 ಸಾವಿರ ಕೋಟಿ ರೂಪಾಯಿಗಳಷ್ಟಿತ್ತು. ಇಂದು ಅದು ಒಂದು ದಶಕಕ್ಕೂ ಹೆಚ್ಚು ಕಾಲದ ನಂತರ ಪಾಕಿಸ್ತಾನದ ಸಾಲ 10 ಲಕ್ಷದ 33 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿದೆ. ಈ ಪೈಕಿ ಚೀನಾ ದೇಶವೊಂದೇ 2 ಲಕ್ಷದ 50 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲವನ್ನು ನೀಡಿದೆ.

3. ಪಾಕಿಸ್ತಾನದ ನಿರಂತರವಾಗಿ ಕಡಿಮೆಯಾಗುತ್ತಿರುವ ಗಂಗಾಜಲದ ಮೇಲಿನ ಸಾಲ ಭಾರದಿಂದ ಆಮದು-ಅವಲಂಬಿತ ದೇಶದ ಎದುರಿಗೆ ಸಮಸ್ಯೆಗಳನ್ನು ಸೃಷ್ಟಿಸಿದೆ. ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ ಬಳಿ ಕೇವಲ 75 ಸಾವಿರ ಕೋಟಿ ರೂಪಾಯಿಗಳು ಇದೆ ಅದು 2 ತಿಂಗಳ ಆಮದು ಮಾಡಿಕೊಳ್ಳಲು ಸಾಕಾಗುತ್ತದೆ.