US Media On Modi : ‘ಮೋದಿಗೆ ರಾಜಕೀಯ ಆಘಾತ !’ – ಅಮೇರಿಕಾದ ವೃತ್ತ ಪತ್ರಿಕೆಗಳು

ಲೋಕಸಭೆ ಚುನಾವಣೆ 2024

ವಾಷಿಂಗ್ಟನ್ (ಅಮೇರಿಕಾ) – ಭಾರತದಲ್ಲಿರುವ ಲೋಕಸಭೆಯ ಚುನಾವಣೆಯ ತೀರ್ಪು ಬಂದಿರುವ ಸುದ್ದಿಯನ್ನು ಅಮೇರಿಕಾದ ಸುದ್ದಿ ಪತ್ರಿಕೆಗಳು ಪ್ರಸಾರ ಮಾಡಿವೆ. ‘ವಾಷಿಂಗ್ಟನ್ ಪೋಸ್ಟ್’, ‘ಜನಪ್ರಿಯ ಪ್ರಧಾನಿ ತಮ್ಮ 23 ವರ್ಷಗಳ ಸುದೀರ್ಘ ರಾಜಕೀಯ ಕಾಲಾವಧಿಯಲ್ಲಿ ರಾಜ್ಯ ಅಥವಾ ಕೇಂದ್ರ ಚುನಾವಣೆಗಳಲ್ಲಿ ಬಹುಮತ ಗಳಿಸಲು ವಿಫಲರಾಗಲಿಲ್ಲ. ಕಳೆದ ಚುನಾವಣೆಯಲ್ಲಿ ಅವರಿಗೆ ಸುಸ್ಪಷ್ಟ ಗೆಲುವು ಸಿಕ್ಕಿತ್ತು; ಆದರೆ ಈಗ ಮಾತ್ರ ಮೋದಿಗೆ ರಾಜಕೀಯ ಆಘಾತವಾಗಿದೆಯೆಂದು ಕಂಡು ಬರುತ್ತಿದೆ. ಆರಂಭಿಕ ಮತದಾನದ ಅಂಕಿಅಂಶಗಳು ಅವರ ಹಿಂದೂ ರಾಷ್ಟ್ರೀಯವಾದಿ ಪಕ್ಷಕ್ಕೆ ಕಡಿಮೆ ಬೆಂಬಲವನ್ನು ತೋರಿಸುತ್ತದೆ’ ಎಂದು ಬರೆದಿದೆ. (ಭಾಜಪದ ಹಿಂದೂ ರಾಷ್ಟ್ರವಾದದ ವಿಷಯದಲ್ಲಿ ವಿದೇಶಿ ಪ್ರಸಾರ ಮಾಧ್ಯಮಗಳಿಗೆ ಆಕ್ಷೇಪವೇಕೆ ? ಅಮೇರಿಕಾವು ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಏನಾದರೂ ಕೃತಿಯನ್ನು ಮಾಡಿದರೆ, ಅದು ರಾಷ್ಟ್ರೀಯತೆ ಮತ್ತು ಇತರ ದೇಶಗಳು ಮಾಡಿದರೆ, ಅದು ಏಕಸ್ವಾಮ್ಯ ಎಂದು ಅಮೇರಿಕಾದ ಪ್ರಸಾರ ಮಾಧ್ಯಮಗಳಿಗೆ ಅನಿಸುತ್ತದೆ. ಇದರಿಂದ ಅವರ ಹಿಂದೂದ್ವೇಷ ಕಂಡು ಬರುತ್ತದೆ ! – ಸಂಪಾದಕರು)

1. ನ್ಯೂಯಾರ್ಕ್ ಟೈಮ್ಸ್, ನರೇಂದ್ರ ಮೋದಿ ಸುತ್ತಲಿನ ಸೋಲಿನ ಆಕಾಶ ಕುಸಿದಿದೆ. ಭಾಜಪವು ತನ್ನ ಅಚ್ಚುಮೆಚ್ಚಿನ ಸ್ಥಳ ಅಯೋಧ್ಯೆಯನ್ನು ಕಳೆದುಕೊಂಡಿದೆ. ಉತ್ತರ ಪ್ರದೇಶದಲ್ಲಿ ಭಾಜಪಾಗೆ ಆಘಾತವಾಗಿದೆ ಎಂದು ಬರೆದಿದೆ.

2. ಫೈನಾನ್ಷಿಯಲ್ ಟೈಮ್ಸ್, ಈ ತೀರ್ಪಿನಿಂದ ಭಾರತೀಯ ರಾಜಕೀಯ ಮತ್ತೆ ‘ಮೈತ್ರಿ ರಾಜಕೀಯ’ ಆಡಲಿದೆ. ಅನೇಕ ಭಾರತೀಯರಿಗೆ ಈ ಚುನಾವಣೆಯಲ್ಲಿ ಮೋದಿಗೆ ಸ್ಪಷ್ಟವಾದ ಜಯವನ್ನು ನಿರೀಕ್ಷಿಸಿದ್ದರು. ಮೋದಿಯವರ ಆಡಳಿತಾವಧಿಯ ದಶಕದಲ್ಲಿ, ಒಮ್ಮತದಿಂದ ನೋಡಲಾಗುತ್ತಿತ್ತು ಎಂದು ಹೇಳಿದೆ.

3. ಅಲ್ ಜಜೀರಾ ಸುದ್ದಿ ವಾಹಿನಿಯು ತನ್ನ ಸುದ್ದಿಯಲ್ಲಿ, ಸಂಸತ್ತಿನಲ್ಲಿ ಸವಾಲುಗಳು ಇರಬಹುದು. ಹೀಗೆ ಕೆಲವು ಮಸೂದೆಗಳು ಸಮ್ಮತಿಗೆ ಬರಲಿವೆ ಮತ್ತು ಭಾಜಪಕ್ಕೆ ಖಂಡಿತವಾಗಿಯೂ ಅವುಗಳಿಗೆ ಬಹಳ ಹೊಂದಾಣಿಕೆಗಳನ್ನು ಮಾಡಬೇಕಾಗುತ್ತದೆ. ಈ ಹಿಂದೆ ಅವರಿಗೆ ಭಾರಿ ಬಹುಮತ ಬಂದಾಗ ಅವರು ಹೊಂದಾಣಿಕೆ ಮಾಡಿಕೊಳ್ಳಲಿಲ್ಲವೆಂದು ಹೇಳಿದೆ.

ಅಯೋಧ್ಯೆಯ ಸೋಲು ಹಲವರಿಗೆ ಆಘಾತ ! – ಪಾಕಿಸ್ತಾನಿ ದಿನಪತ್ರಿಕೆ ‘ಡಾನ್’

ಪಾಕಿಸ್ತಾನದ ಸುದ್ದಿಪತ್ರಿಕೆ ‘ಡಾನ್’ ವರದಿ ಮಾಡಿದ್ದು, ಭಾರತದ ಮತ ಎಣಿಕೆ ಮೋದಿ ಮೈತ್ರಿಕೂಟಕ್ಕೆ ಆಶ್ಚರ್ಯಕರವಾಗಿ ಅಲ್ಪ ಬಹುಮತದಿಂದ ಗೆದ್ದಿರುವುದು ಎಂದು ಕಂಡು ಬಂದಿದೆ. ಉಲ್ಲೇಖನೀಯವೆಂದರೆ, ಉತ್ತರ ಪ್ರದೇಶದ ಅಯೋಧ್ಯೆ ಸ್ಥಾನವನ್ನು ಭಾಜಪ ಸೋತಿದೆ. ಈ ಮತದಾನ ಕ್ಷೇತ್ರದ ಭಾಜಪದ ಪ್ರತಿಷ್ಠಿತ ಯೋಜನೆ ಶ್ರೀರಾಮಮಂದಿರವಾಗಿದೆ. ಇದು ಅನೇಕರಿಗೆ ಆಘಾತವಾಗಿದೆ. ಅಯೋಧ್ಯೆ ಸೋಲನ್ನು ಭಾಜಪವು ಒಪ್ಪಿಕೊಂಡಿದೆ. ರಾಹುಲ್ ಗಾಂಧಿ, ‘ಮತದಾರರೇ ಭಾಜಪಕ್ಕೆ ಶಿಕ್ಷೆ ನೀಡಿದೆ’ ಎನ್ನುತ್ತಾರೆ.