ತಿರುವನಂತಪುರಂ (ಕೇರಳ) – ಕೇರಳದಲ್ಲಿ ೩ ದಿನಗಳ ಹಿಂದೆಯೇ ಮುಂಗಾರು ಮಳೆ ಆಗಮಿಸಿದೆ. ಇಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದಲ್ಲಿ ಅನೇಕ ಕಡೆ ಭೂಕುಸಿತ ಸಂಭವಿಸಿದೆ. ಅನೇಕ ಸ್ಥಳಗಳಲ್ಲಿ ಮರಗಳು ಬುಡಸಮೇತ ಧರೆಗುರುಳಿದ್ದು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ತ್ರಿಶೂರ್ ಜಿಲ್ಲೆಯ ತಗ್ಗು ಪ್ರದೇಶದಲ್ಲಿ ನೀರು ತುಂಬಿದ್ದರಿಂದ ನಾಗರಿಕರಿಗೆ ವಾಹನದ ಸಮಸ್ಯೆ ಎದುರಿಸಬೇಕಾಯಿತು.
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ; 3.5 ಲಕ್ಷ ಜನರ ಮೇಲೆ ಪರಿಣಾಮ
ಅಸ್ಸಾಂನಲ್ಲಿ ಮುಂಗಾರು ಮಳೆಯಿಂದಾಗಿ ೧೧ ಜಿಲ್ಲೆಗಳಲ್ಲಿ ಮೂರೂವರೆ ಲಕ್ಷ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸುಮಾರು ೩೦ ಸಾವಿರ ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಚಾರ್ ಜಿಲ್ಲೆಯಲ್ಲಿ ಎಲ್ಲಕ್ಕಿಂತ ಅಧಿಕ ೧ ಲಕ್ಷದ ೧೯ ಸಾವಿರದ ೯೯೭ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ‘ರೆಮಲ್‘ ಚಂಡಮಾರುತದ ನಂತರ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಅನೇಕ ಭಾಗಗಳಲ್ಲಿ ರಸ್ತೆ ಮತ್ತು ರೈಲು ಸೇವೆಗಳು ಅಸ್ತವ್ಯಸ್ತವಾಗಿವೆ.