ರಕ್ಷಣಾ ಸಚಿವಾಲಯದ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಗಳಿಗೆ ಎಚ್ಚರಿಕೆ
ನವ ದೆಹಲಿ – ರಕ್ಷಣಾ ಸಚಿವಾಲಯವು ಶಸ್ತ್ರಾಸ್ತ್ರಗಳನ್ನು ತಯಾರಿಸುವ ಖಾಸಗಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ ಮತ್ತು ಅವರ ಶಸ್ತ್ರಾಸ್ತ್ರಗಳು ಎಲ್ಲಿ ತಲುಪುತ್ತಿವೆ ? ಎಂಬುದರ ಬಗ್ಗೆ ತೀವ್ರ ನಿಗಾ ಇರಿಸುವಂತೆ ಹೇಳಿದೆ.
1. ‘ಯುರೇಷಿಯನ್ ಟೈಮ್ಸ್’ ಈ ಸುದ್ದಿಯನುಸಾರ ಈ ವರ್ಷದ ಆರಂಭದಲ್ಲಿ ಪ್ರಸಾರ ಮಾಧ್ಯಮಗಳು ‘ಭಾರತದಲ್ಲಿ ತಯಾರಿಸಲಾದ 155 ಎಂ.ಎಂ. ‘ಆರ್ಟಿಲರಿ ಶೆಲ್ ಈ ಶಸ್ತ್ರ ಉಕ್ರೇನ್‌ನಲ್ಲಿ ಬಳಕೆಯಾಗುತ್ತಿದೆ’ ಎಂದು ದಾವೆ ಮಾಡಿತ್ತು. ಇದಕ್ಕೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ ಇವರು ಸುದ್ಧಿಗೋಷ್ಠಿಯಲ್ಲಿ `ಭಾರತದಿಂದ ಉಕ್ರೇನ್‌ಗೆ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗಿಲ್ಲ’, ಎಂದು ಹೇಳಿದ್ದರು. ಈ ಘಟನೆಯ ನಂತರ ಈಗ ರಕ್ಷಣಾ ಸಚಿವಾಲಯವು ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಗಳಿಗೆ ಈ ಮೇಲಿನಂತೆ ಎಚ್ಚರಿಕೆ ನೀಡಿದೆ. ಸಚಿವಾಲಯವು ಈ ಸಂಸ್ಥೆಗಳಿಗೆ `ಅಂತ್ಯ ಬಳಕೆದಾರ ಪ್ರಮಾಣಪತ್ರ’ದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ತಿಳಿಸಿದೆ. ಈ ಮೂಲಕ ಭಾರತ ರಫ್ತು ಮಾಡುವ ಶಸ್ತ್ರಾಸ್ತ್ರಗಳು ಕೊನೆಗೆ ಎಲ್ಲಿಗೆ ತಲುಪುತ್ತದೆ ? ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು. ಪ್ರಸ್ತುತ ಉಕ್ರೇನ್, ಟರ್ಕಿ, ಚೀನಾ ಮತ್ತು ಪಾಕಿಸ್ತಾನಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಭಾರತೀಯ ಸಂಸ್ಥೆಗಳಿಗೆ ನಿರ್ಬಂಧಗಳಿವೆ.
2. ಕೆಲವು ದಿನಗಳ ಹಿಂದೆ, ಸ್ಪೇನ್, ಭಾರತದಿಂದ ಇಸ್ರೇಲ್‌ಗೆ ಸ್ಫೋಟಕಗಳನ್ನು ಸಾಗಿಸುವ ಹಡಗನ್ನು ತನ್ನ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಿಕೊಂಡಿತ್ತು. ಡೆನ್ಮಾರ್ಕ್‌ನ ರಾಷ್ಟ್ರೀಯ ಧ್ವಜವನ್ನು ಹಚ್ಚಿದ್ದ ಈ ಹಡಗು ಡೆನ್ಮಾರ್ಕನಿಂದ ಇಸ್ರೇಲ್‌ನ ಹೈಫಾ ಬಂದರಿಗೆ ಹೋಗುತ್ತಿತ್ತು. ಅದರಲ್ಲಿ ಶಸ್ತ್ರಾಸ್ತ್ರಗಳಿದ್ದವು; ಆದರೆ ಈ ಶಸ್ತ್ರಾಸ್ತ್ರಗಳು ಭಾರತದ್ದು ಅಥವಾ ಬೇರೆ ಯಾವ ದೇಶದ್ದು ಎಂದು ಹೇಳಲಾಗಿಲ್ಲ. ಈ ವಿಷಯದಲ್ಲಿ ವಿದೇಶಾಂಗ ಸಚಿವಾಲಯ ವಿಚಾರಣೆ ನಡೆಸಿದಾಗ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.
3. ಕಳೆದ ಎರಡು ವರ್ಷಗಳಲ್ಲಿ ಮ್ಯಾನ್ಮಾರ್‌ನ ಸೇನೆಗೆ ಭಾರತೀಯ ಸಂಸ್ಥೆಗಳಿಂದ 420 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಸಂಬಂಧಿತ ವಸ್ತುಗಳನ್ನು ಪಡೆದಿದೆ ಎಂದು ವಿಶ್ವಸಂಸ್ಥೆಯ ಹೇಳಿತ್ತು. ಸೇನೆಯು ನಾಗರಿಕರ ವಿರುದ್ಧ ಹಿಂಸಾಚಾರ ನಡೆಸಲು ಈ ಶಸ್ತ್ರಾಸ್ತ್ರಗಳನ್ನು ಬಳಸಿದ ಬಗ್ಗೆ ಪುರಾವೆಗಳಿವೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.
“Where are your weapons ending up? Keep a watch!”
The Ministry of Defence warns arms manufacturing establishments
Picture Courtesy – @THEEURASIATIMES #UkraineWar#Myanmar pic.twitter.com/3i5GrUAiR2
— Sanatan Prabhat (@SanatanPrabhat) June 2, 2024