೧. ಮಾಂಸ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸುವುದು
‘ಹಲಾಲ್’ ಮಾಂಸದ ಬಗ್ಗೆ ಪ್ರಾಣಿಯನ್ನು ವಧಿಸುವವನು ಮುಸಲ್ಮಾನನಾಗಿರಬೇಕೆಂದು ಮೊದಲನೇ ಷರತ್ತಾಗಿದೆ.ಮುಸಲ್ಮಾನೇತರ ವ್ಯಕ್ತಿಯಿಂದಾದ ಪ್ರಾಣಿವಧೆಯನ್ನು ‘ಹಲಾಲ್’ ಎಂದು ಪರಿಗಣಿಸಲಾಗುವುದಿಲ್ಲ. ಹಾಗೆಯೇ ಮುಸಲ್ಮಾನೇತರ ವ್ಯಕ್ತಿಯು ಒಂದು ವೇಳೆ ‘ಬಿಸ್ಮಿಲ್ಲಾಹ’ ಎಂದು ಉಚ್ಚರಿಸಿ ಪ್ರಾಣಿಯನ್ನು ವಧಿಸಿದರೂ ಅದನ್ನು ‘ಹಲಾಲ್’ ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ‘ಹಲಾಲ್’ ಮಾಂಸದ ಬೇಡಿಕೆ ಹೆಚ್ಚಾದರೆ, ತಾನಾಗಿಯೇ ಈ ಮಾಂಸ ಮಾರಾಟದ ವ್ಯಾಪಾರವು ಮುಸಲ್ಮಾನರ ನಿಯಂತ್ರಣದಲ್ಲಿದ್ದು ಅವರಿಗೆ ಆರ್ಥಿಕ ಲಾಭವನ್ನು ಮಾಡಿಕೊಡುತ್ತದೆ. ೨೦೧೯ ರ ಅಂಕಿ ಅಂಶಗಳಿಗನುಸಾರ ಭಾರತದಲ್ಲಿನ ಈ ಮಾಂಸದ ವ್ಯಾಪಾರವು ಕಡಿಮೆ ಎಂದರೂ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳಷ್ಟು ಪ್ರಚಂಡ ಪ್ರಮಾಣದ ವ್ಯಾಪಾರವಾಗಿದೆ. ಹೆಚ್ಚುತ್ತಿರುವ ಮಾಂಸದ ಬೇಡಿಕೆಯಿಂದ ಇದು ೨೦೨೪ ರಲ್ಲಿ ೪,೫೦,೦೦೦ ಕೋಟಿ ರೂಪಾಯಿಗೆ ತಲುಪುವ ಅಂದಾಜಿದೆ.
೨. ‘ಹಲಾಲ್’ ಚಳುವಳಿಯ ಮೂಲಕ ಜಾಗತಿಕ ಆರ್ಥಿಕವ್ಯವಸ್ಥೆಯ ಮೇಲೆ ಆಡಳಿತ ನಡೆಸುವುದು
‘ಮುಸಲ್ಮಾನರು ಜಾಗತಿಕ ಆರ್ಥಿಕವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ನೇತೃತ್ವ ವಹಿಸುವ ಶಕ್ತಿಯು ‘ಹಲಾಲ್ ಚಳವಳಿ’ಯಲ್ಲಿದೆ. ಅದಕ್ಕಾಗಿ ಪಾಶ್ಚಿಮಾತ್ಯರ ಆರ್ಥಿಕ ಸಮೃದ್ಧಿಯ ಸಾಧನವೆಂದು ಬಳಸಲ್ಪಡುವ ತಂತ್ರಜ್ಞಾನವನ್ನು ಬಿಟ್ಟು ಮುಸಲ್ಮಾನ ಸಮಾಜವು ಆಹಾರ ಉತ್ಪಾದನೆಗಳ ಶಕ್ತಿಶಾಲಿ ಆಧಾರವನ್ನು ವಿಕಸಿತಗೊಳಿಸುವ ಕಡೆಗೆ ಗಮನ ಹರಿಸಿದೆ; ಏಕೆಂದರೆ ಆಹಾರವು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಆವಶ್ಯಕತೆಯಾಗಿದೆ. ಮಲೇಷ್ಯಾ, ತುರ್ಕಸ್ತಾನ ಮತ್ತು ಇರಾನ್ ದೇಶಗಳು ಇಂದು ‘ಹಲಾಲ್ ಆರ್ಥಿಕವ್ಯವಸ್ಥೆ’ಯ ಕೇಂದ್ರಗಳಾಗಿ ಜಾಗತಿಕ ಸ್ತರದಲ್ಲಿ ಮುಂದೆ ಬರುತ್ತಿವೆ. ಜಾಗತಿಕ ಸ್ತರದಲ್ಲಿ ಇಸ್ಲಾಮಿ ದೇಶಗಳು ‘ಹಲಾಲ್ ಆರ್ಥಿಕವ್ಯವಸ್ಥೆ’ಯ ಮಹತ್ವ ತಿಳಿದುಕೊಳ್ಳುವುದು ಆವಶ್ಯಕವಾಗಿದೆ.’ – ಡಾ. ಮುಸ್ತಫಾ ಸೆರಿಕ್, ಗ್ರ್ಯಾಂಡ್ ಮುಫ್ತಿ, ಬೊಸ್ನಿಯಾ. (೧೨.೧೨.೨೦೧೦ ರಂದು ಪಾಕಿಸ್ತಾನದ ಕರಾಚಿಯಲ್ಲಿ ಮಾಡಿದ ಭಾಷಣ)
೩. ಇಸ್ಲಾಮಿ ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡಲು ‘ಹಲಾಲ್ ಪ್ರಮಾಣಪತ್ರ’ ಕಡ್ಡಾಯಗೊಳಿಸುವ ‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋ-ಆಪರೇಶನ್’ನ ನಿರ್ಧಾರ !
‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋ-ಆಪರೇಶನ್ (ಔಈಅ)’ ಇದು ಜಾಗತಿಕ ಸ್ತರದಲ್ಲಿ ಇಸ್ಲಾಮಿ ದೇಶಗಳ ಸಂಘಟನೆಯಾದ ‘ಉಮ್ಮಾಹ’ ಅಂದರೆ ‘ದೇಶ-ಗಡಿವಿರಹಿತ (ಇಸ್ಲಾಮಿ) ಧರ್ಮ ಬಂಧುತ್ವ’ದ ಪರಿಕಲ್ಪನೆಯನ್ನು ಅಂಗೀಕರಿಸಿ ನಡೆಯುತ್ತದೆ. ಹಲಾಲ್ ಆರ್ಥಿಕವ್ಯವಸ್ಥೆಗೆ ಚಾಲನೆ ನೀಡಲು ಅದು ಇಸ್ಲಾಮಿ ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುವುದಿದ್ದಲ್ಲಿ ಮೊದಲು ಆ ಉತ್ಪನ್ನಗಳನ್ನು ‘ಹಲಾಲ್’ ಪ್ರಮಾಣೀಕೃತಗೊಳಿಸುವ ಅಧಿಕೃತ ಇಸ್ಲಾಮಿಕ್ ಸಂಘಟನೆ ಯಿಂದ ‘ಹಲಾಲ್ ಪ್ರಮಾಣಪತ್ರ’ ಪಡೆಯುವುದನ್ನು ಕಡ್ಡಾಯ ಗೊಳಿಸಿತು. ಈ ನಿಬಂಧನೆಯಿಂದ ಇಸ್ಲಾಮಿ ದೇಶಗಳಿಗೆ ರಫ್ತು ಮಾಡುವ ಜಗತ್ತಿನೆಲ್ಲೆಡೆಯ ಉದ್ಯಮಿಗಳಿಗೆ ‘ಹಲಾಲ್ ಪ್ರಮಾಣ ಪತ್ರ’ ಪಡೆಯಲು ಇಸ್ಲಾಮಿ ಸಂಸ್ಥೆಗಳಿಗೆ ಶುಲ್ಕವನ್ನು ಕೊಡಲೇ ಬೇಕಾಗುತ್ತದೆ.(ಆಧಾರ : ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ಗ್ರಂಥ ‘ಹಲಾಲ್ ಜಿಹಾದ್’)
ಹಲಾಲ್ ಮಾಂಸ ಎಂದರೇನು ?
ಇಸ್ಲಾಂನಲ್ಲಿ ‘ಹಲಾಲ್’ ಎಂಬುದು ಮುಖ್ಯವಾಗಿ ಪ್ರಾಣಿವಧೆಯನ್ನು ಮಾಡಿ ಮಾಂಸ ಪಡೆಯುವ ಸಂದರ್ಭದಲ್ಲಿರುವುದರಿಂದ, ಅದರ ನಿಯಮಗಳು ಮುಂದಿನಂತಿದೆ
ಅ. ‘ಪಶುವಿನ ಹತ್ಯೆ ಮಾಡುವವನು ಮುಸಲ್ಮಾನನಿರಬೇಕು.
ಆ. ಪಶುವು ಆರೋಗ್ಯವಂತ ಮತ್ತು ಸುದೃಢವಾಗಿರಬೇಕು.
ಇ. ಪಶುವಧೆ ಮಾಡುವ ಮೊದಲು ‘ಬಿಸ್ಮಿಲ್ಲಾಹ’ ಎನ್ನಬೇಕು.
ಈ. ಪಶುವಿನ ಕುತ್ತಿಗೆಯನ್ನು ಕೊಯ್ಯುವಾಗ ಆ ಪ್ರಾಣಿಯ ತಲೆ ಮಕ್ಕಾದ ಕಾಬಾದ ಕಡೆಗೆ ಇರಬೇಕು.
ಉ. ಹರಿತಾದ ಚೂರಿಯಿಂದ ಒಂದೇ ಏಟಿನಲ್ಲಿ ಆ ಪ್ರಾಣಿಯ ಶ್ವಾಸನಾಳ, ರಕ್ತವನ್ನು ಪ್ರವಹಿಸುವ ಧಮನಿಗಳು ಮತ್ತು ಕುತ್ತಿಗೆಯ ನರಗಳನ್ನು ಕತ್ತರಿಸಬೇಕು. ಪೂರ್ಣ ರಕ್ತ ಹರಿದು ಪಶು ಸಾಯಬೇಕು. ರಕ್ತ ‘ಹರಾಮ್’ ಇರುವುದರಿಂದ ಅದು ಪೂರ್ಣ ಹರಿದು ಹೋಗಬೇಕು.
ಊ. ಪಶುವಧೆ ವೇಳೆ ಅದಕ್ಕೆ ವೇದನೆಯಾಗಬಾರದೆಂದು ಮೊದಲೇ ಸ್ಮೃತಿ ತಪ್ಪಿಸುವುದು ನಿಷಿದ್ಧವಾಗಿದೆ.’