ಸಾಧಕರೇ, ನಾಳೆಯ ದಿನ ನಮ್ಮ ಕೈಯಲ್ಲಿಲ್ಲದ ಕಾರಣ ಇಂದಿನ ಸಾಧನೆಯನ್ನು ಇಂದೇ ಮಾಡಿ !

ಪೂ. ಗುರುನಾಥ ದಾಭೋಲಕರ ಇವರ ಅಮೂಲ್ಯ ವಿಚಾರಸಂಪತ್ತು !

(ಪೂ.) ಶ್ರೀ. ಗುರುನಾಥ ದಾಭೋಲಕರ

‘ಅನೇಕ ಸಾಧಕರು, ”ನಾನು ಸಾಧನೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರಯತ್ನಿಸುತ್ತೇನೆ; ಆದರೆ ಅದು ಯಶಸ್ವಿಯಾಗುವುದಿಲ್ಲ’’, ಎಂದು ಹೇಳುತ್ತಿರುತ್ತಾರೆ. ಅನೇಕ ವರ್ಷಗಳ ಕಾಲ ಸಾಧನೆಯನ್ನು ಮಾಡುವ ಸಾಧಕರೂ ಇದನ್ನೇ ಹೇಳುತ್ತಾರೆ, ಆಗ ನನಗೆ ಬಹಳ ಕೆಟ್ಟದೆನಿಸುತ್ತದೆ. ನನ್ನ ಮನಸ್ಸು ಅಂತರ್ಮುಖವಾಗುತ್ತದೆ. ಆ ಸಾಧಕರಿಗಾಗಿ ಈಶ್ವರನ ಚರಣಗಳಲ್ಲಿ ನನ್ನ ಪ್ರಾರ್ಥನೆ ಸಹ ಆಗುತ್ತದೆ. ಈ ಸಮಯದಲ್ಲಿ ನನ್ನ ಗಮನಕ್ಕೆ ಬರುವುದೇನೆಂದರೆ, ‘ಪ್ರಯತ್ನಿಸುತ್ತೇನೆ, ಪ್ರಯತ್ನಿಸುತ್ತೇನೆ’, ಎಂದು ಹೇಳದೇ ಸಾಧಕರು ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡಬೇಕು.’ ನಾವು ಬೆಳಗ್ಗೆ ಏಳುತ್ತೇವೆ ಮತ್ತು ನಮ್ಮ ಆಯೋಜನೆಗನುಸಾರ ಸಾಧನೆಯನ್ನು ಮಾಡಲು ಪ್ರಯತ್ನಿಸುತ್ತೇವೆ; ಆದರೆ ಕೆಲವೊಮ್ಮೆ ಕೊನೆಯ ಸಮಯದಲ್ಲಿ ಬೇರೆ ಸೇವೆ ಬಂದರೆ ನಿಶ್ಚಯಿಸಿದ ಸಾಧನೆಯ ಸಮಯ ಕಳೆದು ಹೋಗುತ್ತದೆ. ಆಗ ಮನಸ್ಸಿನಲ್ಲಿ, ‘ಈಗ ಇರಲಿ, ಮಧ್ಯಾಹ್ನ ನೋಡೋಣ’, ಎಂಬ ವಿಚಾರ ಬರುತ್ತದೆ. ಸಾಧಕರ ಮಧ್ಯಾಹ್ನದ ಸ್ಥಿತಿ ಹೀಗೇ ಇರುತ್ತದೆ. ಸಾಧಕನಿಗೆ, ‘ಈಗ ನಾನು ಬಹಳ ದಣಿದಿದ್ದೇನೆ. ಸಾಯಂಕಾಲ ಖಂಡಿತವಾಗಿಯೂ ಮಾಡುತ್ತೇನೆ’, ಎಂದು ಅನಿಸುತ್ತದೆ. ಹೀಗೆ ಹೇಳುತ್ತಾ ಹೇಳುತ್ತಾ ಸಾಯಂಕಾಲವೂ ಕಳೆದು ಹೋಗುತ್ತದೆ ಮತ್ತು ರಾತ್ರಿ ಬರುತ್ತದೆ. ಸಾಧಕನಿಗೆ ನಿಶ್ಚಯಿಸಿದ ಧ್ಯೇಯದ ನೆನಪಾಗುತ್ತದೆ. ಆಗ ದಿನವಿಡಿ ಬಹಳ ಕಡಿಮೆ ಸಾಧನೆಯಾಗಿರುವುದು ಅವನ ಗಮನಕ್ಕೆ ಬರುತ್ತದೆ. ಆಗ ಅವನು ಪುನಃ ಆರಂಭಿಸಲು ನಿಶ್ಚಯಿಸುತ್ತಾನೆ; ಆದರೆ ‘ನಿದ್ರಾದೇವಿಯು ಸಾಧಕನನ್ನು ಯಾವಾಗ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾಳೋ, ಎಂದು ಅವನಿಗೆ ಗೊತ್ತಾಗುವುದೇ ಇಲ್ಲ. ನಂತರ ಉಪಾಯವಿಲ್ಲದೇ ಅವನು, ‘ಈಗ ಇರಲಿ, ನಾಳೆ ನೋಡೋಣ’, ಎಂದು ಹೇಳುತ್ತಾನೆ. ನನಗೆ ಸಾಧಕರಿಗೆ ಒಂದು ಹೇಳಬೇಕೆನಿಸುತ್ತದೆ, ‘ನಾಳೆ ಎಂದಾದರೂ ಬರುವುದೇ ?’

ಪರಾತ್ಪರ ಗುರು ಡಾ. ಆಠವಲೆಯವರು, ”ನಾಳೆಯ ದಿನ ಮತ್ತೇ ವರ್ತಮಾನದ ದಿನವೇ ಆಗಿರುತ್ತದೆ. ಆದುದರಿಂದ ಈ ನಾಳೆಯ ದಿನ ಎಂದಿಗೂ ನಮ್ಮ ಕೈಯಲ್ಲಿ ಇರುವುದಿಲ್ಲ; ಆದುದರಿಂದ ನಾಳೆ ಬೇಡ, ಆದರೆ ಇಂದೇ ಮತ್ತು ಈಗಲೇ ಸಾಧನೆಯನ್ನು ಆರಂಭಿಸೋಣ’’, ಎಂದು ಹೇಳುತ್ತಾರೆ.

‘ಸಾಧಕನು ”ಪ್ರಯತ್ನಿಸುತ್ತೇನೆ’’, ಎಂದು ಹೇಳುತ್ತಾನೆ. ಆದರೆ ಈ ಪ್ರಯತ್ನವೆಂದರೆ ಲಗಾಮು ಇಲ್ಲದ ಕುದುರೆಯಂತೆ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೋ ಎಂದು ಹೇಳಲು ಬರುವುದಿಲ್ಲ; ಆದುದರಿಂದ ನಾವು ಮನಃಪೂರ್ವಕ ಗುರುದೇವರ ಸ್ಮರಣೆ ಮಾಡಿ ನಿಶ್ಚಯ ಮಾಡೋಣ. ನಂತರ ಪ್ರಯತ್ನಗಳ ‘ಕುದುರೆ’ ಅಲ್ಲ, ಆದರೆ ಖಚಿತವಾಗಿಯೂ ಉಚ್ಚ ನಿಶ್ಚಯವೇ ನಮ್ಮನ್ನು ಅತ್ಯುನ್ನತ ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತದೆ’, ಎಂದು ನನಗೆ ಅನಿಸುತ್ತದೆ. ಪ್ರಯತ್ನ ಅಪೂರ್ಣವಾಗಿದೆ ಮತ್ತು ನಿಶ್ಚಯ ಪರಿಪೂರ್ಣವಾಗಿದೆ.’

– (ಪೂ.) ಶ್ರೀ. ಗುರುನಾಥ ದಾಭೋಲಕರ (ಸನಾತನದ ೪೦ ನೇ ಸಂತರು, ವಯಸ್ಸು ೮೪ ವರ್ಷ) ಸನಾತನ ಆಶ್ರಮ, ದೇವದ, ಪನವೇಲ.