ನಾಮಜಪಿಸುವುದು ಮಹತ್ವದ್ದಾಗಿದೆ !

ಪೂ. (ಪ್ರಾ.) ಕೆ.ವಿ. ಬೆಲಸರೆ

‘ನಾಲಿಗೆಯಿಂದ ‘ರಾಮ ರಾಮ’ ಎಂದು ಹೇಳುವುದನ್ನು ಆರಂಭಿಸಿ, ಮನಸ್ಸಿನ ಕಡೆಗೆ ಗಮನ ಕೊಡಬೇಡಿ. ‘ಮನಸ್ಸು ಏಕಾಗ್ರ ವಾಗುವುದಿಲ್ಲ’, ಎಂಬ ವಿಚಾರವನ್ನೇ ಮಾಡಬೇಡಿ. ಮನಸ್ಸಿಗೆ ಅಗ್ನಿಯ ಸ್ಪರ್ಶವಾಗದಿದ್ದರೂ ದೇಹವು ಸುಡುತ್ತದೆ, ಹಾಗೆಯೇ ಭಗವಂತನ ನಾಮವನ್ನು ಹೇಗೇ ಉಚ್ಚರಿಸಿದರೂ, ಅದು ಅಂತರ್ಮನವನ್ನು ನಿರ್ಮಲ ಮಾಡಿಯೇ ಮಾಡುತ್ತದೆ. ಸದ್ಯ ಮನಸ್ಸು ಏಕಾಗ್ರವಾಗದಿದ್ದರೆ ಚಿಂತೆ ಮಾಡಬೇಡಿ, ನಾಮವನ್ನು ತೆಗೆದು ಕೊಳ್ಳುತ್ತಾ ಇರಿ; ಏಕೆಂದರೆ ಮೂಲದಲ್ಲಿ ಮನಸ್ಸನ್ನು ಏಕಾಗ್ರ ಮಾಡುವುದೇ ನಮ್ಮ ಇಚ್ಛೆ ಆಗಿರುತ್ತದೆ, ಅಲ್ಲವೇ ! ಇಚ್ಛೆ ಇದೆಯೆಂದೇ ನೀವು ನಾಮವನ್ನು ತೆಗೆದುಕೊಳ್ಳುತ್ತಿರುವಿರಿ. ಭಗವಂತನ ವಾಸ ಹೃದಯದಲ್ಲಿರುತ್ತದೆ, ಅವನಿಗೆ ನಮ್ಮ ಹೃದಯದ ಭಾಷೆ ಗೊತ್ತಿದೆ. ನಾವು ಮನಃಪೂರ್ವಕ ನಾಮವನ್ನು ತೆಗೆದುಕೊಳ್ಳಲು ಇಚ್ಛಿಸುತ್ತೇವೆ ಎಂದು ಅವನಿಗೆ ಗೊತ್ತಿದೆ, ಆದರೆ ಮನಸ್ಸು ಏಕಾಗ್ರವಾಗುವುದಿಲ್ಲ, ಹೀಗಿದ್ದರೂ ಅದು ಸಹ ಅವನಿಗೆ ಗೊತ್ತಿದೆ, ಚಿಂತೆ ಮಾಡಬೇಡಿ, ಮನಸ್ಸನ್ನು ಏಕಾಗ್ರಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾತ್ರ ಮಾಡುತ್ತಿರಿ.

ಪರಮಾತ್ಮನು ತನ್ನ ಸಂಪೂರ್ಣ ಶಕ್ತಿಯನ್ನು ಈ ನಾಮದಲ್ಲಿ ಇಟ್ಟಿದ್ದಾನೆ. ನಾಮಜಪಕ್ಕೆ ಯಾವುದೇ ವಿಶಿಷ್ಟ ಸ್ಥಳ-ಕಾಲ-ಸಮಯ ಇವುಗಳ ಆವಶ್ಯಕತೆ ಇಲ್ಲ. ಹಗಲಿರುಳು ರಾಮನಾಮದ ಜಪವನ್ನು ಮಾಡಬೇಕು, ನಿಷಿದ್ಧ ಪಾಪಾಚರಣೆಗಳಿಗೆ ತಾನಾಗಿಯೇ ಅಳಿಗಾಲ ಬರುತ್ತದೆ. ಸದ್ಯ ನಮ್ಮ ಅಂತಃಕರಣ ಮಲಿನವಾಗಿದೆ; ಆದುದರಿಂದ ಅದು ಒಳ್ಳೆಯದೆನಿಸುತ್ತದೆ; ಆದರೆ ಶುದ್ಧಿಯಾದ ಮೇಲೆ ಮಲಿನ ಮಾಡುವ ವಸ್ತುಗಳ ಸೆಳೆತ ಉಳಿಯುವುದೇ ಇಲ್ಲ.’

– ಪೂ. (ಪ್ರಾ.) ಕೆ.ವಿ. ಬೆಲಸರೆ (‘ಪೂ. (ಪ್ರಾ.) ಕೆ.ವಿ. ಬೆಲಸರೆ ಇವರ ಆಧ್ಯಾತ್ಮಿಕ ಸಾಮರ್ಥ್ಯ’ ಈ ಫೇಸ್‌ಬುಕ್‌ನ ಆಧಾರ)