POK Does Not Belong To Pakistan: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ ಭಾಗವಲ್ಲ !

ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯದಲ್ಲಿ ಪಾಕಿಸ್ತಾನದ ಸರಕಾರಿ ವಕೀಲರ ಹೇಳಿಕೆ !

ಕವಿ ಅಹ್ಮದ್ ಫರ್ಹಾದ್ ಶಾ

ಇಸ್ಲಾಮಾಬಾದ್ (ಪಾಕಿಸ್ತಾನ) – ಇಲ್ಲಿನ ಉಚ್ಚನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಅಪಹರಣಕ್ಕೊಳಗಾದ ಕವಿ ಮತ್ತು ಪತ್ರಕರ್ತ ಅಹ್ಮದ್ ಫರ್ಹಾದ್ ಶಾ ಅವರನ್ನು ‘ವಿದೇಶಿ ಪ್ರಜೆ’ ಎಂದು ವರ್ಣಿಸಲಾಗಿದೆ. ಈ ಹೇಳಿಕೆಯ ನಂತರ ಈ ಸರ್ಕಾರಿ ವಕೀಲರ ಮೇಲೆ ಟೀಕೆಗಳಾಗುತ್ತಿವೆ.

1. ಫರ್ಹಾದ್ ಶಾ ಖಟ್ಲೆಯನ್ನು ಹೋರಾಡುತ್ತಿರುವ ವಕೀಲ ಇಮಾನ್ ಮಜಾರಿ ಹಾಜಿರ್ ಇವರು ನ್ಯಾಯಾಲಯದ ಹೊರಗೆ ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇದು ಒಳ್ಳೆಯ ಘಟನೆಯಲ್ಲ. ಸರ್ಕಾರ ಕಾಶ್ಮೀರವನ್ನು ಬಾಹ್ಯ ಪ್ರದೇಶ ಎಂದು ಕರೆಯುತ್ತಿದೆ. ಇದರಿಂದ ಒಳ್ಳೆಯ ಸಂದೇಶ ಹೋಗುವುದಿಲ್ಲ ಎಂದಿದ್ದಾರೆ.

2. ಅಹ್ಮದ್ ಫರ್ಹಾದ್ ಶಾ ಸುಮಾರು 16 ದಿನಗಳಿಂದ ನಾಪತ್ತೆಯಾಗಿದ್ದರು. ಅವರ ಕುಟುಂಬವು ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯವನ್ನು ತಲುಪಿದಾಗ, ಅವರು ಧಿರ್ ಕೋರ್ಟ್ ಪೊಲೀಸರ ವಶದಲ್ಲಿದ್ದಾರೆ ಎಂದು ಅವರಿಗೆ ತಿಳಿಸಲಾಯಿತು.

ಸಂಪಾದಕೀಯ ನಿಲುವು

ಯಾವುದು ಸತ್ಯವೋ ಅದನ್ನೇ ಪಾಕಿಸ್ತಾನದ ಸರಕಾರಿ ವಕೀಲರು ಹೇಳಿದ್ದಾರೆ. ಶೀಘ್ರದಲ್ಲೇ ಪಾಕಿಸ್ತಾನ ಸರ್ಕಾರಕ್ಕೆ ಇದನ್ನು ಬಹಿರಂಗವಾಗಿ ಹೇಳಲೇಬೇಕಾಗುತ್ತದೆ !